ಮೂಲ್ಕಿ: ಮಾರ್ಕ್ಸ್ ಮೇನಿಯಾದೊಳಗೆ ಸಿಲುಕಿ ಮಕ್ಕಳಿಗೆ ನೈತಿಕ, ಮೌಖಿಕ, ಸಂಸ್ಕಾರದ ಶಿಕ್ಷಣ ಕೊಡುವಲ್ಲಿ ಸೋತಿದ್ದೇವೆ. ಐದನೇ ಕ್ಲಾಸಿನ ಮಕ್ಕಳು ಲವ್ ಲೆಟರ್ ಬರೆಯುವ ಕಾಲದಲ್ಲಿ ನಾವಿದ್ದೇವೆ. ಶಾಲೆಗಳಲ್ಲಿ ಒಬ್ಬ ಕೌನ್ಸಲರ್‌ನ್ನು ಇಡುವ ಸ್ಥಿತಿ ಬಂದಿದ್ದು,. ನಾವು ನಡೆಸುತ್ತಿರುವುದು ಶಾಲೆಗಳನ್ನಾ, ಮಾನಸಿಕ ರೋಗಿಗಳ ಹುಚ್ಚಾಸ್ಪತ್ರೆಯನ್ನಾ? ಎಂದು ಯೋಚಿಸಬೇಕಾಗಿದೆ ಎಂದು ಖ್ಯಾತ ಚಿಂತಕ ಪವನ್ ಕಿರಣ್‌ಕೆರೆ ಹೇಳಿದರು.
ತುಂಬ ಪೆಟ್ಟು ತಿಂದ ಕಲ್ಲು ಶಿಲ್ಪವಾಗುತ್ತದೆ. ಇಲ್ಲದಿದ್ದರೆ ಕಂಡವರ ಕಾಲ್ತುಳಿತಕ್ಕೆ ಸಿಲುಕುವ ಕಲ್ಲಾಗುತ್ತದೆ. ರಾತ್ರಿಯಿಂದ ಬೆಳಿಗ್ಗಿನವರೆಗೆ ಸಾಧನೆ ಮಾಡಲಿಕ್ಕಾಗುವುದಿಲ್ಲ. ಆತ್ಮಾಭಿಮಾನ ಹುಟ್ಟಿಸದ ಶಿಕ್ಷಣ ಪ್ರಯೋಜನ ಇಲ್ಲ ಎಂದು ಪವನ್ ಕಿರಣ್‌ಕೆರೆ ಹೇಳಿದರು.