ಅರಸೀಕೆರೆಯಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ

KannadaprabhaNewsNetwork |  
Published : Apr 01, 2025, 12:45 AM IST
ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ವಕ್ಪ್‌ ಮಸೂದೆ ಜಾರಿಗೆ ತರುವ ಕೇಂದ್ರ ಸರ್ಕಾರದ ವಿರುದ್ದ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮುಸ್ಲಿಂ ಬಾಂಧವರು ರಂಜಾನ್‌ ಹಬ್ಬದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ವಕ್ಪ್‌ ಮಸೂದೆ ವಿರೋಧಿಸಿ ಮುಸ್ಲಿಂ ಬಾಂಧವರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಸೋಮವಾರ ರಂಜಾನ್ ಹಬ್ಬ ಆಚರಿಸಿದರು. ಗ್ರಾಮದ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ವಕ್ಪ್‌ ಮಸೂದೆ ವಿರೋಧಿಸಿ ಮುಸ್ಲಿಂ ಬಾಂಧವರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಸೋಮವಾರ ರಂಜಾನ್ ಹಬ್ಬ ಆಚರಿಸಿದರು. ಗ್ರಾಮದ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಸ್ಥಳೀಯ ಮುಸ್ಲಿಂ ಸಮಾಜದ ಮುಖಂಡ ಐ.ಸಲಾಂ ಸಾಹೇಬ್‌, ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳುವ ಹಾಗೂ ವಕ್ಪ್‌ ಬೋರ್ಡ್‌ ಆಸ್ತಿ ಕಬಳಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ. ಆದ್ದರಿಂದ ಗುರುಗಳ ಸಮ್ಮುಖದಲ್ಲಿಯೇ ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕವಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಈ ಹಬ್ಬವು ತ್ಯಾಗ, ಪ್ರೀತಿ, ಕರುಣೆ, ಸೌಹಾರ್ಧತೆಯ ಸಂಕೇತವಾಗಿದೆ. ಒಂದು ತಿಂಗಳು ಉಪವಾಸ ಮಾಡುವುದೆಂದರೆ ಅಲ್ಲಾನೊಂದಿಗೆ ಸಂಬಂಧ ಇನ್ನೂ ಗಟ್ಟಿಗೊಳಿಸಿ ಆತ್ಮಸ್ಥೈರ್ಯ ತುಂಬುವುದಾಗಿದೆ ಎಂದು ಹೇಳಿದರು.

ಮೌಲಾನ ಅದಿಲ್‌ ಮಹಮದ್‌, ಸುನ್ನಿ ಜಾಮೀಯಾ ಮಸೀದಿ ಅಧ್ಯಕ್ಷ ಬಿ.ಅಬೀಬ್‌ ಸಾಹೇಬ್, ಕಾರ್ಯದರ್ಶಿ ಖಾಜಿ ಮಹಮದ್‌ , ಮುಖಂಡರಾದ ಅಬ್ದುಲ್‌ ಸಾಹೇಬ್, ಅದಾಮ ಸಾಹೇಬ್, ಐ.ಸಲಾಂ, ಎ.ಮಹಬ್ದುಲ್ಲಾ ಸಾಹೇಬ್, ಬಿ.ವಜೀರ, ಅಜೀಮ ಸಾಹೇಬ್, ಇನಾಯಿುತ್ ಉಲ್ಲಾ, ಉಮ್ಮರ ಸಾಹೇಬ್, ದಸ್ತಗಿರಿ ಸಾಹೇಬ್, ವಲಿ, ಹಯಾತ್‌ ಸಾಹೇಬ್, ಎಂ.ರಪೀಕ್‌, ಶರೀಪ, ಬಿ.ಸಲಾ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು