ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಅಭಿವೃದ್ಧಿ ಪಡಿಸಿದ ಕೆರೆಯನ್ನು ಗ್ರಾಪಂಗೆ ಹಸ್ತಾಂತರಿಸುವುದು ಹಾಗೂ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರಹೆಗಡೆ ಜನ್ಮದಿನದ ಅಂಗವಾಗಿ ಹಲವು ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತರ್ಜಲ ಮಟ್ಟ ಉಳಿಸಬೇಕು, ಪ್ರಾಣಿ ಪಕ್ಷಿಗಳು ಜನ ಜಾನುವಾರುಗಳಿಗೆ ನೀರು ಸಿಗಬೇಕು, ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ನೀರಿನ ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ ಗ್ರಾಮದಲ್ಲಿರುವ ಕೆರೆಗಳನ್ನು ಯೋಜನೆಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ 46ಕ್ಕೂ ಹೆಚ್ಚು ಕೆರೆಗಳ ಹೂಳೆತ್ತುವ ಕೆಲಸ ಮಾಡಲಾಗಿದೆ. ಕಿರುಗಾವಲು ಗ್ರಾಮದಲ್ಲಿ ರೈತರು, ಕೆರೆ ಅಭಿವೃದ್ಧಿ ಸಮಿತಿ, ಗ್ರಾಪಂ ಸಹಕಾರದೊಂದಿಗೆ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಗ್ರಾಪಂಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಮಹದೇವು ಮಾತನಾಡಿದರು. ಗ್ರಾಮದ ಹಲವು ಹಿರಿಯ ಮುಖಂಡರನ್ನು ಅಭಿನಂದಿಸಿ ಗೌರವಿಸಲಾಯಿತು. ಇದೇ ವೇಳೆ ರಾ.ಪಂ.ಅಧ್ಯಕ್ಷೆ ಇನಿಯತ್ ಕಾತೂನ್, ಅಭಿವೃದ್ಧಿ ಅಧಿಕಾರಿ ಹರಿಶಂಕರ್, ಯೋಜನೆ ತಾಲೂಕು ನಿರ್ದೇಶಕ ಲೋಕೇಶ್, ಕೆರೆ ಸಮಿತಿ ಅಧ್ಯಕ್ಷ ಮಹೇಶ್, ಮೇಲ್ವಿಚಾರಕರಾದ ಶ್ರೀಶೈಲಾ, ನಾಗರಾಜು ಹಾಗೂ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.ಡಾ.ವೀರೇಂದ್ರ ಹೆಗ್ಗಡೆ ಅವರ 78ನೇ ಹುಟ್ಟುಹಬ್ಬ ಆಚರಣೆ
ಶ್ರೀರಂಗಪಟ್ಟಣ:ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ 78ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಆದಿನಾಥನಿಗೆ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ನವಜೀವನ ಜನಜಾಗೃತಿ ವೇದಿಕೆಯಿಂದ ನಡೆದ ಕಾರ್ಯಕ್ರಮವನ್ನು ಪುರಸಭೆ ಸದಸ್ಯ ಕೃಷ್ಣಪ್ಪ ಉದ್ಘಾಟಿಸಿ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರು ನಿರಂತರವಾಗಿ ಸಾಮಾಜಿಕ ಸೇವೆ ಮಾಡುವ ಮೂಲಕ ಸಾವಿರಾರು ದೇವಾಲಯಗಳ ಜೀರ್ಣೋದ್ಧಾರ ಮಾಡಿ ಲಕ್ಷಾಂತರ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.ಈ ವೇಳೆ 2000ನೇ ಮಧ್ಯವರ್ಜನ ಶಿಬಿರದ ಅಧ್ಯಕ್ಷ ಅಭಿಷೇಕ್, ಸಮಾಜ ಸೇವಕಿ ಆಶಾಲತಾ ಪುಟ್ಟೇಗೌಡ, ರೈತ ಮುಖಂಡ ಚಂದಗಾಲು ಶಿವಣ್ಣ, ಜನಜಾಗೃತಿ ಸದಸ್ಯ ಎಚ್.ಡಿ.ಮಹದೇವು, ಪುರಸಭೆ ಮಾಜಿ ಅಧ್ಯಕ್ಷೆ ಶೀಲಾನಂಜುಂಡಯ್ಯ, ಪುರಸಭೆ ಸದಸ್ಯೆ ನಳಿನಮ್ಮ, ಗಾಯಿತ್ರಿದೇವಿ, ಸಂಸ್ಥೆ ಯೋಜನಾಧಿಕಾರಿ ಗಣಪತಿಭಟ್, ಮೇಲ್ವಿಚಾರಕರಾದ ಪವನ್ ಕುಮಾರ್, ಭಾಗ್ಯಲಕ್ಷ್ಮಿ, ಸುಶೀಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.