ಮರಾಠಾ ಮಂಡಳ: ಮೋರೆಗೆ ಹ್ಯಾಟ್ರಿಕ್‌ ಜಯ

KannadaprabhaNewsNetwork |  
Published : Jul 07, 2026, 02:30 AM IST
ಧಾರವಾಡದ ಮರಾಠಾ ಮಂಡಳದ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲವು ಸಾಧಿಸಿ ಮನೋಹರ ಮೋರೆ ಅವರಿಗೆ ಚುನಾವಣಾಧಿಕಾರಿ ಪ್ರಮಾಣ ಪತ್ರ ವಿತರಿಸಿದರು | Kannada Prabha

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿಯ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಚುನಾವಣೆಯಲ್ಲಿ ಮನೋಹರ ಮೋರೆ ಬಣ ಗೆಲುವು ದಾಖಲಿಸಿದ್ದು, ಅಧ್ಯಕ್ಷರಾಗಿ ಮನೋಹರ ಮೋರೆ 3ನೇ ಬಾರಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಧಾರವಾಡ:

ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿಯ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಚುನಾವಣೆಯಲ್ಲಿ ಮನೋಹರ ಮೋರೆ ಬಣ ಗೆಲುವು ದಾಖಲಿಸಿದ್ದು, ಅಧ್ಯಕ್ಷರಾಗಿ ಮನೋಹರ ಮೋರೆ 3ನೇ ಬಾರಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಮನೋಹರ ಮೋರೆ (1741) ಅವರು ಪ್ರತಿಸ್ಪರ್ಧಿ ಮಂಜುನಾಥ ಕದಂ (1109) ಅವರನ್ನು 632 ಮತಗಳ ಅಂತರದಿಂದ ಪರಾಭವಗೊಳಿಸಿದರು. ಉಪಾಧ್ಯಕ್ಷರಾಗಿ ಪ್ರಕಾಶ ಘಾಟಗೆ ಆಯ್ಕೆಯಾಗಿದ್ದಾರೆ. ಪ್ರಕಾಶ ಘಾಟಗೆ (1694) ಮತ ಪಡೆದು ಎದುರಾಳಿ ಅನಿಲ್ ಕರಾಡೆ (೧೧೫೮) ಅವರನ್ನು 536 ಮತಗಳ ಅಂತರದಿಂದ ಸೋಲುಣಿಸಿದರು.

ಇನ್ನು 13 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲೂ ಮನೋಹರ ಮೋರೆ ಬಣದ ಎಲ್ಲರೂ ಜಯ ದಾಖಲಿಸಿದರು. ಈಶ್ವರ ಪಾಟೀಲ, ಆನಂದ ಜಾಧವ, ರಾಜು ಬಿರಜೆನವರ, ಶಂಕರ ಶೆಳಕೆ, ನವೀನ ಕದಂ, ಬಸವರಾಜ ಘಾಟಗೆ, ವಿಜಯ ಭೋಸಲೆ, ಮಹೇಶ ಶಿಂಧೆ, ವಿನಯ ಬಾಬರ್, ವಿನಾಯಕ ಸಾವಂತ, ಮಂಜುನಾಥ ಜಾಧವ, ಸುನೀಲ್ ಮೋರೆ, ವಿಠ್ಠಲ ಪಾಟೀಲ ಪ್ರತಿಸ್ಪರ್ಧಿಗಳಿಂದ ಹೆಚ್ಚಿನ ಮತಗಳನ್ನು ಪಡೆಯುವಮೂಲಕ ಗೆಲುವು ಸಾಧಿಸಿದರು.

ಭಾನುವಾರ ತಡರಾತ್ರಿ 1ರ ವರೆಗೂ ಮತ ಎಣಿಕೆ ಕಾರ್ಯ ನಡೆದಿದ್ದು, ಚುನಾವಣಾ ಅಧಿಕಾರಿ, ನ್ಯಾಯವಾದಿ ಗಿರೀಶ ಹೋಳಿ ಫಲಿತಾಂಶ ಘೋಷಿಸಿದರು. ಫಲಿತಾಂಶ ಹೊರಬರುತ್ತಿದ್ದಂತೆಯೇ ಮನೋಹರ ಮೋರೆ ಬಣದ ಬೆಂಬಲಿಗರು ಮರಾಠಾ ಮಂಡಳದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು. ಸಿಹಿ ತಿನ್ನಿಸಿ ಗುಲಾಲ್ ಎರಚಿ ಸಂಭ್ರಮಿಸಿದರು. ಮರಾಠ ಮಂಡಳದ ಚುನಾವಣೆಯಲ್ಲಿ 4344 ಮತದಾರರಲ್ಲಿ 2800 ಮತದಾರರು ಮತ ಚಲಾಯಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಭಯ ಗುರುಗಳು ಅದ್ಭುತ ರತ್ನಗಳು: ಮಲ್ಲಿಕಾರ್ಜುನ ಶ್ರೀ
ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ಸಿಗಲಿ: ಕಲ್ಲಯ್ಯಜ್ಜನವರು