ಏಕ ಕಾಲದಲ್ಲಿ 10 ಸಾವಿರ ಜನರಿಂದ ಸಾಮೂಹಿಕ ವಚನ ಗಾಯನ

KannadaprabhaNewsNetwork |  
Published : Sep 30, 2026, 01:45 AM IST
ಸಾಮೂಹಿಕ ವಚನ ಗಾಯನ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಭಕ್ತರು.ವಚನಗಳ ಹಾಡುಗಾರಿಕೆಗೆ ಚಾಲನೆ ನೀಡಿದ ಡಾ. ಬಸವಕುಮಾರ ಶ್ರೀಗಳು. | Kannada Prabha

ಸಾರಾಂಶ

ಮುರುಘರಾಜೇಂದ್ರ ಅನುಭವ ಮಂಟಪದಲ್ಲಿ ಸಾಮೂಹಿಕ ವಚನ ಗಾಯನ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಭಕ್ತರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದ ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿಶ್ವವಿದ್ಯಾಲಯದ ವತಿಯಿಂದ ಅ.14 ರಿಂದ ೨೨ ರವರೆಗೆ ನಡೆಲಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಬಾರಿ ವಚನಗಳ ಝೇಂಕಾರ ಎಲ್ಲರ ಕಿವಿಗೂ ತಂಪು ತರಲಿದೆ.

೧೦ ಸಾವಿರ ಜನರು ಭಾಗಿಯಾಗಿ ಒಟ್ಟಿಗೆ ವಚನಗಳನ್ನು ಹಾಡುವ ಹೊಸ ಪ್ರಯೋಗಕ್ಕೆ ಶರಣ ಸಂಸ್ಕೃತಿ ಆಚರಣೆ ಸಮಿತಿ ಮುಂದಾಗಿದೆ. ಇಷ್ಟೊಂದು ಬೃಹತ್‌ ಸಂಖ್ಯೆಯ ಗಾಯಕರು ಒಟ್ಟಿಗೆ ಸೇರಿ ವಚನಗಳನ್ನು ಹಾಡಿ ಅದರ ಕಂಪನ್ನು ನಾಡಿಗೆ ಪಸರಿಸಿದರೆ ಈ ಕಾರ್ಯಕ್ರಮ ದಾಖಲೆಗೆ ಸೇರಲಿದೆ.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮಠದ ಅನುಭವ ಮಂಟಪದಲ್ಲಿ ನಿನ್ನೆ ಸೇರಿದ್ದ ಸಾವಿರಾರು ಜನರು ಮುನ್ನುಡಿ ಬರೆದರು. ಸೇರಿದವರೆಲ್ಲ ವಚನಗಳನ್ನು ಹಾಡುವ ತಾಲೀಮಿಗೆ ಸಾಕ್ಷಿಯಾದರು. ವಚನಗಳ ಗುನುಗುಟ್ಟಿದರು. ರಾಗಬದ್ಧವಾಗಿ ಹಾಡಲು ಯತ್ನಿಸಿದರು. ಇದಕ್ಕೆಲ್ಲ ಎಸ್‌ಜೆಎಂ ಪೀಠದ ಆಡಳಿತ ಮಂಡಳಿ ಸಮಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಭಾಷ್ಯ ಬರೆದರು.

ಪೂರ್ವಾಭ್ಯಾಸದ ನೇತೃತ್ವ ವಹಿಸಿದ್ದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ವಚನಗಳು ಅನರ್ಘ್ಯ ರತ್ನಗಳು. ಅಂದು ರಚಿಸಿದ ವಚನಗಳು ಇಂದಿಗೂ ಜನಮಾನಸದಲ್ಲಿ ನೆಲೆ ನಿಂತಿವೆ. ಜನರ, ಸಾಹಿತ್ಯಪ್ರಿಯರ, ಬಸವಾಭಿಮಾನಿಗಳ ಸದಾ ನೆನಪಿನಲ್ಲಿವೆ. ಈಗಿನ ಆಧುನಿಕ ದಿನಮಾನದಲ್ಲಿ ಇಂದಿನ ಮಕ್ಕಳಿಗೆ ಅವುಗಳು ಅಭ್ಯಾಸವಾಗಬೇಕೆಂಬ ಮತ್ತು ದೊಡ್ಡವರಿಗೂ ಅವುಗಳ ಮನನ ಅಗತ್ಯವಾಗಿದೆ. ವಚನಗಳು ನಡೆ-ನುಡಿಗಳ ಅನುಭವದ ಸಾರಾಮೃತ. ಅವು ನಮ್ಮ ಮನಸ್ಸಿನೊಳಗೋದರೆ ಅವು ಶಾಶ್ವತವಾಗಿ ಉಳಿಯುವವೆಂಬ ಕಾರಣದಿಂದ ಶರಣಸಂಸ್ಕೃತಿ ಉತ್ಸವದ ಸದಾಶಯವೂ ಅದೇ ಆಗಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಇಂತಹ ಪ್ರಯತ್ನ ಮಾಡಲಾಗಿದೆ ಎಂದು ನುಡಿದ ಅವರು ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಜಿಲ್ಲೆಯ ಎಲ್ಲ ಭಾಗಗಳ ಆಸಕ್ತರನ್ನು ಸೇರಿಸಿಕೊಂಡು ಬೇರೆಯವರಿಗೆ ಪ್ರೇರೇಪಿಸಿ ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದುರ್ಗದ ಅನೇಕರು ಇದರಲ್ಲಿ ಭಾಗಿಗಳಾಗಿದ್ದಾರೆನ್ನುವುದಕ್ಕೆ ನೀವೇ ಸಾಕ್ಷಿ. ಇಂತಹದೇ ಒಂದು ಸಮೂಹ ಗಾಯನ ವಚನ ನಾದ ಎನ್ನುವ ಹೆಸರಿನಲ್ಲಿ ದಾವಣಗೆರೆಯ ಮಹಾ ಜನತೆಯ ಸಹಕಾರದೊಂದಿಗೆ ಲಿಂಗಾಯತ ಮಠಾಧೀಶರ ಒಕ್ಕೂಟವು ನಾಳೆ ಸೆ.30ರ ಸಂಜೆ 6 ಗಂಟೆಗೆ ಏರ್ಪಡಿಸಿದ್ದಾರೆ. ಅದರಲ್ಲಿ ಮಕ್ಕಳಿಂದ ಹಿಡಿದು 78-80ರ ವಯೋಮಾನದ ಹಿರಿಯರೂ ಭಾಗವಹಿಸಿದ್ದಾರೆ. ಚಿತ್ರದುರ್ಗದ ಜನತೆಯೂ ಸಹ ಇಲ್ಲಿ ನಡೆಯುವ ಸಂದರ್ಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಅದರಂತೆ ಖ್ಯಾತ ಹಿನ್ನೆಲೆ ಗಾಯಕರಾಗಿದ್ದ ಕೆ.ಎಸ್.ಅಶ್ವಥ್ ಅವರ ನಿರ್ದೇಶನ ಹಾಗೂ ಸ್ವರ ಸಂಯೋಜನೆಯಲ್ಲಿ ನಿರ್ಮಾಣಗೊಂಡಿದ್ದ ಕೂಡಲಸಂಗಮದೇವ ಧ್ವನಿಸುರಳಿಯ ಆಯ್ದ 32 ವಚನಗಳಿಗೆ ಮತ್ತು ಅದರಲ್ಲಿ ಹಾಡಿರುವ ಹೆಸರಾಂತ ಗಾಯಕ ಕೆ. ಯುವರಾಜ್ ಈ ತಾಲೀಮಿಗೆ ಚಾಲನೆ ನೀಡಿ ಪೂರ್ವಾಭ್ಯಾಸಕ್ಕಾಗಿ ವಚನಗಳನ್ನು ಹೇಳಿಕೊಟ್ಟರು. ಸಮೂಹ ಗಾಯನ ಕಾರ್ಯಕ್ರಮ ಯಸಸ್ವಿಯಾಗುತ್ತದೆ. ಕಾರಣ ವಚನ ಹೇಳಿ ಕೊಡುವವರ ಅನುಭವಿ ತಂಡವೇ ಇಲ್ಲಿದೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಲವಾರು ವಚನಗಳ ಗಾಯನ ನಡೆಯಿತು. ನಗರದ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಸ್‌ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿಗಳು ಭಾಗವಹಿಸಿದ್ದರು. ಅದರಂತೆ ಗಾಯನ ಸಂದರ್ಭದಲ್ಲಿ ಮಹಿಳೆಯರಿಗೆ ಇಳಕಲ್ ಸೀರೆ ಹಾಗೂ ಪುರುಷರಿಗೆ ರಾಮರಾಜ್ ಉಡುಪುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದೆಂದು ತಿಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ