ಕುಕನೂರು: ಸಾಮರಸ್ಯಕ್ಕೆ ಸಾಮೂಹಿಕ ವಿವಾಹ ಪೂರಕ ಎಂದು ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಯುವಕರು ದುಶ್ಚಟದಿಂದ ದೂರವಿದ್ದು ಆರ್ಥಿಕ, ರಾಜಕೀಯವಾಗಿ ಬೆಳೆಯಬೇಕು. ಸಮಾಜದಲ್ಲಿ ಯುವಕರು ಮುನ್ನೆಲೆಗೆ ಬರುವಂತ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮದೆ ಆದ ಸಾಮಾಜಿಕ ಕೊಡುಗೆ ನೀಡಬೇಕು. ಪಾಲಕರು ತಮ್ಮ ಮಕ್ಕಳನ್ನು ಶೈಕ್ಷಣೀಕವಾಗಿ ಬಲಿಷ್ಠರನ್ನಾಗಿಸಬೇಕು. ಸಮಾಜ ಗುರುತಿಸುವಂತೆ ಪ್ರಜ್ಞಾವಂತರಾಗಬೇಕು ಎಂದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ತಮ್ಮ ಅತ್ತೆ ಮಾವರನ್ನು ತಮ್ಮ ಕುಟುಂಬವನ್ನು ಗೌರವವಿತವಾಗಿ ನೋಡಿಕೊಳ್ಳಬೇಕು. ಜೀವನವೆಂಬುದು ಎತ್ತಿನ ಬಂಡಿಯ ಎರಡು ಗಾಲಿಗಳು ಇದ್ದ ಹಾಗೇ ಎರಡು ಸಮಾನವಾಗಿ ಹೋದಾಗ ಮಾತ್ರ ಯಶಸ್ಸು ಸಾಧ್ಯ ಎಂದರಲ್ಲದೇ ಬದುಕಿನಲ್ಲಿ ನೆಮ್ಮದಿಯುತ ಜೀವನ ನಡೆಸಬೇಕು ಎಂದು ನವವಿವಾಹಿತರಿಗೆ ಸಲಹೆ ನೀಡಿದರು.ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಉಪನ್ಯಾಸಕ ಆರ್. ಪಿ.ರಾಜೂರ, ಆಧ್ಯಾತ್ಮಿಕ ಶಕ್ತಿ ಕನಕದಾಸರದಲ್ಲಿ ಜಗತ್ತನ್ನು ಸುಧಾರಿಸುವ ಕಾರ್ಯ ಮಾಡಿತು. ಕನಕದಾಸರು ಆಧ್ಯಾತ್ಮಿಕ ವಿಚಾರದಲ್ಲಿ ಸಾಧನೆ ಮಾಡಿದರು. ಕನಕದಾಸರ ಆಚಾರ ವಿಚಾರ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತ್ಯುತ್ಸವಕ್ಕೆ ಅರ್ಥ ಎಂದರು.
ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ, ರಾಘವಾನಂದ ಮಠದ ಶ್ರೀಆತ್ಮಾನಂದ ಭಾರತಿ ಸ್ವಾಮೀಜಿ ವಿರುಪಾಕ್ಷಯ್ಯ ಗುರುವಿನಮಠ, ಮಂಜುನಾಥಯ್ಯ ಗುರುವಿನಮಠ, ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ ಆರುಬೆರಳಿನ, ಮುಖ್ಯಾಧಿಕಾರಿ ನಬಿಸಾಬ್, ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಂಜುನಾಥ ಕಡೆಮನಿ, ಪಟ್ಟಣದ ಕುರುಬ ಸಮಾಜದ ಅಧ್ಯಕ್ಷ ಶೇಖಪ್ಪ ಕಂಬಳಿ, ಸಿದ್ಧಯ್ಯ ಕಳ್ಳಿಮಠ, ಮಾರುತಿ ಗಾವರಾಳ, ಉಪನ್ಯಾಸಕರಾದ ಭರಮಪ್ಪ, ಶರಣಪ್ಪ ಕೊಪ್ಪದ ಇತರರಿದ್ದರು.