ಕೊಪ್ಪಳ: ಮದುವೆ ಮಾಡಿಕೊಳ್ಳುವುದಕ್ಕಾಗಿಯೇ ದುಂದು ವೆಚ್ಚ ಮಾಡಿ ಸಾಲದ ಸುಳಿಯಲ್ಲಿ ಸಿಲುಕುವುದು ಸರಿಯಲ್ಲ. ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದ್ದು, ಇಂಥ ಕಾರ್ಯ ಶ್ರೀಮಠದಲ್ಲಿ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ಶ್ರೀಮರುಳಾಧ್ಯ ಶಿವಾಚಾರ್ಯರು ಹೇಳಿದರು.
ಜನರಲ್ಲಿ ಮಾನಸಿಕ ನೆಮ್ಮದಿ, ಶಾಂತಿ, ಉತ್ಸಾಹ ಹಾಗೂ ಒಗ್ಗಟ್ಟಿನ ಭಾವನೆ ಮೂಡಬೇಕಾದರೆ ಪುರಾಣ ಪ್ರವಚನ, ಸಾಮೂಹಿಕ ವಿವಾಹ, ಧಾರ್ಮಿಕ ಸಭೆ, ಜಾತ್ರೆಗಳು ಸಹಕಾರಿ ಕಾರಣ ಎಲ್ಲರೂ ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
ಹಿರೇಹಡಗಲಿ ಶ್ರೀಶಿವಯೋಗಿ ಸಣ್ಣ ಹಾಲಸ್ವಾಮಿಗಳು ಮಾತನಾಡಿ, ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ವರರೆಲ್ಲರೂ ಸತಿ ಪತಿಗಳೊಂದಾಗಿ ಪ್ರೀತಿಯಿಂದ ಬಾಳಿ ಶಾಂತಿಯಿಂದ ಜೀವನ ನಡೆಸಬೇಕು.ಮದುವೆಯಾದ ದಂಪತಿಗಳು ಅನ್ಯೋನ್ಯವಾಗಿ ಜೀವನ ನಡೆಸಬೇಕು ಮನೆಗೆ ಬಂದ ಸೊಸೆಯಂದಿರುಅತ್ತೆ ಮಾವನವರನ್ನು ತಂದೆ ತಾಯಿ ಎಂದು ತಿಳಿದು ಜೀವನ ನಡೆಸಬೇಕು ಎಂದರು.ಶ್ರೀರಾಜೇಶಸ್ವಾಮಿ ಇನಾಮದಾರ ಮಾತನಾಡಿ, ಸಿದ್ಧೇಶ್ವರನ ಭಕ್ತರ ಭಕ್ತಿಗೆ ಬರಲಿಲ್ಲ. ಮದುವೆ ಎನ್ನುವ ಬಂಧನ ಜೀವನ ನಡೆಸಲು ಜವಾಬ್ದಾರಿ ನೀಡಿದಂತೆ ಜತೆಗೆ ಕುಟುಂಬದ ಜವಾಬ್ದಾರಿ ನೀಡುವ ಸಂದರ್ಭವಾಗಿದೆ. ಸಂಸಾರವೆಂಬ ಬಂಡಿಯನ್ನು ಸರಾಗವಾಗಿ ನಡೆಸಿ ಎಂದರು.
ಮುಖಂಡರಾದ ಗುರುಮೂರ್ತಿಸ್ವಾಮಿ ಇನಾಮದಾರ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ರಾಜೇಶಸ್ವಾಮಿ, ಶಿವಯೋಗಿ ಸ್ವಾಮಿ, ಕುಮಾರಸ್ವಾಮಿ, ಕರಿಸಿದ್ದ ಸ್ವಾಮಿ ಡಾ.ಚನ್ನವೀರಸ್ವಾಮಿ, ರವಿಶಂಕರ, ಚೌಡಪ್ಪ,ಚನ್ನಪ್ಪ,ಮಹಾಂತೇಶ, ನಜೀರ,ಮಂಜುನಾಥ, ವೀರಭದ್ರಯ್ಯ, ಹನುಮಂತ ಗೌಡ, ಅರವಿಂದಪ್ಪ, ಹನುಮಂತ, ಅನ್ವರ್,ಇಸ್ಮಾಯಿಲ್, ನೀಲಪ್ಪ,ರಮೇಶ, ಸುರೇಶ, ಚಂದ್ರಪ್ಪ, ಶ್ರೀನಿವಾಸ್, ರಮೇಶ, ಗವಿಸಿದ್ದಪ್ಪ, ಹನುಮಂತ ಗೌಡ, ಸಾಗರ ಇತರರು ಇದ್ದರು.