ಉಡುಪಿ ಕರವೇ ಕಾರ್ಯಕರ್ತೆಯರ ಸಾಮೂಹಿಕ ರಾಜೀನಾಮೆ

KannadaprabhaNewsNetwork |  
Published : Mar 30, 2026, 02:15 AM IST
ಉಡುಪಿ ಕರವೇ ಮಹಿಳಾ ಘಟಕದ ಪ್ರಮುಖರಿಂದ ಸುದ್ಧಿಗೋ,್ಠಿ | Kannada Prabha

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಮಹಿಳಾ ಘಟಕದ ಕಾರ್ಯಕರ್ತೆಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಕರವೇ ಮಹಿಳಾ ಘಟಕದ ಕಾರ್ಯಕರ್ತೆ ಮೀರಾ ಹೇಳಿದ್ದಾರೆ.

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಮಹಿಳಾ ಘಟಕದ ಕಾರ್ಯಕರ್ತೆಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಕರವೇ ಮಹಿಳಾ ಘಟಕದ ಕಾರ್ಯಕರ್ತೆ ಮೀರಾ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾವು ತನ್ನಡ ನಾಡುನುಡಿಯ ಸೇವೆಗಾಗಿ ಕರವೇ ಸೇರಿದ್ದೆವು, ಆದರೇ ಸಂಘಟನೆಯ ಸಾಮಾನ್ಯ ಜ್ಞಾನವೂ ಇಲ್ಲದವರನ್ನು ಅಧ್ಯಕ್ಷೆಯನ್ನಾಗಿ ನಿಯೋಜಿಸಲಾಗಿತ್ತು. ಅವರು ವೇದಿಕೆಯ ಎಲ್ಲ ಕಾರ್ಯಕ್ರಮಗಳಲ್ಲಿ ಸಂಘಟನೆಯ ನೀತಿನಿಯಮಗಳನ್ನು ಗಾಳಿಗೆ ತೂರಿ ವೈಯಕ್ತಿಕ ಲಾಭ ಮಾಡುತಿದ್ದರು.

ಫೆ 25ರಂದು ವೇದಿಕೆಯ ರಾಜ್ಯ ನಾಯಕರು ಉಡುಪಿಗೆ ಭೇಟಿ ನೀಡಿದ್ದಾಗ ನಾವೆಲ್ಲರೂ ಅಧ್ಯಕ್ಷೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಬಳಿಕ ಘಟಕವನ್ನೇ ಬರ್ಖಾಸ್ತುಗೊಳಿಸಲಾಗಿದೆ. ಆದರೇ ಮಾಜಿ ಅಧ್ಯಕ್ಷೆ ಈಗಲೂ ತಾನೇ ಅಧ್ಯಕ್ಷೆ ಎಂದು ಪ್ರಚಾರ ಮಾಡಿ ಮಾಧ್ಯಮ ಮತ್ತು ಜನರ ದಿಕ್ಕು ತಪ್ಪಿಸುತಿದ್ದಾರೆ. ಇದರಿಂದ ಬೇಸತ್ತು 15ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಸಂಘಟನೆಯಿಂದ ಹೊರಬರಬೇಕು ಎಂದು ತೀರ್ಮಾನಿಸಿ ರಾಜೀನಾಮೆ ನೀಡಿದ್ದೇವೆ ಎಂದರು.ಘಟಕವನ್ನು ಈಗಾಗಲೇ ಬರ್ಖಾಸ್ತು ಮಾಡಲಾಗಿದೆ, ಆದರೂ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ಈಗಲೂ ತಾನು ಜಿಲ್ಲಾಧ್ಯಕ್ಷೆ ಎಂದು ಜನರ ದಾರಿ ತಪ್ಪಿಸುತಿದ್ದಾರೆ. ಅವರ ನಡವಳಿಕೆಯಿಂದ ಬೇಸತ್ತು ತಾವು ರಾಜೀನಾಮೆ ನೀಡುತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ಧಿಗೋಷ್ಟಿಯಲ್ಲಿ ಕರವೇ ಮಹಿಳಾ ಕಾರ್ಯಕರ್ತೆಯರಾದ ಮೀರಾ, ಪವಿತ್ರಾ ಶೆಟ್ಟಿ, ವಿಜಯ ಶ್ರೀನಿವಾಸ್, ಮಾಧವಿ ಶೆಟ್ಟಿ, ಮಮತಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶನಿವಾರಸಂತೆ ಶ್ರದ್ಧಾಭಕ್ತಿಯ ಶ್ರೀರಾಮನವಮಿ
ಕುಂಜಿಬೆಟ್ಟು ರುಕ್ಮಿಣಿ ಸತ್ಯಭಾಮಾ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶಿಲಾನ್ಯಾಸ