ಕನ್ನಡಪ್ರಭ ವಾರ್ತೆ ಕಮಲನಗರ
ತಾಲೂಕಿನಾದ್ಯಂತ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಶುಕ್ರವಾರ ಸಂಜೆ ಭವ್ಯ ಮೆರವಣಿಗೆಯ ಮೂಲಕ ಸಾಮೂಹಿಕ ವಿಸರ್ಜನೆ ಮಾಡಲಾಯಿತು. ಒಂದೇ ದಿನ 10ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.ಸಾಮೂಹಿಕ ಗಣೇಶ ವಿಸರ್ಜನೆ ಪ್ರಮುಖ ವೃತ್ತಗಳಲ್ಲಿ ನಗರದ ವಿವಿಧ ಬಡಾವಣೆಗಳಿಂದ 10ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಾಹನಗಳಲ್ಲಿ ಮೆರವಣಿಗೆ ನಡೆಸಿದ ಭಕ್ತರು, ಕೊನೆಗೆ ಹೊರಂಡಿ ಕ್ರಾಸ್ ಹತ್ತಿರ ಹೊಂಡದಲ್ಲಿ ಸಮಾವೇಶಗೊಂಡರು. ಮೆರವಣಿಗೆಯಲ್ಲಿ ಬೃಹತ್ ಹಾಗೂ ಸುಂದರ ವಿಭಿನ್ನ ಗಣೇಶ ಮೂರ್ತಿಗಳು ನೋಡುಗರ ಕಣ್ಮನ ಸೆಳೆದವು.
ಡಾ.ಚನ್ನಬಸವ ಕಾಲೋನಿಯಿಂದ ಆರಂಭವಾದ ಭವ್ಯ ಮೆರವಣಿಗೆ ಅಲ್ಲಮ ಪ್ರಭು ವೃತ್ತ ಮೂಲಕ ಅತಿಥಿ ಗೃಹ , ಬಸವೇಶ್ವರ ವೃತ್ತ, ಗ್ರಾಮ ಪಂಚಾಯತ, ಹನುಮಾನ ಮಂದಿರ, ಕಮಲನಗರ-ಸೋನಾಳ ಮುಖ್ಯ ರಸ್ತೆ ಮೂಲಕ ತಲುಪಿತು. ಮೆರವಣಿಗೆಯಲ್ಲಿ ಕೇಸರಿ ಧ್ವಜ ರಾರಾಜಿಸಿತು. ಹೊರಂಡಿ ಕ್ರಾಸ್ ಹತ್ತಿರ ಹೊಂಡ ಬಳಿ ಬಂದು ಸೇರಿದ ಎಲ್ಲಾ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಮೆರವಣಿಗೆಯಲ್ಲಿ ಅನೇಕ ಭಕ್ತರು ಗಣೇಶ ಮೂರ್ತಿಗಳೊಂದಿಗೆ ನೂರಾರು ಯುವಕರು ಭಾಗವಹಿಸಿದ್ದರು. ಯುವಕರ ನೃತ್ಯ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಬಳಿಕ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಹೊರಂಡಿ ಕ್ರಾಸ್ ಹತ್ತಿರ ಹೊಂಡದಲ್ಲಿ ಎಲ್ಲಾ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ವ್ಯಾಪಾರಿ ಗಣೇಶ ಮಂಡಳಿಯ ಅಧ್ಯಕ್ಷ ಶಿವಾನಂದ ವಡ್ಡೆ, ಶಿವರಾಜ ಜುಲ್ಫೆ, ಗಿರಿ ಚಿಮ್ಮಾ, ಅಮರ ಮಹಾಜನ, ಬಾಲಾಜಿ ತೆಲಂಗೆ, ಸುರ್ಯಕಾಂತ ಶಿವಣಕರ, ಸಂಜೀವ ನಿಟ್ಟುರೆ, ಚಂದ್ರಕಾಂತ ಸಂಗಮೆ, ಸಂತೋಷ ಸೋಲಾಪುರೆ, ಮಹಾದೇವ ಬಿರಾದಾರ, ನಾಗೇಶ ಪತ್ರೆ, ಸುಭಾಷ ಗಾಯಕವಾಡ, ರಾಜಕುಮಾರ ಗಾಯಕವಾಡ, ರವಿ ಕಾರಬಾರಿ, ಶೇಖರ ಮಹಾಜನ , ಸಂಜು ತಲವಾಡೆ, ವಿನೋದ ಬಿರಾದಾರ, ಶರಣ ಸುಲಾಕೆ, ಚೇತನ ಸಂಗಣ್ಣಾ, ಹಿಂದು ಗಣೇಶ ಮಂಡಳದ ಅಧ್ಯಕ್ಷ ಹರೀಶ ಬಿರಾದಾರ, ರತಿಕ ದಾನಾ, ಒಮಸಾಯಿ ತಗಾರೆ, ಅಮರ ಮಹಾಜನ , ಚನ್ನಬಸವ ಬಿರಾದಾರ, ಸಾಗರ ಮಿರ್ಚೆ, ಮಲ್ಲಿಕಾರ್ಜುನ ಮಹಾಜನ, ವೈಜಿನಾಥ ಚಿಮ್ಮಾ, ಅಶ್ವಿನ್ ನವಾಡೆ ಇದ್ದರು. ಸಿಪಿಐ ಅಮರೆಪ್ಪಾ ಶಿವಬಲ ಇವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಚಂದ್ರಶೇಖರ್ ನಿರ್ಣೇ ನೇತೃತ್ವದಲ್ಲಿ ಪೊಲಿಸ್ ಬಂದೊಬಸ್ತ್ ಮಾಡಲಾಯಿತು.