ವೈಭವದ ಮಹಾರಥೋತ್ಸವ ಸಂಪನ್ನ

KannadaprabhaNewsNetwork |  
Published : Feb 19, 2026, 03:00 AM IST
ಉಡುಪಿ ಮಾರ್ಪಳ್ಳಿಯ ದೇವಳದಲ್ಲಿ ‍ವಾರ್ಷಿಕ ಮಹಾರಥೋತ್ಸವ ವೈಭವದಿಂದ ಸಂಪನ್ನಗೊಂಡಿತು | Kannada Prabha

ಸಾರಾಂಶ

ಇಲ್ಲಿನ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವ ಮಂಗಳವಾರ ಊರು ಹಾಗೂ ಪರಊರ ಸಾವಿರಾರು ಭಕ್ತಾಭಿಮಾನಿಗಳ ಭಾಗವಹಿಸುವಿಕೆಯಲ್ಲಿ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.

ಉಡುಪಿ: ಇಲ್ಲಿನ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವ ಮಂಗಳವಾರ ಊರು ಹಾಗೂ ಪರಊರ ಸಾವಿರಾರು ಭಕ್ತಾಭಿಮಾನಿಗಳ ಭಾಗವಹಿಸುವಿಕೆಯಲ್ಲಿ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.

14 ರಿಂದ 17 ವರೆಗೆ ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೊರಂಗ್ರಪಾಡಿ ಕೆ.ಪಿ.ಚಂದ್ರಕಾಂತ ತಂತ್ರಿ ಅವರ ನೇತೃತ್ವದಲ್ಲಿ ವಾರ್ಷಿಕ ಮಹೋತ್ಸವದ ಧಾರ್ಮಿಕ ಅನುಷ್ಠಾನಗಳು ನಡೆಯಿತು.

ಮಂಗಳವಾರ ಬೆಳಿಗ್ಗೆ ಗಣಹೋಮ, ನವಕ ಪ್ರಧಾನ ಹೋಮ, ರಥಾಧಿವಾಸ ಹೋಮ, ಮಹಾಪೂಜೆ, ರಥ ಶುದ್ದಿ, ರಥೋತ್ಸವ, ಮಧ್ಯಾಹ್ನ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರ್ಪಳ್ಳಿ ಇವರಿಂದ ಯಕ್ಷಗಾನ ಕವಿರತ್ನ ಕಾಳಿದಾಸ ಪ್ರದರ್ಶನಗೊಂಡಿತು. ಬಳಿಕ ಉತ್ಸವ ಬಲಿ, ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಶೆಟ್ಟಿ ಕಂಬಳಮನೆ, ಸದಸ್ಯರಾದ ಲಕ್ಷ್ಮೀನಾರಾಯಣ ರಾವ್, ಗರೋಡಿಮನೆ ಶೇಖರ್ ಸುವರ್ಣ, ಪಾಂಡುರಂಗ ನಾಯ್ಕ, ಉಮೇಶ್ ಮಾರ್ಪಳ್ಳಿ, ಶಂಕರ ಆಚಾರ್ಯ, ವಿಜಯಲಕ್ಷ್ಮಿ, ಎಂ. ಚಂದ್ರಾವತಿ, ದೇವಳದ ಪರ್ಯಾಯ ಅರ್ಚಕರಾದ ಅನಂತ ಉಪಾಧ್ಯಾಯ, ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ. ಗೋಪಾಲಕೃಷ್ಣ ಬಳ್ಳಾಲ್ ಚಿಟ್ಪಾಡಿ ಬೀಡು, ಗೌರವ ಪ್ರಧಾನ ಕಾರ್ಯದರ್ಶಿ ತ್ರಿಷಾ ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ಶಂಕರ್ ಜಿ. ದೇವಾಡಿಗ, ನಾಗರಾಜ ಉಪಾಧ್ಯಾಯ ಹಾಗೂ ಜೀರ್ಣೋದ್ಧಾರ ಸಮಿತಿಯ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊರಗರು ಮುಖ್ಯ ವಾಹಿನಿಗೆ ಬರಲು ಪೂರ್ಣ ಸಹಕಾರ: ಗಂಟಿಹೊಳೆ
ಧರ್ಮದ ಹಾದಿಯಲ್ಲಿ ಸಾಗಿದರೆ ಪುಣ್ಯದ ಫಲ