ಶಿಕ್ಷಣ ಹಕ್ಕು ಜಾಗೃತಿಗಾಗಿ ಪಾದಯಾತ್ರೆ

KannadaprabhaNewsNetwork |  
Published : Feb 26, 2026, 02:30 AM IST
25 ರೋಣ 1. ಮಂತ್ರಾಲಯವರೆಗೆ ಜನಜಾಗೃತಿ ಅಭಿಯಾನಕ್ಕಾಗಿ ಪಾದಯಾತ್ರೆ ಕೈಗೊಂಡಿರುವ ಗಾಂಧಿವೇಷದಾರಿ, ಪರಿಸರ, ಶಿಕ್ಷಣ ಪ್ರೇಮಿ ಮುತ್ತಣ್ಣ ತಿರ್ಲಾಪೂರ ಅವರನ್ನು ರೋಣದಲ್ಲಿ ಭವ್ಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ನಂಜನಗೂಡಿನ ರಾಘವೇಂದ್ರಸ್ವಾಮಿ ಮಠದಿಂದ ಮಂಗಳವಾರ ಗಾಂಧಿ ವೇಷದಾರಿ ಮುತ್ತಣ್ಣ ತಿರ್ಲಾಪೂರ ಪಾದಯಾತ್ರೆ ಪ್ರಾರಂಭಿಸಿ ಸಂಜೆ ರೋಣ ಪಟ್ಟಣ ತಲುಪಿದರು.

ರೋಣ: ಮಹಾತ್ಮ ಗಾಂಧಿಜಿ ಅವರ ವೇಷಧಾರಿಯಾಗಿ ಪರಿಸರ, ನೆಲ, ಜಲ, ಆರೋಗ್ಯ ರಕ್ಷಣೆ ಕುರಿತು ಪಾದಯಾತ್ರೆ ಮೂಲಕ ಕರ್ನಾಟಕದಾದ್ಯಂತ ಜನಮನ ಸೆಳೆದಿರುವ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಮುತ್ತಣ್ಣ ತಿರ್ಲಾಪೂರ ಮಕ್ಕಳ‌ ಶಿಕ್ಷಣ ಹಕ್ಕು ಕುರಿತು ಜನಜಾಗೃತಿ ಮೂಡಿಸಲು ನರಗುಂದ ತಾಲೂಕಿನಿಂದ ಆಂಧ್ರಪ್ರದೇಶದ ಮಂತ್ರಾಲಯದವರೆಗೆ 260 ಕಿಮೀ ಪಾದಯಾತ್ರೆ ಕೈಗೊಂಡಿದ್ದಾರೆ.

ರಾಘವೇಂದ್ರಸ್ವಾಮಿಯವರ ವರ್ಧಂತಿ ಮಹೋತ್ಸವ ಅಂಗವಾಗಿ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ನಂಜನಗೂಡಿನ ರಾಘವೇಂದ್ರಸ್ವಾಮಿ ಮಠದಿಂದ ಮಂಗಳವಾರ ಗಾಂಧಿ ವೇಷದಾರಿ ಮುತ್ತಣ್ಣ ತಿರ್ಲಾಪೂರ ಪಾದಯಾತ್ರೆ ಪ್ರಾರಂಭಿಸಿ ಸಂಜೆ ರೋಣ ಪಟ್ಟಣ ತಲುಪಿದರು.

ಮತ್ತೆ ಬುಧವಾರ ಬೆಳಗ್ಗೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಕೈಗೊಂಡು ಜಿಗಳೂರ ಬಳಿ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಮಕ್ಕಳ‌‌ ಶಿಕ್ಷದ ಹಕ್ಕು ಮತ್ತು ಪರಿಸರ ಉಳಿಸಿ, ಬೆಳೆಸಿ ಕುರಿತು ಜಾಗೃತಿ ಮೂಡಿಸಿದರು.

ಪಟ್ಟಣದಲ್ಲಿ ಮುತ್ತಣ್ಣ ತಿರ್ಲಾಪೂರ ಅವರನ್ನು ವೀರೇಶ ಸಂಕನಗೌಡ್ರ, ವೀರಣ್ಣ ಗದಗಿನ, ರಾಘವೇಂದ್ರ ಮಡಿವಾಳರ, ಗಿರಿಶ ಕುಲಕರ್ಣಿ, ರಾಜು ಮಾಡಲಗೇರಿ, ಜಗದೀಶ ಭಜಂತ್ರಿ, ಸುನೀಲ ಜಾಲಿಹಾಳ, ಗುರುರಾಜ ಕುಲಕರ್ಣಿ, ರಾಜೇಶ ಕುಲಕರ್ಣಿ ಹಾಗೂ ಜಯ ಗುರುದೇವ ಸತ್ಸಂಗ ಸಮಿತಿ ಹಾಗೂ ಪಟ್ಟಣದ ಜನತೆಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಗದಗ: ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಮಾ. 1ರಂದು ಬೆಳಗ್ಗೆ 11ಕ್ಕೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆಯಲಿದೆ.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಡಾ. ಶಿವರಾಜ ಎಸ್. ತಂಗಡಗಿ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು.ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ರೋಣ ಶಾಸಕ ಜಿ.ಎಸ್.ಪಾಟೀಲ, ಸಂಸದರಾದ ಬಸವರಾಜ ಬೊಮ್ಮಾಯಿ, ಪಿ.ಸಿ. ಗದ್ದಿಗೌಡರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಆಗಮಿಸುವರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಪಾಲ್ಗೊಳ್ಳುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಾಜಿ ಜಯಂತಿ ವೇಳೆ ಗಲಾಟೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ
118ನೇ ದಿನದಲ್ಲಿ ಕಾರ್ಖಾನೆ ಅನಿರ್ದಿಷ್ಟಾವಧಿ ಧರಣಿ