ಕನ್ನಡಪ್ರಭ ವಾರ್ತೆ ಸರಗೂರು
ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳು, ಸಂಸ್ಕಾರ, ಮಾನವೀಯತೆ ಹಾಗೂ ಆದರ್ಶಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಪ್ರೊ. ನಂಜುಂಡಸ್ವಾಮಿ ಹೇಳಿದರು.ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಮೈಸೂರು ಜಿಪಂ, ತಾಲೂಕು ಆಡಳಿತ, ತಾಪಂ, ಪ. ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಾಯಕ ಸಮುದಾಯದ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮಲೆ ಮಹದೇಶ್ವರರು ಸಂಚರಿಸಿದ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆ ಸರಗೂರು ಭಾಗಕ್ಕಿದೆ. ಮೈಸೂರು ಭಾಗದ ನಾಯಕ ಸಮುದಾಯದ ಭಕ್ತರಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಅವಕಾಶ ಹಾಗೂ ಆದ್ಯತೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣವು ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡ ಭಾರತದ ಮಹತ್ವದ ಆದಿಕಾವ್ಯವಾಗಿದೆ. ಇದು ಕೇವಲ ಧಾರ್ಮಿಕ ಗ್ರಂಥವಲ್ಲ; ಭಾರತೀಯ ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಮಹಾನ್ ಕೃತಿಯಾಗಿದೆ. ಭಾರತೀಯ ಸಮಾಜದ ಬದುಕಿಗೆ ಮಾರ್ಗದರ್ಶನ ನೀಡುವ ಅನೇಕ ಆದರ್ಶಗಳು ರಾಮಾಯಣದಲ್ಲಿವೆ ಎಂದು ತಿಳಿಸಿದರು.
ಸೌಮ್ಯ ಅನಿಲ್ ಚಿಕ್ಕಮಾದು ಮಾತನಾಡಿ, ನಾಯಕ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಶಿಕ್ಷಣವೇ ವ್ಯಕ್ತಿಯ ಬದುಕನ್ನು ಬದಲಿಸುವ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಎಚ್.ಡಿ. ಕೋಟೆ, ಸರಗೂರು ತಾಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸರಗೂರಿನ ನಿವೃತ್ತ ಪ್ರಾಧ್ಯಾಪಕ ಮತ್ತು ಕನ್ನಡ ರಾಜ್ಯೋತ್ಸವ ಪುರಸ್ಕೃತರು, ಸಾಹಿತಿ ಸ.ಚ. ಮಹದೇವನಾಯಕ ಅವರಿಗೆ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.
ಅದ್ದೂರಿ ಮೆರವಣಿಗೆಗೆ ಜನಸಾಗರ ವಾಲ್ಮೀಕಿ ಜಯಂತಿ ಅಂಗವಾಗಿ ಪಟ್ಟಣದ ಕೆಇಬಿ ಸಮೀಪದಿಂದ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಬೆಳ್ಳಿರಥದಲ್ಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮಾಜಿ ಶಾಸಕ ಚಿಕ್ಕಣ್ಣ ಮೆರವಣಿಗೆಗೆ ಚಾಲನೆ ನೀಡಿದರು.ನಾಯಕ ಸಮಾಜದ ಎಚ್.ಡಿ. ಕೋಟೆ ತಾಲೂಕು ಅಧ್ಯಕ್ಷ ಎಂ.ಸಿ. ದೊಡ್ಡನಾಯಕ, ಸರಗೂರು ತಾಲೂಕು ಅಧ್ಯಕ್ಷ ಬಸವನಾಯಕ, ಪಪಂ ಸದಸ್ಯರಾದ ಶ್ರೀನಿವಾಸ್, ಜಯಪ್ರಕಾಶ್, ಮೈಮುಲ್ ಈರೇಗೌಡ, ಬಸವರಾಜು, ರವಿ, ಉದ್ಯಮಿ ನಿಂಗರಾಜು, ಶಂಭುಲಿಂಗನಾಯಕ, ನಾಗರಾಜು, ಮರಿತಿಮ್ಮನಾಯಕ, ಸಾಹಿತಿ ಸಾ.ಚ. ಮಹದೇವನಾಯಕ, ತಹಸೀಲ್ದಾರ್ ಶ್ರೀನಿವಾಸ್, ಮೋಹನ್ ಕುಮಾರಿ, ತಾಪಂ ಇಒ ಪ್ರೇಮಕುಮಾರ್, ರವಿಚಂದ್ರ, ಬಿಇಒ ಸಿ.ಎನ್. ರಾಜು, ಮಹೇಶ್, ನಾಗರಾಜು, ಪ್ರಭಾಕರ ನಾಯಕ, ವೇಣುಗೋಪಾಲ್, ಸೋಮನಾಯಕ, ನಾಯಕ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಜವರನಾಯಕ, ಸಿ. ಬಸವರಾಜು, ಚಿಕ್ಕಮಾದು, ಅಭಿಮಾನಿ ಬಳಗದ ರಾಜನಾಯಕ, ವಕೀಲರ ಸಂಘದ ಅಧ್ಯಕ್ಷ ನಾಗೇಶ್, ಸಿಂಡಿಕೆಟ್ ಸದಸ್ಯ ನಾಗರಾಜು, ಶಿವಪ್ಪ, ರಾಜಣ್ಣ, ನವೀನ್ ಕುಮಾರ್, ನಾಗನಾಯಕ, ಸರಗೂರು ನಾಯಕ ಸಂಘದ ಅಧ್ಯಕ್ಷ ಬಸವನಾಯಕ, ಗೌರವಾಧ್ಯಕ್ಷ ಅಂಕನಾಯಕ, ಉಪಾಧ್ಯಕ್ಷ ಶ್ರೀನಿವಾಸ್, ಸಾಗರೆ ಜಯಪ್ಪ, ಪ್ರಧಾನ ಕಾರ್ಯದರ್ಶಿ ಎಂ. ರವಿಕುಮಾರ್, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಎಸ್.ಎ. ನಾಗೇಂದ್ರ, ಪ್ರಕಾಶ್, ಬೆಟ್ಟನಾಯಕ, ಎಸ್. ಬಸವನಾಯಕ, ರವಿಕುಮಾರ್, ಕೆ. ಅಂಕನಾಯಕ, ದೊಡ್ಡರಾಜು, ಸತ್ಯರಾಜ್, ಶೆಂಕರ್, ಗೋವಿಂದನಾಯಕ, ರಾಮನಾಯಕ, ಸುರೇಶ್, ಮುಖಂಡರು, ಅಧಿಕಾರಿಗಳು ಇದ್ದರು.