ಕನ್ನಡಪ್ರಭ ವಾರ್ತೆ ಬೆಳಗಾವಿ
ಅದರಲ್ಲೂ ಮುಖ್ಯ ಮಾರುಕಟ್ಟೆ ಇರುವ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಖಡೇಬಜಾರ್, ಕಾಲೇಜು ರಸ್ತೆಗಳಲ್ಲಿ ಜನರು ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬಕ್ಕೆ ಬೇಕಾದ ಅಗತ್ಯ ಪೂಜಾ ಸಾಮಗ್ರಿ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸುವುದು ಕಂಡುಬಂತು. ಮಾರುಕಟ್ಟೆಯಲ್ಲಿ ಮಳೆಗೆ ಮಾತ್ರವಲ್ಲ; ಫುಟ್‌ಪಾತ್ ಹಾಗೂ ರಸ್ತೆಗಳಲ್ಲೂ ಹಬ್ಬದ ವಸ್ತುಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ.
ಬೆಳಗಾವಿ ನಗರವಷ್ಟೇ ಅಲ್ಲದೆ, ಗ್ರಾಮೀಣ ಭಾಗದಿಂದಲೂ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಜನರು ಅಲಂಕಾರಿಕ ವಸ್ತುಗಳು, ಹಣತೆಗಳು, ಬಣ್ಣ-ಬಣ್ಣದ ರಂಗೋಲಿ ಪುಡಿ, ಶಿವಾಜಿ ಮೂರ್ತಿಗಳು, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಜತೆಗೆ ವೈವಿಧ್ಯಮಯ ವಿನ್ಯಾಸಗಳ ಆಕಾಶಬುಟ್ಟಿಗಳ ಖರೀದಿಗೂ ಗ್ರಾಹಕರು ಮುಗಿಬಿದ್ದಿದ್ದರು.ಹಳೇ ಪಿ.ಬಿ. ರಸ್ತೆ ಮತ್ತು ಕಾಕತಿವೇಸ್ ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ಹೂವು, ಹಣ್ಣು, ಬಾಳೆದಿಂಡಿನ ಮಾರಾಟ ಜೋರಾಗಿತ್ತು. ₹100ಗೆ ಒಂದು ಮಾರು ಚೆಂಡು ಹೂವು, ₹50.ಗೆ 2 ಬಾಳೆದಿಂಡು, ₹100ಗೆ 5 ಕಬ್ಬಿನ ಗೊಣೆ ಮಾರಾಟವಾದವು. ಹೀಗೆ ಹಣ್ಣುಗಳ ದರವೂ ಗಗನಕುಸುಮವಾಗಿದೆ. ವಾರದ ಹಿಂದಷ್ಟೇ ₹100 ಇದ್ದ ಕೆ.ಜಿ ಸೇಬುಹಣ್ಣಿನ ದರ ಭಾನುವಾರ ಏಕಾಏಕಿ ₹160ರಿಂದ ₹200ಗೆ ಏರಿಕೆ ಕಂಡಿದೆ. ₹160 ಇದ್ದ ದಾಳಿಂಬೆ ದರವು ಈಗ ₹250 ಗೆ ಏರಿಕೆಯಾಗಿದೆ. ಮತ್ತೆ ಕೆಲವು ವ್ಯಾಪಾರಿಗಳು ಐದು ತರಹದ ಹಣ್ಣುಗಳ ಒಂದು ಗುಚ್ಛ ಮಾಡಿ ಅದನ್ನು ₹150ರಿಂದ ₹200ರ ವರೆಗೆ ದರ ನಿಗದಿ ಮಾಡಿದ್ದಾರೆ.
ನಗರದಲ್ಲಿರುವ ಎಲ್ಲ ಮಾಲ್‌ಗಳಲ್ಲಿ, ಮೊಬೈಲ್ ಹಾಗೂ ಬಟ್ಟೆ ಮಳಿಗೆಗಳಲ್ಲೂ ಜನಜಂಗುಳಿ ಕಂಡುಬಂತು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿ ಮಾಡುವವರು, ಮೊಬೈಲ್ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ದ್ವಿಚಕ್ರ ವಾಹನ ಹಾಗೂ ಕಾರ್ ಶೋ ರೂಮ್‌ಗಳಲ್ಲಿ ಕೂಡ ಅಪಾರ ಜನ ವ್ಯಾಪಾರ ಕುದುರಿಸಿಕೊಂಡರು. ಗ್ರಾಹಕರನ್ನು ಆಕರ್ಷಿಸಲು ಎಲೆಕ್ಟ್ರಾನಿಕ್ ವಸ್ತುಗಳು, ವಾಹನಗಳು ಹಾಗೂ ಬಟ್ಟೆಗಳ ಮೇಲೆ ರಿಯಾಯಿತಿಗಳನ್ನೂ ಘೋಷಣೆ ಮಾಡಲಾಗಿದ್ದು, ಖರೀದಿಗೆ ಉತ್ಸಾಹ ಬಂದಂತಾಗಿದೆ.
ಟ್ರಾಫಿಕ್ ಕಿರಿಕಿರಿ: