ಸಾಮೂಹಿಕ ವಿವಾಹಗಳು ಭಾಗ್ಯವಂತರ ಮದುವೆ

KannadaprabhaNewsNetwork |  
Published : Mar 10, 2026, 04:00 AM IST
9ಐಎನ್‌ಡಿ1,ಇಂಡಿ ತಾಲೂಕಿನ ಸುಕ್ಷೇತ್ರ  ಜೇವೂರ  ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ,ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಾಶಿಪೀಠದ ಶ್ರೀಮದ ಜ್ಞಾನ ಸಿಂಹಾಸನಾದದೀಶ್ವರ 1008 ಜಗದ್ಗುರುರು ಡಾ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಸಾಮೂಹಿಕ ವಿವಾಹಗಳು ಬಡವರ ಮದುವೆ ಅಲ್ಲ, ಭಾಗ್ಯವಂತರ ಮದುವೆಯಾಗಿವೆ ಎಂದು ಕಾಶಿಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಾಮೂಹಿಕ ವಿವಾಹಗಳು ಬಡವರ ಮದುವೆ ಅಲ್ಲ, ಭಾಗ್ಯವಂತರ ಮದುವೆಯಾಗಿವೆ ಎಂದು ಕಾಶಿಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಸುಕ್ಷೇತ್ರ ಜೇವೂರ ಹಠಯೋಗಿ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಉದ್ಘಾಟಿಸಿ ಅಶೀರ್ವಚನ ನೀಡಿದ ಅವರು, ಸನಾತನ ಧರ್ಮದಲ್ಲಿ ಮಹಿಳೆಗೆ ಉಚ್ಚ ಮಟ್ಟದಲ್ಲಿ ಸ್ಥಾನ ನೀಡಿ, ನಾವು ಗೌರವದಿಂದ ಕಾಣುತ್ತೇವೆ. ಜೇವೂರ ಗ್ರಾಮದ ರೇವಣಸಿದ್ಧೇಶ್ವರ ಪುಣ್ಯಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರು ಹಾಗೂ ಕಾಶಿ ಪೀಠದ ಶ್ರೀಗಳ ಸಾನ್ನಿಧ್ಯ ಮತ್ತು ವಿವಿಧ ಮಠದ ಸ್ವಾಮೀಜಿ , ಶ್ರೀಗಳ ಹಾಗೂ ಗಣ್ಯರು, ಗ್ರಾಮಸ್ಥರ ಸಮ್ಮುಖದಲ್ಲಿ 31 ಜೋಡಿ ವಿವಾಹ ಕಾರ್ಯಕ್ರಮದಲ್ಲಿ ನವಜೀವನಕ್ಕೆ ಕಾಲಿಡುತ್ತಿರುವ ನವದಂಪತಿಗಳು ಪುಣ್ಯವಂತರು. ಅದರಿಂದ ನಿಮಗೆ ನಿಜವಾದ ದೇವರು ತಂದೆ, ತಾಯಿ ಮತ್ತು ಗುರು ಹಿರಿಯರ ಮಾರ್ಗದರ್ಶನವೇ ನಿಮಗೆ ಪ್ರೇರಣೆ ,ಶ್ರೀರಕ್ಷೆ. ಅವರನ್ನು ಗೌರವದಿಂದ ಕಾಣಬೇಕು ಎಂದರು.ಬಡತನದಲ್ಲಿ ಹುಟ್ಟಿರಬಹುದು, ಸಾಯುವಾಗ ಬಡತನವಾಗೇ ಸಾಯಬಾರದು. ಮನುಷ್ಯನ ಜೀವನಕ್ಕೆ ಇಂದು ಏನೂ ಕೊರತೆ ಇಲ್ಲ. ಸಾಧಿಸುವ ಛಲ, ಕಠಿಣ ಶ್ರಮದಿಂದ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ. ಸನಾತನ ಧರ್ಮ ಆರ್ಥಿಕವಾವಾಗಿ ಹಿಂದುಳಿದಿರಬಹುದು, ಮಠ ಮಾನ್ಯಗಳು ನಿಮ್ಮ ಬೆನ್ನಿಗೆ ನಾವಿದ್ದೇವೆ. ಸನಾತನ ಧರ್ಮದಲ್ಲಿದ್ದು, ಬುದ್ದಿ ಶಕ್ತಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.ತದ್ದೇವಾಡಿ ಮಹಾಂತೇಶ ಶಾಸ್ತ್ರಿಗಳು ಮಾತನಾಡಿದರು. ಧನರಾಜ ಮುಜಗೊಂಡ, ಎಂ.ಆರ್.ಪಾಟೀಲ ಮಾತನಾಡಿದರು.

ತಮದಡ್ಡಿಯ ಜಯಸಿದ್ಧೇಶ್ವರ ಶಿವಾಚಾರ್ಯ, ಅಭಿನವ ರಾಚೋಟೇಶ್ವರ ಶಿವಾಚಾರ್ಯ, ತದ್ದೇವಾಡಿ ಮಹಾಶಾಂತೇಶ ಗುರೂಜಿ, ಗುರುಪಾದೇಶ್ವರ ಶ್ರೀ, ಆಲಮೇಲದ ಚಂದ್ರಶೇಖರ ಶಿವಾಚಾರ್ಯ, ಚಿಟಗುಪ್ಪ ಮರುಳಾಧ್ಯ ಶ್ರೀ, ಜಿಗಜೀವಣಿ ಮುಪ್ಪಿನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸತೀಶ ಹತ್ತಿ, ಗುರುಲಿಂಗಪ್ಪ ಬಿರಾದಾರ, ಶ್ರೀಪತಿಗೌಡ ಪಾಟೀಲ, ಸಣ್ಣಪ್ಪ ತಳವಾರ, ಸಂತೋಷಗೌಡ ಪಾಟೀಲ, ಬಸವರಾಜ ಪಾಟೀಲ, ನಾಗನಾಥಗೌಡ ಬಿರಾದಾರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 31 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು. ಶಿವಾನಂದ ಪಾಟೀಲ ಸ್ವಾಗತಿಸಿದರು. ಗುರುಲಿಂಗಪ್ಪ ಬಿರಾದಾರ ನಿರೂಪಿಸಿದರು. ಧನರಾಜ ಮುಜಗೊಂಡ ವಂದಿಸಿದರು.ಧರ್ಮವನ್ನು ನಾವು ರಕ್ಷಣೆ ಮಾಡಿದರೇ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ. ಇಂದು ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಧರ್ಮ, ಸಂಸ್ಕೃತಿಗೆ ಧಕ್ಕೆಯಾಗುತ್ತದೆ. ಆಶೆ, ಆಕಾಂಕ್ಷೆ ಮತ್ತು ಆರ್ಥಿಕತೆಗೆ ಮಾರು ಹೋಗದೇ ನಮ್ಮ ಸನಾತನ ಧರ್ಮದಲ್ಲಿದ್ದು, ಉತ್ತಮ ಜೀವನ ಕಂಡುಕೊಳ್ಳಬೇಕು.

-ಜಗದ್ಗುರು ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶಿಪೀಠ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಸಂಖ್ಯೆ ಆಧರಿಸಿ ಮೂಲಸೌಕರ್ಯ ಒದಗಿಸಲು ಆದ್ಯತೆ
ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ಗೆ ₹5 ಕೋಟಿ ಲಾಭ