ಮಾದಕ ವಸ್ತು ನಿಷೇಧ ಜಾಗೃತಿ: ವಿದ್ಯಾರ್ಥಿಗಳಿಂದ ಬೀದಿ ನಾಟಕ

KannadaprabhaNewsNetwork |  
Published : Nov 10, 2025, 01:45 AM IST
9ಎಚ್.ಎಲ್.ವೈ-: 1: ಪಟ್ಟಣದ ಕೆ.ಎಲ್.ಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು  ಭಾನುವಾರದ ಸಂತೆದಿನ ನಗರದಲ್ಲಿ ಬೀದಿನಾಟಕ ಮಾಡಿ ಮಾದಕ ವಸ್ತು ನಿಶೇಧ ಕುರಿತು ಜಾಗೃತಿ ಮೂಡಿಸಿದರು. | Kannada Prabha

ಸಾರಾಂಶ

ಪಟ್ಟಣದ ಕೆ.ಎಲ್.ಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರದ ಸಂತೆದಿನ ನಗರದಲ್ಲಿ ಬೀದಿನಾಟಕ ಮಾಡಿ ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದ ಕೆ.ಎಲ್.ಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರದ ಸಂತೆದಿನ ನಗರದಲ್ಲಿ ಬೀದಿನಾಟಕ ಮಾಡಿ ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಮೂಡಿಸಿದರು.

ಕಾಲೇಜಿನಲ್ಲಿ ಇದೇ ತಿಂಗಳು 14 ಮತ್ತು 15ರಂದು ಜರಗುವ ಟೆಕ್ನೋ ಸ್ಪಾರ್ಕ 2025 ರ ತಾಂತ್ರಿಕ ಹಬ್ಬ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಚರಿಸಲಾಗುತ್ತಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ರ 150ನೇ ಜನ್ಮದಿನಾಚರಣೆಯ ಅಂಗವಾಗಿ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮೋಜು ಮಸ್ತಿಗಾಗಿ ಮಾದಕ ವ್ಯವಸನಕ್ಕೆ ದಾಸರಾಗಿರುವ ಯುವಜನತೆ ಬದುಕಿನ ದುರಂತಕ್ಕೆ ಸಾಗುತ್ತಿದ್ದಾರೆ. ಆರೋಗ್ಯ ಹಾಗೂ ಕುಟುಂಬದ ನಾಶಕ್ಕೂ ಕಾರಣವಾಗುತ್ತಿದ್ದಾರೆ. ವ್ಯಸನಕ್ಕೆ ಕಾರಣವೇನು ಅದಕ್ಕೆ ಪರಿಹಾರ ಮತ್ತು ಮಾದಕ ವಸ್ತು ಸೇವನೆ ಹಾಗೂ ಮಾರಾಟಕ್ಕೆ ಇರುವ ಕಾನೂನು ಶಿಕ್ಷೆ ಈ ಎಲ್ಲ ಅಂಶಗಳು ಬೀದಿ ನಾಟಕದ ಪ್ರಮುಖ ವಿಷಯವಾಗಿತ್ತು.

ಕಾಲೇಜಿನ ತರಬೇತಿ ಹಾಗೂ ಉದ್ಯೋಗ ಕೋಶದ ಸಂಯೋಜಕ ವರುಣ ಪಾಟೀಲ ನಾಟಕ ಸಂಯೋಜಿಸಿದರು. ಎಎಸ್‌ಐ ಪ್ರಕಾಶ ಮೂಳೆ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಎನ್ಎಸ್ಎಸ್ ಅಧಿಕಾರಿ ಶಾಂತಾರಾಮ ಚಿಬುಲಕರ, ಪ್ರಾಧ್ಯಾಒಕ ಮಾಧವ ಸುರತ್ಕರ, ಸಿಬ್ಬಂದಿ ರವಿ ಕಲಬಾವಿ, ಕುಮಾರ ಚಲವಾದಿ ಹಾಗೂ ಪೊಲೀಸ್‌ ಠಾಣೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಗಳಾದ ರಾಜೇಶ್ವರಿ, ನಿನೂತನಾ, ತಾರಾ, ದಿವಯಾ ಎಲ, ಸೌಜನ್ಯ, ಸೃಷ್ಟಿ, ಪಾರ್ವತಿ, ಸುಶ್ಮೀತಾ, ಪ್ರೇಮಾ, ಸ್ನೇಹಲ, ಆರತಿ, ನಮೃತಾ, ಸಂಜನಾ, ಸಪ್ನಾ, ನೇತ್ರಾವತಿ, ದಿವ್ಯಾ ಎಸ್, ಅಂಕಿತಾ, ಸಮೀಕ್ಷಾ, ಭೂಮಿ, ಶರೇಯಾ, ಶ್ವೇತಾ, ಜ್ಯೋತಿ, ಹೃಷಿಕಾ , ಆಯೇಷಾ, ಅನುಷ್ಕಾ, ವೈಭವಿ ಹಾಗೂ ಸಿದ್ಧಾರ್ಥ ಹಾಗೂ ಬೀದಿ ನಾಟಕದಲ್ಲಿ ಭಾಗವಹಿಸಿದ್ದರು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್