ದಾಬಸ್‍ಪೇಟೆ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿ ಹೊಸ ದಾಂಪತ್ಯಕ್ಕೆ ಕಾಲಿಡುವ ಮುನ್ನವೇ ಯುವತಿ ಪೋಷಕರು ಮದುಮಗಳನ್ನ ಕರೆದುಕೊಂಡು ಹೋಗಿದ್ದಕ್ಕೆ ಮದುಮಗ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವತಿ ತನುಶ್ರೀ ಪೋಷಕರ ವಿರುದ್ಧ ಹೇಳಿಕೆ ನೀಡಿದ್ದಾಳೆಂದು ಯುವತಿ ಪೋಷಕರು ಆಕೆಗೆ ಹೊಡೆದು, ಹದಿನೈದು ದಿನಗಳ ಬಳಿಕ ಸತೀಶನೊಂದಿಗೆ ಚಿಕ್ಕಮಗಳೂರಿನಲ್ಲಿ ಮತ್ತೊಮ್ಮೆ ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡುವುದಾಗಿ ಹೇಳಿ ಠಾಣೆಯಲ್ಲಿ ಹೈಡ್ರಾಮಾ ನಡೆಸಿ ಕೊನೆಗೆ ಪೋಷಕರು ರಾಜಿ ಮಾಡಿ ಪೋಷಕರೊಂದಿಗೆ ಯುವತಿಯನ್ನು ಕಳುಹಿಸಿದ್ದಾರೆ.
ಮದುಮಗ ಸತೀಶ್ ತನ್ನ ಹೆಂಡತಿಯನ್ನು ಸಂಪರ್ಕಿಸಲು ಸಾಧ್ಯವಾಗದೇ ಮನನೊಂದು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಮಧುಮಗ ಸತೀಶ್ ಪ್ರತಿಕ್ರಿಯಿಸಿ ನಮ್ಮ ಪ್ರೀತಿಗೆ ನನ್ನ ಹೆಂಡತಿ ಮನೆಯವರು ಅಡ್ಡಿಯಾಗಿದ್ದಾರೆ. ಕರೆ ಮಾಡಿದರೆ ನನ್ನ ಹೆಂಡತಿ ಅಪ್ಪ ಪೋನ್ ರಿಸೀವ್ ಮಾಡಿ ನನ್ನ ಮಗಳನ್ನು ಮರೆತುಬಿಡು, ಅವಳಿಗೆ ಬೇರೆ ಮದುವೆ ಮಾಡುತ್ತೇವೆ. ಮತ್ತೆ ಏನಾದರೂ ನನ್ನ ಮಗಳು ಬೇಕೆಂದು ಬಂದರೆ ನಿನ್ನನ್ನು ಬದಕಲು ಬಿಡುವುದಿಲ್ಲವೆಂದು ಬೆದರಿಕೆ ಹಾಕುತ್ತಾರೆ. ನನಗೆ ನನ್ನ ಹೆಂಡತಿ ಬೇಕು, ಪೊಲೀಸರು ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.
ಪೋಟೋ 3 : ಮನನೊಂದು ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತೀಶ್.