ಡಿಸಿಸಿ ಸಾಲಕ್ಕೆ ಶೀಘ್ರ ವ್ಯವಸ್ಥೆ

KannadaprabhaNewsNetwork |  
Published : Feb 05, 2025, 12:34 AM IST
4ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ಧಗ್ರಾ ಸಂಸ್ಥೆಯಿಂದ ಗ್ರಾಮದ ಕೆರೆ ಅಭಿವೃದ್ದಿಗೆ ಗುದ್ದಲಿ ಪೂಜೆ ಮಾಡಿದ ಶಾಸಕ ನಾರಾಯಣಸ್ವಾಮಿ. | Kannada Prabha

ಸಾರಾಂಶ

ಡಿಸಿಸಿ ಬ್ಯಾಂಕಿನ ವತಿಯಿಂದ ರೈತರು,ಮಹಿಳೆಯರಿಗೆ ಬಡ್ಡಿ ಇಲ್ಲದೆ ಸಾಲ ಕೊಡಲಾಗುತ್ತಿತ್ತು, ಆದರೆ ಬ್ಯಾಂಕಿನ ಚುನಾವಣೆ ನಡೆಯದ ಕಾರಣ ಸಾಲ ವಿತರಣೆಗೆ ತೊಂದರೆಯಾಗಿದೆ. ಇಷ್ಟರಲ್ಲೆ ಮತ್ತೆ ಸಾಲ ಸೌಲಭ್ಯಗಳ ಕೊಡುವೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಧಗ್ರಾ ಯೋಜನೆ ಗ್ರಾಮೀಣರ ಬದುಕಿಗೆ ಆಶ್ರಯವಾಗಿದೆ

.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ನಡುವೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸಾಲ ನೀಡಿ ಅವರನ್ನು ಸ್ವಾವಲಂಬಿಗಳಾಗಲು ಉತ್ತೇಜನೆ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಹುಲಿಬೆಲೆ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹೀರೆಕೆರೆ ಕೆರೆ ಅಭಿವೃದ್ಧಿ ಸಮಿತಿ ಸಂಯುಕ್ತಾಶ್ರಯದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಗ್ರಾಮದ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಮೀಟರ್ ಬಡ್ಡಿ ದರದಲ್ಲಿ ರೈತರನ್ನು ಶೋಷಣೆ ಮಾಡುತ್ತಿರುವುದರಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ ಎಂದರು.

ಡಿಸಿಸಿಯಿಂದ ಸಾಲ: ಭರವಸೆ

ಡಿಸಿಸಿ ಬ್ಯಾಂಕಿನ ವತಿಯಿಂದ ರೈತರು,ಮಹಿಳೆಯರಿಗೆ ಬಡ್ಡಿ ಇಲ್ಲದೆ ಸಾಲ ಕೊಡಲಾಗುತ್ತಿತ್ತು, ಆದರೆ ಬ್ಯಾಂಕಿನ ಚುನಾವಣೆ ನಡೆಯದ ಕಾರಣ ಸಾಲ ವಿತರಣೆಗೆ ತೊಂದರೆಯಾಗಿದೆ. ಇಷ್ಟರಲ್ಲೆ ಮತ್ತೆ ಸಾಲ ಸೌಲಭ್ಯಗಳ ಕೊಡುವೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಧಗ್ರಾ ಯೋಜನೆ ಗ್ರಾಮೀಣರ ಬದುಕಿಗೆ ಆಶ್ರಯವಾಗಿದೆ. ಬ್ಯಾಂಕಿಗಿಂತಲೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿದೆ ಇದಲ್ಲದೆ ಹಲವು ಸಮಾಜ ಸೇವೆಯಲ್ಲಿಯೂ ತೊಡಗಿದೆ. ಇಂತಹ ಸಂಸ್ಥೆಯಲ್ಲಿ ಮತ್ತಷ್ಟು ಉತ್ತೇಜಿಸಬೇಕು ಎಂದರು.

ಹುಲಿಬೆಲೆ ಗ್ರಾಮದ ಕೆರೆಯನ್ನು ಧಗ್ರಾ ಸಂಸ್ಥೆ ಅಭಿವೃದ್ಧಿಗೆ ಮುಂದಾಗಿರುವುದನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕೆಂದರಲ್ಲದೆ ಹುಲಿಬೆಲೆ ಗ್ರಾಪಂ. ಹೊಸ ಕಟ್ಟಡ ನಿರ್ಮಾಣಕ್ಕೆ ೪೦ ಲಕ್ಷ ರು.ಗಳನ್ನು ಮಂಜೂರು ಮಾಡಲಾಗಿದೆ ಗ್ರಾಮಸ್ಥರ ಕೋರಿಕೆಯಂತೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

ಉಪಕಾರ ಮಾಡಿವರನ್ನು ಬೆಂಬಲಿಸಿ

ಆದರೆ ಚುನಾವಣೆ ಬಂದಾಗ ಗ್ರಾಮಕ್ಕೆ ಅನುಕೂಲ ಮಾಡಿಕೊಟ್ಟವರನ್ನು ಸ್ಮರಿಸುವುದಿಲ್ಲ. ಈ ಪ್ರವೃತ್ತಿಯನ್ನು ಕೈಬಿಟ್ಟು ಉಪಕಾರ ಮಾಡಿದವರನ್ನು ಎಂದಿಗೂ ಕೈಬಿಡದೆ ಮೇಲೆತ್ತಬೇಕೆಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಉಷಾಬಾಬು, ವಿಎಸ್‌ಎಸ್‌ಎನ್ ಅಧ್ಯಕ್ಷ ಮಂಜುನಾಥಗೌಡ, ಭೂ ಬ್ಯಾಂಕಿನ ಮಾಜಿ ಅಧ್ಯಕ್ಷ ಎಚ್.ಕೆ. ನಾರಾಯಣಸ್ವಾಮಿ, ಬಿ. ವೆಂಕಟೇಶ್, ಸುಹೇಲ್, ರಾಮಕೃಷ್ಣ, ನಿರ್ಮಿತಿ ಕೇಂದ್ರದ ಅಶ್ವಿನ್ ಕುಮಾರ್ ಇತರರು ಇದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ