ಮೋದಿ ನಾಯಕತ್ವಕ್ಕೆ ಮತ್ತೊಂದು ಮನ್ನಣೆ ಮನೋಜ್ ಕುಮಾರ್

KannadaprabhaNewsNetwork |  
Published : Nov 15, 2025, 01:15 AM IST
ಬಿಹಾರ್ ಚುನಾವಣಾ ಫಲಿತಾಂಶ: ಮೋದಿ ನಾಯಕತ್ವಕ್ಕೆ ಮತ್ತೊಂದು ಮನ್ನಣೆ ಮನೋಜ್ ಕುಮಾರ್ | Kannada Prabha

ಸಾರಾಂಶ

ಪಿ.ಪಿ ವೃತ್ತದಲ್ಲಿ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು ಬಿಹಾರದ ಜನತೆ ನಿರೀಕ್ಷೆಗೂ ಮೀರಿ ಎನ್‌ಡಿಎ ಮೈತ್ರಿಯನ್ನು ಬೆಂಬಲಿಸಿರುವುದು ಮೋದಿ ಅವರ ಆಡಳಿತದ ಮೇಲಿನ ನಂಬಿಕೆಗೆ ಸಿಕ್ಕಿರುವ ದೊಡ್ಡ ಪ್ರಮಾಣಪತ್ರ. ಜನರು ಅಭಿವೃದ್ಧಿ ಮತ್ತು ಸ್ಥಿರತೆಯ ಪರವಾಗಿ ಸ್ಪಷ್ಟ ಆದೇಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ನಡೆಸಿದ ಮತ ಚೊರಿ ಆರೋಪಗಳು ಮತ್ತು ಅಪಪ್ರಚಾರಗಳನ್ನು ಬಿಹಾರದ ಜನ ಕಠಿಣವಾಗಿ ತಿರಸ್ಕರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಪ್ರಬಲ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರಸೀಕೆರೆಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸಿದರು. ಈ ಜಯ ದೇಶದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ತಿರುವಾಗಿ ಪರಿಣಮಿಸಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡ ಮನೋಜ್ ಕುಮಾರ್ ಹೇಳಿದರು.ಪಿ.ಪಿ ವೃತ್ತದಲ್ಲಿ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು ಬಿಹಾರದ ಜನತೆ ನಿರೀಕ್ಷೆಗೂ ಮೀರಿ ಎನ್‌ಡಿಎ ಮೈತ್ರಿಯನ್ನು ಬೆಂಬಲಿಸಿರುವುದು ಮೋದಿ ಅವರ ಆಡಳಿತದ ಮೇಲಿನ ನಂಬಿಕೆಗೆ ಸಿಕ್ಕಿರುವ ದೊಡ್ಡ ಪ್ರಮಾಣಪತ್ರ. ಜನರು ಅಭಿವೃದ್ಧಿ ಮತ್ತು ಸ್ಥಿರತೆಯ ಪರವಾಗಿ ಸ್ಪಷ್ಟ ಆದೇಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ನಡೆಸಿದ ಮತ ಚೊರಿ ಆರೋಪಗಳು ಮತ್ತು ಅಪಪ್ರಚಾರಗಳನ್ನು ಬಿಹಾರದ ಜನ ಕಠಿಣವಾಗಿ ತಿರಸ್ಕರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.ಬಿಹಾರದಲ್ಲಿ ಕಂಡುಬಂದ ಜನಮತದ ರೀತಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಪ್ರತಿಫಲಿಸುವ ಸಾಧ್ಯತೆ ಇದೆ. ಕಾರ್ಯಕರ್ತರು ಶ್ರಮಪಟ್ಟು ಸಂಘಟನೆ ಬಲಪಡಿಸಿದರೆ ಅರಸೀಕೆರೆಯಲ್ಲಿಯೇ ಭಾರತೀಯ ಜನತಾ ಪಕ್ಷ ಅಧಿಕಾರದತ್ತ ಬಲವಾಗಿ ಹೆಜ್ಜೆಯಿಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಬಿಹಾರದ ಜಯದ ಪರಿಣಾಮವಾಗಿ ಅರಸೀಕೆರೆಯ ಬಿಜೆಪಿ ಘಟಕದಲ್ಲಿ ಹೊಸ ಉತ್ಸಾಹ ಹರಿದಾಡಿದ್ದು, ಕಾರ್ಯಕರ್ತರು ಪರಸ್ಪರ ಅಭಿನಂದನೆಗಳನ್ನು ಹಂಚಿಕೊಂಡರು. ಬಿಹಾರದ ಫಲಿತಾಂಶ ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳಿಗೆ ಸಿಕ್ಕಿರುವ ಬೆಂಬಲವೆಂದು ಸ್ಥಳೀಯ ನಾಯಕರು ಭಾವನೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಯತೀಶ್, ನಗರ ಮಂಡಲದ ಅಧ್ಯಕ್ಷ ಅವಿನಾಶ್ ನಾಯ್ಡು, ಮಾಜಿ ಅಧ್ಯಕ್ಷ ಪುರುಷೋತ್ತಮ್, ಎಂ.ಡಿ. ಪ್ರಸಾದ್, ಸುಭಾಷ್, ಲೋಕೇಶ್, ಸರ್ವೆ ಚಂದ್ರು, ರಿಲಯನ್ಸ್ ಲೋಕೇಶ್, ಮಂಜುನಾಥ್, ಸುನಿಲ್ ಕುಮಾರ್, ಕಿರಣ್ ಹಾಗೂ ಹಲವಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ