ಹೂವಿನಹಡಗಲಿ: ಸಾಮೂಹಿಕ ಮದುವೆಗಳು ಬರದ ಪರಿಸ್ಥಿತಿಯಲ್ಲಿ ಬಡವರ ಬದುಕಿನ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ.ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಹೊಸ ಜೀವನ ಕಟ್ಟಿಕೊಳ್ಳಲು ಜನ್ಮ ತಾಳಿದ ಮನೆ, ನೆರೆ ಹೊರೆಯರನ್ನು ಬಿಟ್ಟು ಗಂಡನ ಮನೆಗೆ ಬರುವ ಸೊಸೆ ಅತ್ತೆ ಮತ್ತು ಆ ಮನೆಯ ಕುಟುಂಬದ ಸದಸ್ಯರು, ತಮ್ಮ ಮಗಳಂತೆ ಭಾವಿಸಬೇಕು, ಅವರಿಗೆ ಬದುಕಿನ ಮಾರ್ಗದರ್ಶನ ನೀಡಬೇಕೆಂದು ಹೇಳಿದರು.
ಮಠ ಮಾನ್ಯಗಳು ಜಾತ್ರೆಯ ನಿಮಿತ್ತ ನಿರಂತರವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಬಡವರ ಬದುಕಿಗೆ ದಾರಿ ದೀಪವಾಗಿದ್ದಾರೆ. ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವ ಜತೆಗೆ ಬಡವರ, ರೈತರ ಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ದಾಸೋಹ ಕಾರ್ಯಕ್ರಮ ನಡೆಸುತ್ತಿದ್ದಾರೆ. ಸರ್ಕಾರ ಮಾಡುವಂತಹ ಕೆಲಸ ಮಠಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಮಾನಿಹಳ್ಳಿ ಪುರ ವರ್ಗ ಮಠದ ಮಳಿಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಮರುಳಾರಾಧ್ಯ ಸ್ವಾಮೀಜಿ, ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ, ಹಾಲ ಸೋಮೇಶ್ವರ ಸ್ವಾಮೀಜಿ, ಸಣ್ಣ ಹಾಲಸ್ವಾಮೀಜಿ, ಹಾಲ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಹರ ಗುರು ಚರಮೂರ್ತಿಗಳು ಭಾಗವಹಿಸಿದ್ದರು.