ಇಲಾಖೆಯಿಂದಲೇ ಮರಗಳ ಮಾರಣ ಹೋಮ

KannadaprabhaNewsNetwork |  
Published : Jul 12, 2026, 02:45 AM IST
ಜೆಸಿಬಿ ಮೂಲಕ ತೆಂಗಿನ ಮರಗಳ ತೆರವು. | Kannada Prabha

ಸಾರಾಂಶ

ತಾಲೂಕಿನ ಮುತುಗದಹಳ್ಳಿ ಸರ್ವೇ ನಂಬರ್‌ 31ರ ಅರಣ್ಯ ಭೂಮಿ 10 ಎಕರೆ ಪ್ರದೇಶದಲ್ಲಿ 20 ವರ್ಷಗಳಿಂದ ಬೆಳೆಯಲಾಗಿದ್ದ ಗಿಡ ಮರಗಳ ಮಾರಣ ಹೋಮವನ್ನು ಸ್ವತಃ ಅರಣ್ಯ ಇಲಾಖೆಯೇ ಮುಂದೆ ನಿಂತು ಮಾಡಿರುವುದಕ್ಕೆ ಪರಿಸರ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ತಾಲೂಕಿನ ಮುತುಗದಹಳ್ಳಿ ಸರ್ವೇ ನಂಬರ್‌ 31ರ ಅರಣ್ಯ ಭೂಮಿ 10 ಎಕರೆ ಪ್ರದೇಶದಲ್ಲಿ 20 ವರ್ಷಗಳಿಂದ ಬೆಳೆಯಲಾಗಿದ್ದ ಗಿಡ ಮರಗಳ ಮಾರಣ ಹೋಮವನ್ನು ಸ್ವತಃ ಅರಣ್ಯ ಇಲಾಖೆಯೇ ಮುಂದೆ ನಿಂತು ಮಾಡಿರುವುದಕ್ಕೆ ಪರಿಸರ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ನ್ಯಾಯಾಲಯ, ಸರ್ಕಾರ ಆದೇಶ ಇಟ್ಟುಕೊಂಡು ಬಂದು ತೋಟವನ್ನು ಹಾಳು ಮಾಡುವ ಬದಲು ಅದೇ ತೋಟವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಇಲಾಖೆಗೆ ಆದಾಯ ಸೃಷ್ಠಿ ಮಾಡುವುದನ್ನು ಬಿಟ್ಟು ಬೆಳೆದು ನಿಂತ ಮರಗಳನ್ನು ಕಡಿಯುವುದು ಯಾವ ಸೀಮೆಯ ಅರಣ್ಯಶಾಸ್ತ್ರ ಅಧ್ಯಯನವೋ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರೈತರು ಅಧಿಕಾರಿಗಳ ಕೈಮುಗಿದು, ಕಾಲಿಗೆ ಬಿದ್ದು ಅತ್ತರೂ ಕರಗದ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳ ದಂಡು ಕಟ್ಟಿಕೊಂಡು ಬಮದು ಸಾಗುವಳಿದಾರನ್ನು ಒಕ್ಕೆಲೆಬಿಸಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ ಆದರೆ ರೈತರು ಕಳೆದ ಎರಡ್ಮೂರು ದಶಕಗಳಿಂದ ರಕ್ತ ಬೆವರಿನಂತೆ ಸುರಿಸಿ ಬೆಳೆಸಿದ್ದ ಸಾವಿರಾರು ಅಡಿಕೆ ಹಾಗೂ ತೆಂಗಿನ ಮರಗಳನ್ನು ನೆಲಸಮಗೊಳಿಸಿರುವುದು ಯಾವ ಪುರಷಾರ್ಥಕ್ಕೆ ಎನ್ನುವುದು ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಬರದ ಛಾಯೇ ಇದ್ದು 10 ಎಕರೆಯಲ್ಲಿ ಸಮೃದ್ಧವಾಗಿದ್ದ ಮರಗಳನ್ನು ಕಡಿಯುವ ಬದಲು ಉಳಿಸಿಕೊಂಡಿದ್ದರೆ ಅಲ್ಲಿ ಸರ್ಕಾರದಿಂದ ಗೆಸ್ಟಹೌಸ ಮಾಡಿ ಬಾಡಿಗೆ ನೀಡಿದ್ದರೂ ಸಹ ಹೊಸ ಆದಾಯದ ಮೂಲವಾಗುತ್ತಿತ್ತು. ಅಥವಾ ಸರ್ಕಾರಿ ಬಂಗಲೆ ನಿರ್ಮಿಸಿದ್ದರೆ ರಾಜಕಾರಣಿಗಳು ಅಧಿಕಾರಿಗಳು ಬಂದಾಗಿ ತಂಗಲು ಅವಕಾಶವಿತ್ತು ಅದನ್ನು ಹಾಳು ಮಾಡಿ ಆದ ಲಾಭವೇನು ಎಂದು ಪ್ರಶ್ನಿಸಿದ್ದಾರೆ.

ಈ ಘಟನೆಯ ಹಿಂದೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಸುಮಾರು 40 ವರ್ಷಗಳ ಹಿಂದೆಯೇ ಇದು ಅರಣ್ಯ ಪ್ರದೇಶ ಎಂದು ತಿಳಿದಿದ್ದರೂ ಸಹ, ಅಂದಿನ ಅಧಿಕಾರಿಗಳು 1982 ರ ಅವಧಿಯಲ್ಲಿ ರೈತರಿಗೆ ಸಾಗುವಳಿ ಮಂಜೂರಾತಿ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಅಂದು ಮಂಜೂರಾತಿ ನೀಡಿ, ಇಂದು ಅದೇ ಜಾಗವನ್ನು "ಅರಣ್ಯ ಪ್ರದೇಶ " ಎಂದು ಘೋಷಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿಸಿದ್ದಾರೆ. ರೈತರು ಅರಣ್ಯ ಇಲಾಖೆಯ ಒಂದು ಮರ ಕಡಿದರು ಸಹ ಅವರನ್ನು ಶಿಕ್ಷೆಗೆ ಗುರಿಪಡಿಸುವ ಇಲಾಖೆಯೇ ಮುಂದೆ ನಿಂತು ಸಾವಿರಾರು ಮರಗಳನ್ನು ಕಡಿದಿರುವುದು ಎಲ್ಲಿಯ ನ್ಯಾಯವಾಗಿದೆ ಎಂದು ಝೆನ್‌ ಜಿ ಹುಡುಗರು ಮಾತನಾಡಿಕೊಳ್ಳುವಂತಾಗಿದೆ.

ಈ ನಡುವೆ ಹೈಡ್ರಾಮಾ ನಡೆಯುವ ವೇಳೆ ರೈತರೊಬ್ಬರು ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಕಣ್ಣೀರು ಹಾಕಿದ್ದಾರೆ. ಉಪಲೋಕಾಯುಕ್ತರೇ ಫಸಲು ಉಳಿಸಿಕೊಳ್ಳಲು ಅವಕಾಶ ಕೊಡಿ ಎಂದು ನಿಮಗೆ ಹೇಳಿದ್ದಾರೆ ಆದರೂ ತೆರವಿಗೆ ಮುಂದಾಗುವುದು ಸರಿಯಲ್ಲ ಎಂದು ಅಧಿಕಾರಿಗಳ ಕಾಲಿಗೆ ಬಿದ್ದ ಘಟನೆಯೂ ನಡೆದಿದೆ.

ಬಾಕ್ಸ್‌... ಸಿದ್ಧತೆಯೊಂದಿಗೆ ನಡೆದ ಮರಗಳ ಮಾರಣಹೋಮಅರಣ್ಯ ಇಲಾಖೆಯು ಇಂಧನ ಅಭಾವವಾಗದಂತೆ ನೂರಾರು ಲೀಟರ್‌ ಪೆಟ್ರೋಲ್‌ ದಾಸ್ತಾನು ಇಟ್ಟುಕೊಂಡು, 5-6 ಜೆಸಿಬಿ ಹಾಗೂ ನೂರಕ್ಕೂ ಹೆಚ್ಚು ನುರಿತ ಕಾರ್ಮಿಕರು 60 ಕ್ಕೂ ಹೆಚ್ಚು ಅತ್ಯಾಧುನಿಕ ಮರ ಕೊಯ್ಯುವ ಯಂತ್ರಗಳೊಂದಿಗೆ ಕಾರ್ಯಾಚರಣೆಗೆ ಇಳಿದಿತ್ತು. ರೈತರು ಕಣ್ಣೀರು ಸುರಿಸುತ್ತಿದ್ದರೆ, ಕಳೆದ 20-25 ವರ್ಷಗಳಿಂದ ಸಾಕಿ ಸಲಹಿದ್ದ ಸಾವಿರಾರು ಅಡಿಕೆ ಮತ್ತು ತೆಂಗಿನ ಮರಗಳನ್ನು ಕ್ಷಣಾರ್ಧದಲ್ಲಿ ಧರೆಗುರುಳಿಸಿ, ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಯಾವುದೇ ಕುರುಹು ಇಲ್ಲದಂತೆ ಸ್ಥಳವನ್ನು ಖಾಲಿ ಮಾಡಲಾಯಿತು.

ಕೋಟ್‌...

ಇದು ಕೋರ್ಚ್‌ ಆದೇಶದ ಅನ್ವಯ ನಡೆದಿರುವ ಪ್ರಕ್ರಿಯೆ. ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ’ಅರಣ್ಯ’ ಎಂದು ಘೋಷಿತವಾದ ಜಾಗವನ್ನು ಎನ್‌ಒಸಿ ಇಲ್ಲದೆ ಮಂಜೂರು ಮಾಡುವಂತಿಲ್ಲ. ನಮ್ಮ ಕರ್ತವ್ಯ ಪಾಲನೆ ಮಾಡಿದ್ದೇವೆ. ಆರ್‌ಎಫ್‌ಓ ಚಂದನ್‌.

------------------

ಇದು 35-40 ವರ್ಷಗಳ ಹಿಂದೆ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಆಗಿರುವ ಲೋಪ. ಅಂದು ಮಂಜೂರಾತಿ ಕೊಡುವಾಗ ಅರಣ್ಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಬೇಕಿತ್ತು. ಹೈಕೋರ್ಟ್‌ ಆದೇಶ ಇರುವುದರಿಂದ ನಾವು ನಿಯಮ ಮೀರಿ ರೈತರಿಗೆ ಜಮೀನು ಬಿಡಲು ಅಥವಾ ಬದಲಿ ಜಾಗ ನೀಡಲು ಸಾಧ್ಯವಿಲ್ಲ.

- ಮಮತಾ, ತಹಸೀಲ್ದಾರ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಪಿಎಸ್‌ ಜಾರಿ ಬಗ್ಗೆ ಸಂಪುಟದಲ್ಲಿ ನಿರ್ಧಾರ: ಸಿಎಂ
3-4 ತಿಂಗಳಲ್ಲಿ ಪಂಚಾಯ್ತಿ ಎಲೆಕ್ಷನ್‌: ಖಂಡ್ರೆ