ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಕಲಾವಿದರ ಕಲ್ಯಾಣ ವೇದಿಕೆ, ವಿಷ್ಣುಸೇನಾ ಸಮಿತಿ, ಗಂಧರ್ವ ಶ್ರೀ ಮಾಸ ಪತ್ರಿಕೆ, ಗಂಧರ್ವಸಂಸ್ಥೆ, ಗಂಗೋತ್ರಿ ಡೆವೆಲಪ್ ಮೆಂಟ್ ಟ್ರಸ್ಟ್, ಪರ್ವ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಬಸವ ಜಯಂತಿಯಂದು ಹಮ್ಮಿಕೊಳ್ಳಲಾಗಿರುವ ಸಾಮೂಹಿಕ ವಿವಾಹ ಮಹೋತ್ಸವದ ಕರ ಪತ್ರಗಳ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದಲ್ಲಿ ಸರಳ ಹಾಗೂ ಸಮಾನತೆಯ ವಿವಾಹ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಬಸವ ಜಯಂತಿಯಂದು ಸಾಮೂಹಿಕ ವಿವಾಹವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಯುವ ಜೋಡಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಇದೇ ವೇಳೆ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಜಿ.ಶ್ರೀನಿವಾಸ ಮೂರ್ತಿ ಮಾತನಾಡಿ, ಬಸವ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ವೈಭವ ಮತ್ತು ಅನಾವಶ್ಯಕ ಖರ್ಚುಗಳನ್ನು ತಪ್ಪಿಸಿ, ಸರಳ ವಿವಾಹಗಳನ್ನು ನಡೆಸುವುದು ಈ ಕಾಲದಲ್ಲಿ ಅಗತ್ಯವಾಗಿದೆ.ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸಮಾಜದಲ್ಲಿ ಐಕ್ಯತೆ ಹಾಗೂ ಸಹಕಾರ ಮನೋಭಾವವನ್ನು ಬೆಳೆಸುತ್ತವೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್, ಸಿಪಿಐ ನಾಗರಾಜ, ಪಿಎಸ್ಐ ಮಹೇಶ್ ಹೊಸಪೇಟೆ, ಮಠದ ಕಾರ್ಯದರ್ಶಿ ಕಾಂತರಾಜ, ಕೋನಸಾಗರ ನಾಗೇಂದ್ರ, ಜನಸಂಸ್ಥಾನ ಸಂಸ್ತೆಯ ಕಾರ್ಯದರ್ಶಿ ವಿರೂಪಾಕ್ಷಪ್ಪ, ರಾಂಪುರ ಅನಿಲ್ ಕುಮಾರ್, ಮೊಗಲಹಳ್ಳಿ ಸಿದ್ಧಾರ್ಥ, ನೇರ್ಲಹಳ್ಳಿ ಪ್ರಭಾಕರ, ಹಾನಗಲ್ ತಿಪ್ಪಣ್ಣ, ಪರಮೇಶ್ವರಪ್ಪ, ರಾಮಾಂಜನೇಯ ಇದ್ದರು.