ಗೋ ಹತ್ಯೆ ನಿಷೇಧ ಸೇರಿ ಬ್ರಿಗೇಡ್‌ನಿಂದ ಹಲವು ನಿರ್ಣಯ

KannadaprabhaNewsNetwork |  
Published : Feb 05, 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಗೋ ಮಾತೆ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು. ಕುಂಭಮೇಳದಲ್ಲಿ ಭಾಗಿಯಾಗುವುದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದುಗಳ ಕ್ಷಮೆಯಾಚಿಸಬೇಕು. ವಕ್ಫ್‌ ಬೋರ್ಡ್‌ ವಶಪಡಿಸಿಕೊಂಡ ಜಮೀನುಗಳನ್ನು ರೈತರಿಗೆ ಮರಳಿ ಕೊಟ್ಟು ಅವರ ಹೆಸರಿನಲ್ಲಿ ಪಹಣಿಯಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂಬ ನಿರ್ಣಯಗಳನ್ನು ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆ ತೆಗೆದುಕೊಂಡಿದೆ ಎಂದು ಕ್ರಾಂತಿವೀರ ಬ್ರಿಗೇಡ್ ಕಾರ್ಯಾಧ್ಯಕ್ಷ ಕಾಂತೇಶ ಈಶ್ವರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಗೋ ಮಾತೆ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು. ಕುಂಭಮೇಳದಲ್ಲಿ ಭಾಗಿಯಾಗುವುದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದುಗಳ ಕ್ಷಮೆಯಾಚಿಸಬೇಕು. ವಕ್ಫ್‌ ಬೋರ್ಡ್‌ ವಶಪಡಿಸಿಕೊಂಡ ಜಮೀನುಗಳನ್ನು ರೈತರಿಗೆ ಮರಳಿ ಕೊಟ್ಟು ಅವರ ಹೆಸರಿನಲ್ಲಿ ಪಹಣಿಯಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂಬ ನಿರ್ಣಯಗಳನ್ನು ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆ ತೆಗೆದುಕೊಂಡಿದೆ ಎಂದು ಕ್ರಾಂತಿವೀರ ಬ್ರಿಗೇಡ್ ಕಾರ್ಯಾಧ್ಯಕ್ಷ ಕಾಂತೇಶ ಈಶ್ವರಪ್ಪ ತಿಳಿಸಿದರು.

ಪಟ್ಟಣದ ಗುರುಕೃಪಾ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ಬಳಿ ನಡೆದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ಸಿಎಂ ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ಕುಂಭಮೇಳ ನಡೆಯತ್ತಿದ್ದರೆ, ಬಸವೇಶ್ವರರು ಜನಿಸಿದ ಬಸವನಬಾಗೇವಾಡಿಯಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ದಕ್ಷಿಣ ಭಾರತದಲ್ಲಿ ಇಂದು ಕುಂಭಮೇಳ ನಡೆಯುತ್ತಿದೆ. ಇಂದು ಹಿಂದುಗಳ ಮೇಲೆ ದಬ್ಬಾಳಿಕೆ ಹೆಚ್ಚಾಗಿ ನಡೆಯುತ್ತಿದೆ. ಚಾಮರಾಜಪೇಟದಲ್ಲಿ ಗೋವಿನ ಕೆಚ್ಚಲು ಕತ್ತರಿಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಗೋಮಾತೆ ಸಂರಕ್ಷಣೆಯಾಗಬೇಕಿದೆ. ಅದಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ ಎಂದು ಒತ್ತಾಯಿಸಿದರು.

ಉತ್ತರ ಭಾರತದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಯೋಗಿಜಿ ಅವರು ಬರೋಬ್ಬರಿ ₹75 ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ. ಈ ಕುಂಭಮೇಳದಿಂದ ₹ ೨.೫೦ ಲಕ್ಷ ಕೋಟಿ ಲಾಭವಾಗಿದೆ. ಇದನ್ನು ಖರ್ಗೆಯವರು ಅರ್ಥಮಾಡಿಕೊಳ್ಳಬೇಕೆಂದು ಪರೋಕ್ಷವಾಗಿ ಹೇಳಿದರು. ಅಲ್ಲದೇ, ಹಿಂದುಗಳ ಭಾವನೆಗೆ ಧಕ್ಕೆ ತರಬಾರದು. ಕೂಡಲೇ ಖರ್ಗೆ ಹಿಂದುಗಳ ಕ್ಷಮೆಯಾಚಿಸಬೇಕು. ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆಯು ನನ್ನ ಕೊನೆಯುಸಿರು ಇರುವವರೆಗೂ ಇರಲಿದೆ. ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸು ಮಾಡುವಲ್ಲಿ ಬ್ರಿಗೇಡ್ ಕಾರ್ಯನಿರ್ವಹಿಸಲಿದೆ. ನನ್ನ ತಂದೆ ಕೆ.ಎಸ್.ಈಶ್ವರಪ್ಪ ಅವರು ಸಧ್ಯ ಯಾವುದೇ ಅಧಿಕಾರದಲ್ಲಿ ಇಲ್ಲ. ನನ್ನ ತಂದೆಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಇಷ್ಟೊಂದು ಜನರು ಸೇರಿದ್ದು ಸಂತಸವಾಗಿದೆ. ಎಲ್ಲರಿಗೂ ಶಿರಸಾಷ್ಟಾಂಗ ನಮಸ್ಕಾರ ತಿಳಿಸಿದರು.

----------

ಬಾಕ್ಸ್‌

ಕಾರ್ಯಕ್ರಮದಲ್ಲಿ ಪಲಾವ್‌ ಘಮಲು

ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಫುಲಾವ್‌ ಘಮಲು ಜೋರಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ಫುಲಾವ್‌ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ಸೇರಿದ್ದು, ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಸ್ಥಳದಲ್ಲಿ ೨೭ಕೌಂಟರ್‌ಗಳನ್ನು ತೆರೆಯಲಾಗಿತ್ತು. ಜನರು ಬಾಯಿ ಚಪ್ಪರಿಸಿ ಫುಲಾವ್‌ ರುಚಿ ಸವಿದರು. ಅಲ್ಲದೇ, ಬಸವ ಭವನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾಧು-ಸಂತರಿಗೆ, ಕಾರ್ಯಕರ್ತರಿಗೆ ಚಪಾತಿ, ಪಲ್ಯೆ, ಹಾಲುಗ್ಗಿ, ಅನ್ನ-ಸಾರು ಸುಮಾರು ೨ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ೨೮ ಕ್ವಿಂಟಾಲ್ ಅಕ್ಕಿ ಬಳಕೆಯಾಗಿದ್ದು, ಅಂದಾಜು ೨೫ ಸಾವಿರ ಜನತೆ ಊಟ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಡ್ಯ, ಸೋಲಾಪುರ, ಸುರಪುರ, ವಿಜಯಪುರ, ಬಾಗಲಕೋಟ ಜಿಲ್ಲೆ ಸೇರಿದಂತೆ ಸೇರಿದಂತೆ ವಿವಿಧೆಡೆಗಳಿಂದ ಜನರು ಬಂದಿದ್ದರು ಎಂದು ಕಾಂತೇಶ ಈಶ್ವರಪ್ಪ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!