ಮರಿಯಮ್ಮನಹಳ್ಳಿ ಕಲಾವಿದರ ನೆಲೆವೀಡು: ವಿಜಯ ವೆಂಕಟೇಶ್‌

KannadaprabhaNewsNetwork |  
Published : Nov 16, 2024, 12:35 AM IST
ಫೋಟೋವಿವರ- (15ಎಂಎಂಎಚ್‌1) ಮರಿಯಮ್ಮನಹಳ್ಳಿಯ ಶಾಲಾವರಣದಲ್ಲಿ ನಾಣಿಕೇರಿ ಯುವ ಸೇನಾ ಟ್ರಸ್ಟ್ ಹಮ್ಮಿಕೊಂಡ ನಾಣಿಕೇರಿ ಉತ್ಸವವನ್ನು ಹಿರಿಯ ವೈದ್ಯ ಡಾ. ಪಿ. ವಿಜಯವೆಂಕಟೇಶ್‌ ಉದ್ಘಾಟಿಸಿದರು | Kannada Prabha

ಸಾರಾಂಶ

ಮರಿಯಮ್ಮನಹಳ್ಳಿ ಸಾಕಷ್ಟು ಕಲಾವಿದರನ್ನು ಹೊಂದಿದ್ದು, ನಿತ್ಯ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ.

ಮರಿಯಮ್ಮನಹಳ್ಳಿ: ಕಲಾವಿದರ ತವರೂರು ಮರಿಯಮ್ಮನಹಳ್ಳಿ ಸಾಂಸ್ಕೃತಿಕ ರಾಜಧಾನಿಯಾಗಿ ನಾಡಿನಾದ್ಯಂತ ಖ್ಯಾತಿ ಗಳಿಸಿದೆ. ಇಂಥ ಊರಿನಲ್ಲಿ ಜೀವಿಸುತ್ತಿವುದೇ ಪುಣ್ಯ ಎಂದು ಹಿರಿಯ ವೈದ್ಯ ಡಾ.ಪಿ. ವಿಜಯ ವೆಂಕಟೇಶ್‌ ಹೇಳಿದರು.

ಇಲ್ಲಿನ ಶಾಲಾವರಣದಲ್ಲಿ ನಾಣಿಕೇರಿ ಯುವ ಸೇನಾ ಟ್ರಸ್ಟ್ ಹಮ್ಮಿಕೊಂಡ ನಾಣಿಕೇರಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ನಾಣಿಕೆರೆಗೆ ಒಂದು ಇತಿಹಾಸ ಇದೆ. ಅದೇ ರೀತಿಯಲ್ಲಿ ಈಗ ಮರಿಯಮ್ಮನಹಳ್ಳಿಗೂ ಒಂದು ಇತಿಹಾಸ ನಿರ್ಮಾಣವಾಗಿದೆ. ಮರಿಯಮ್ಮನಹಳ್ಳಿ ಸಾಕಷ್ಟು ಕಲಾವಿದರನ್ನು ಹೊಂದಿದ್ದು, ನಿತ್ಯ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಸಾಂಸ್ಕೃತಿಕ ಪರಿಸರದ ವಾತಾವರಣದ ಊರಲ್ಲಿ ನಾನು ಅನೇಕ ವರ್ಷಗಳ ಕಾಲ ವೈದ್ಯಕೀಯ ಸೇವೆ ನೀಡಿರುವುದಕ್ಕೆ ಹೆಮ್ಮೆ ಇದೆ ಎಂದು ಅವರು ಹೇಳಿದರು.

ಹೃದ್ರೋಗ ತಜ್ಞ ಡಾ.ಸುಬ್ರಮಣ್ಯ ಅಂಬ್ಯುಲೆನ್ಸ್ ನ ಲೋಕಾರ್ಪಣೆಗೊಳಿಸಿ ಮಾತನಾಡಿ, ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಆರೋಗ್ಯರಕ್ಷಕ ಇದ್ದಂತೆ. ಹೃದಯಾಘಾತ, ಪಾರ್ಶ್ವವಾಯು, ರಕ್ತದೊತ್ತಡಗಳಂತಹ ಸಮಯದಲ್ಲಿ ಆ್ಯಂಬುಲೆನ್ಸ್ ಅವಶ್ಯಕತೆಯ ತೀವ್ರತೆ ಇರುತ್ತದೆ. ನಮ್ಮ ಒತ್ತಡಗಳ ಮಧ್ಯೆ ಸಮಾಜಮುಖಿ ಸೇವೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಇಲ್ಲಿನ ವೈದ್ಯ ಡಾ.ಜೆ.ಎಂ.ಸೋಮೇಶ್ವರ ಮಾತನಾಡಿ, ಯುವಕರು ಸಂಘ-ಸಂಸ್ಥೆಗಳ ಮೂಲಕ ಸಮಾಜದಲ್ಲಿ ಉತ್ತಮ ಕೆಲಸದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ನಂದಿಬಂಡಿ ಗ್ರಾಪಂ ಸದಸ್ಯ ಸೋಮಪ್ಪ ಉಪ್ಪಾರ ಸಭೆಯಲ್ಲಿ ಮಾತನಾಡಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಿರಿಯ ಕಲಾವಿದೆ ಮಾತಾ ಬಿ.ಮಂಜಮ್ಮ ಜೋಗಿತಿ, ಹಿರಿಯ ಕಲಾವಿದರಾದ ಡಾ.ಕೆ. ನಾಗರತ್ನಮ್ಮ, ಎಸ್. ರೇಣುಕಾ, ಬಿ. ಶಾರದ, ಸಿ. ಗಂಗಮ್ಮ, ಪ.ಪಂ.ಅಧ್ಯಕ್ಷ ಆದಿಮನಿ ಹುಸೇನ ಬಾಷ, ಪಂಚಗ್ಯಾರಂಟಿಗಳ ಅಧ್ಯಕ್ಷ ಕುರಿಶಿವಮೂರ್ತಿ, ಜಿಪಂ ಮಾಜಿ ಸದಸ್ಯ ಗೋವಿಂದರ ಪರುಶುರಾಮ, ಸ್ಥಳೀಯ ಮುಖಂಡರಾದ ಚಿದ್ರಿ ಸತೀಶ್‌, ರೋಗಣ್ಣನವರ್‌ ಮಂಜುನಾಥ, ರಮೇಶ್‌, ಬಿ. ಸುರೇಶ್‌, ತಳವಾರ್ ಸೋಮಪ್ಪ, ಬಸವರಾಜ, ಪಪಂ ಸದಸ್ಯರಾದ ಬೆಣಕಲ್ ಬಾಷ, ಬಿ.ಎಂ.ಎಸ್. ರಾಜೀವ್, ಎಸ್‌. ಮಹಮ್ಮದ್‌, ವಿ. ಅಶ್ವಿನಿ ನಾಗರಾಜ, ಮರಡಿ ಸುರೇಶ, ಪರಶುರಾಮ, ನಾಣಿಕೆರೆ ಯುವ ಸೇನಾ ಟ್ರಸ್ಟ್‌ನ ಅಧ್ಯಕ್ಷ ರಹೀಮಾನ್ ಸೇರಿದಂತೆ ಟ್ರಸ್ಟ್‌ನ ಪಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವೈದ್ಯರಾದ ಡಾ.ಪಿ.ವಿಜಯವೆಂಕಟೇಶ್‌, ಡಾ. ಸುಬ್ರಮಣ್ಯ, ಡಾ.ಜೆ.ಎಂ. ಸೊಮೇಶ್ವರ, ಡಾ.ಸುಹಾಸಿನಿ, ಡಾ. ನಿರಂಜನ, ಡಾ. ರಾಘವೇಂದ್ರ, ಡಾ. ಮಂಜುಳಾ, ಡಾ. ಪ್ರಸನ್ನ, ಡಾ. ಮನೋಜ್ ಸೇರಿದಂತೆ ಇತರೆ ವೈದ್ಯರನ್ನು ಹಾಗೂ ಕಲಾವಿದರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.

ಮಹಾಂತೇಶ್‌ ನೆಲ್ಲುಕುದಿರಿ ಮತ್ತು ತಂಡ ಪ್ರಾಥಿಸಿದರು. ಪಿ. ರಾಮಚಂದ್ರ ಸ್ವಾಗತಿಸಿ, ನಿರೂಪಿಸಿದರು.

ಕಾರ್ಯಕ್ರಮದ ನಂತರ ಹಾಸ್ಯಕಲಾವಿಸ ಸಂಜುಬಸ್ಸಯ್ಯ ತಂಡದಿಂದ ಹಾಸ್ಯಕಾರ್ಯಕ್ರಮ ಸೇರಿದಂತೆ ವಿವಿಧ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ