ಶ್ರೀ ಲಕ್ಷ್ಮಿನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿಯ ಜೋಡಿ ರಥೋತ್ಸವದ ದೇವತಾ ಕಾರ್ಯಗಳು ಯುಗಾದಿ ಪಾಡ್ಯದಂದು, ಕಿನ್ನಾಳದ ಗಂಗೂರ ಮನೆತನದ ಆಗಮದ ವೇದವ್ಯಾಸಾಚಾರ್ ಹಲಗೇರಿಯವರ ಪೌರೋಹಿತ್ಯದಲ್ಲಿ ಯುಗಾದಿಯಂದು ವಲ್ಮಿಕ ಪೂಜೆ ನಡೆದ ನಂತರ ಕಳಶ ಸ್ಥಾಪನೆಯೊಂದಿಗೆ ಆರಂಭಗೊಂಡಿವೆ.
ಮರಿಯಮ್ಮನಹಳ್ಳಿ: ಪಟ್ಟಣದ ಆರಾಧ್ಯ ದೇವರುಗಳಾದ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿಯ ಜೋಡಿ ರಥೋತ್ಸವದ ದೇವತಾ ಕಾರ್ಯಗಳು ಯುಗಾದಿ ಪಾಡ್ಯದಂದು, ಕಿನ್ನಾಳದ ಗಂಗೂರ ಮನೆತನದ ಆಗಮದ ವೇದವ್ಯಾಸಾಚಾರ್ ಹಲಗೇರಿಯವರ ಪೌರೋಹಿತ್ಯದಲ್ಲಿ ಯುಗಾದಿಯಂದು ವಲ್ಮಿಕ ಪೂಜೆ ನಡೆದ ನಂತರ ಕಳಶ ಸ್ಥಾಪನೆಯೊಂದಿಗೆ ಆರಂಭಗೊಂಡಿವೆ.
ಸಂಜೆ ಪಂಚಾಂಗಶ್ರವಣ, ಹೋಮ, ಕಳಶ ಸ್ಥಾಪನೆಗಳು ನಡೆದವು. ಶುಕ್ರವಾರ ಧ್ವಜಾರೋಹಣ ನಡೆಯಿತು. ಕಂಕಣಧಾರಣೆ ನಡೆದಿವೆ. ಮಾರ್ಚ್ 24 ರಂದು ಮಂಗಳವಾರ ರಂದು ಹನುಮಂತೋತ್ಸವ (ನಿಶ್ಚಿತಾರ್ಥ), 25 ರಂದು ಬುಧವಾರ ಗರುಡೋತ್ಸವ (ದೇವರಲಗ್ನ), 26 ರಂದು ಗುರುವಾರ ಬಿಳಿ ಆನೆ ಉತ್ಸವ, ಮಾ.27 ಶುಕ್ರವಾರ ನವಮಿಯಂದು ಜೋಡಿ ರಥೋತ್ಸವ, 28ರಂದು ಚೈತ್ರ ಶುದ್ಧ ದಶಮಿಯಂದು ವಸಂತೋತ್ಸವ (ಓಕುಳಿ), ಪೂರ್ಣಾಹುತಿ, ಕಂಕಣ ವಿಸರ್ಜನೆ ನಡೆಯಲಿವೆ.
ಕಿನ್ನಾಳದ ಆಗಮದವರೆಂದೇ ಹೆಸರಾದ ಗಂಗೂರ ಮನೆತನದವರು ಹಲವು ತಲೆಮಾರುಗಳಿಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ರಥೋತ್ಸವ ಕಾರ್ಯ ಕ್ರಮಗಳು ಇವರ ಪೌರೋಹಿತ್ಯದಲ್ಲೇ ನಡೆಯುವವು. ಸುಮಾರು10-12 ಜನ ಪುರೋಹಿತರ ನೇತೃತ್ವದಲ್ಲಿ ಪ್ರತಿದಿನ ಹೋಮ, ಹವನಗಳು ಚೈತ್ರ ಶುದ್ಧ ಪಾಡ್ಯದಿ೦ದ ಆರಂಭಗೊಂಡು ಚೈತ್ರ ಶುದ್ಧ ದಶಮಿಯವರೆಗೂ ನಡೆಯಲಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.