ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ: ₹ 36 ಲಕ್ಷದ ಉಳಿತಾಯ ಬಜೆಟ್

KannadaprabhaNewsNetwork |  
Published : Mar 28, 2025, 12:31 AM IST
ಫೋಟೋವಿವರ- (26ಎಂಎಂಎಚ್1)  ಮರಿಯಮ್ಮನಹಳ್ಳಿ ಪ.ಪಂ. ಕಚೇರಿಯಲ್ಲಿ ಬುಧವಾರ ನಡೆದ 2025-​26ನೇ ಸಾಲಿನ ಆಯವ್ಯಯ ಸಭೆಯಲ್ಲಿ ಪ.ಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷ ಮತ್ತು ಕೆಲ ಸದಸ್ಯರು ವಾಗ್ವಾದ ನಡೆಸಿದರು | Kannada Prabha

ಸಾರಾಂಶ

ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ 2025-​26ನೇ ಸಾಲಿನ ಆಯವ್ಯಯ ಸಭೆಯಲ್ಲಿ ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷ ಒಟ್ಟು 36 ಲಕ್ಷದ 59 ಸಾವಿರ 138 ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

ಪಪಂ 2025-​26ನೇ ಸಾಲಿನ ಆಯವ್ಯಯ ಸಭೆ । ಅಧ್ಯಕ್ಷ-ಕೆಲ ಸದಸ್ಯರ ಮಧ್ಯೆ ವಾಗ್ವಾದಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ 2025-​26ನೇ ಸಾಲಿನ ಆಯವ್ಯಯ ಸಭೆಯಲ್ಲಿ ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷ ಒಟ್ಟು 36 ಲಕ್ಷದ 59 ಸಾವಿರ 138 ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

2025-26ನೇ ಸಾಲಿನ ಎಸ್‌ಎಫ್‌ಸಿ ವೇತನ ಅನುದಾನದಿಂದ 246.38 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಚಕ್ತಿ ಅನುದಾನದಿಂದ ₹176 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿಯಿಂದ ₹6 ಲಕ್ಷ, ಎಸ್‌ಎಫ್‌ಸಿ ಸಿಎಸ್, ಸಿಎಸ್ಪಿ ಅನುದಾನದಿಂದ ₹9 ಲಕ್ಷ, ಎಸ್ಎಫ್ಸಿ ಟಿಎಸ್‌ಪಿ ಅನುದಾನದಿಂದ ₹4 ಲಕ್ಷ, 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಿಂದ ₹127 ಲಕ್ಷ, ಎಸ್ಎಫ್‌ಸಿ ಕುಡಿಯುವ ನೀರು ಅನುದಾನದಿಂದ ₹5.0 ಲಕ್ಷ, ಖಾತಾ ಬದಲಾವಣೆಯಿಂದ ₹8 ಲಕ್ಷ, ಆಸ್ತಿ ತೆರಿಗೆ ವಸೂಲಾತಿಯಿಂದ ₹53.06 ಲಕ್ಷ, ನೀರಿನ ಶುಲ್ಕದಿಂದ ₹14.10 ಲಕ್ಷ, ಹೊಸ ನಳ ಸಂಪರ್ಕ ಶುಲ್ಕದಿಂದ ₹2 ಲಕ್ಷ, ಮಳಿಗೆ ಬಾಡಿಗೆಯಿಂದ ₹20.88ಲಕ್ಷ, ಕಟ್ಟಡ ಪರವಾನಿಗೆ ಶುಲ್ಕದಿಂದ ₹6 ಲಕ್ಷ, ವ್ಯಾಪಾರ ಪರವಾನಗಿ, ನೆಲಬಾಡಿಗೆ ಜುಲ್ಮಾನೆ, ಬ್ಯಾಂಕ್ ಖಾತೆಗಳಿಂದ ಬರುವ ಬಡ್ಡಿ ಸೇರಿ ನಾನಾ ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದೆ.

ಖರ್ಚು:

ಕಟ್ಡಡ ಮತ್ತು ನಾಗರಿಕ ವಿನ್ಯಾಸಗಳು ಮತ್ತು ಭೂಮಿ ಖರೀದಿ, ಒಳಚರಂಡಿ ನಿರ್ಮಾಣ, ಪಾರ್ಕು ಮತ್ತು ಉದ್ಯಾನವನದ ಅಭಿವೃದ್ದಿ, ರಸ್ತೆಗಳು, ಕಲ್ಲು ಹಾಸುಗಳು, ಪಾದಚಾರಿ ಮಾರ್ಗಗಳು, ಸಿಸಿ ರಸ್ತೆ ಮತ್ತು ರಸ್ತೆ ಬದಿ ಚರಂಡಿ ನಿರ್ಮಾಣ, ಭಾರಿವಾಹನಗಳ ಖರೀದಿ, ಲಘು ವಾಹನಗಳ ಖರೀದಿ ಇತರ ಉದ್ದೇಶಗಳಿಗಾಗಿ ₹1 ಕೋಟಿ 27 ಲಕ್ಷ ವೆಚ್ಚಮಾಡಲು ಉದ್ದೇಶಿಸಲಾಗಿದೆ.

ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್ ಲೈನ್ ಅಳವಡಿಕೆಗೆ ₹15 ಲಕ್ಷ ನಿಗದಿಪಡಿಸಲಾಗಿದೆ. 2022-​23ನೇ ಸಾಲಿನಲ್ಲಿ 77.77 ಲಕ್ಷದ ಡಿಪಿಆರ್‌ ಕಾಮಗಾರಿಯು ಹೊಸದಾಗಿ ಟಿಬಿ ಡ್ಯಾಂ ಪಂಪ್ ಹೌಸ್ ನಿಂದ‌ ಪಟ್ಟಣಕ್ಕೆ ಪ್ರತ್ಯೇಕವಾಗಿ ಕುಡಿವ ನೀರಿನ ಕಾಮಗಾರಿ ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ. ಇದಕ್ಕೆ ವಂತಿಗೆಯಾಗಿ 15ನೆ ಹಣಕಾಸು ಅಡಿಯಲ್ಲಿ, ಅಮೃತ್ ​02 ಯೋಜನೆಯಡಿಯಲ್ಲಿ ಕುಡಿವ ನೀರು ಯೋಜನೆ ಅನುಷ್ಠಾನಕ್ಕಾಗಿ ಕ.ನ.ನಿ.ಸಾ ಹಾಗು ಒಳಚರಂಡಿ ಮಂಡಳಿಗೆ 37.20 ವಂತಿಗೆ ಪಾವತಿಸಲಾಗಿದೆ.

2025-​26ನೇ ಸಾಲಿನ ಬಜೆಟ್ ಒಟ್ಟಾರೆ ನಿರೀಕ್ಷಿತ ಆದಾಯಗಳು ₹10.67.32.504 ಲಕ್ಷಗಳಿದ್ದು, ಇದರಲ್ಲಿ ಉದ್ದೇಶಿಸಲಾಗಿರುವ ವೆಚ್ಚ ಭರಿಸಲು ಅಂದಾಜು ₹10.30.73.366 ವೆಚ್ಚಮಾಡಲು ಉದ್ದೇಶಿಸಲಾಗಿದ್ದು, ಒಟ್ಟಾರೆಯಾಗಿ ಬಂದಿರುವ ಆದಾಯದಲ್ಲಿ ಉದ್ದೇಶಿಸಲಾಗಿರುವ ವೆಚ್ಚಗಳನ್ನು ಕಳೆದು 36 ಲಕ್ಷದ 59 ಸಾವಿರ, 138 ರೂ.ಗಳ ಉಳಿತಾಯವಾಗಬಹುದು.ಈ ಸಂದರ್ಭ ಉಪಾಧ್ಯಕ್ಷೆ ಲಕ್ಷ್ಮೀ ಆರ್‌. ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷೆ ಎಲ್‌. ಹುಲಿಗಿಬಾಯಿ ರುದ್ರನಾಯ್ಕ, ಪಪಂ ಮುಖ್ಯಾಧಿಕಾರಿ ಎಂ. ಖಾಜಾ, ಸದಸ್ಯರಾದ ಎಲ್. ವಸಂತ, ಬಿ.ಎಂ.ಎಸ್. ರಾಜೀವ, ಎಸ್. ಮಹಮದ್, ಮರಡಿಸುರೇಶ್, ಪರಶುರಾಮ, ಕೆ.ಮಂಜುನಾಥ, ಜ್ಯೋತಿ ಸುರೇಶ, ರೇಣುಕಮ್ಮ, ಪೂಜ ಅಶ್ವಿನಿ, ಕುಸುಮ ರಮೇಶ, ಲಕ್ಷ್ಮಿಬಾಯಿ, ವಿಜಯಬಾಯಿ, ಲಕ್ಷ್ಮಿಬಾಯಿ, ಸುಮಂಗಳಮ್ಮ ಸೇರಿದಂತೆ ಪಪಂ ಸಿಬ್ಬಂದಿ ಉಪಸ್ಥಿತರಿದ್ದರು.

ವಾಗ್ವಾದ:

ಪಪಂ ಅಧ್ಯಕ್ಷ ಆದಿಮನಿ ಹುಸೇನ್‌ ಭಾಷ​ ಮತ್ತು ಸದಸ್ಯರ ನಡುವೆ, ವಾರದ ಸಂತೆ ಹರಾಜು, ದಿನದ ಮಾರುಕಟ್ಟೆಯ ಹರಾಜು, ಪರಿಷ್ಕೃತ ಆಸ್ತಿ ತೆರಿಗೆಯ ಕುರಿತ ಚರ್ಚೆಯ ವೇಳೆ ಕೆಲಕಾಲ ವಾಗ್ವಾದ ನಡೆಯಿತು. ಸದಸ್ಯರಾದ ಬಿ.ಎಂ.ಎಸ್‌. ರಾಜೀವ, ಮರಡಿ ಸುರೇಶ್‌, ಮಹಮ್ಮದ್‌, ಪರುಶುರಾಮ ಧ್ವನಿ, ಎಲ್‌. ವಸಂತ, ಪೂಜಾ ಅಶ್ವಿನಿ ನಾಗರಾಜ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!