ಹಗರಿಬೊಮ್ಮನಹಳ್ಳಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೃಹತ್ ಅರೆಬೆತ್ತಲೆ ಮೆರವಣಿಗೆ ಹಾಗೂ ತಮಟೆ (ಹಲಗೆ) ಚಳುವಳಿಯನ್ನು ತಾಲೂಕು ಒಳಮೀಸಲಾತಿ ಅನುಷ್ಠಾನ ಹೋರಾಟ ಸಮಿತಿಯವರು ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ವೃತ್ತದಿಂದ ಮಿನಿವಿಧಾನಸೌಧದವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟಿಸುತ್ತಾ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಮಾದೂರು ಕೆ.ಮಹೇಶ್ವರ ಮಾತನಾಡಿ, ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯದ್ಯಾಂತ ಸಂಘಟಿತರಾಗಿ ಸರ್ಕಾರವನ್ನು ಎಚ್ಚರಿಸಬೇಕಿದೆ. ಪರಿಶಿಷ್ಠ ಜಾತಿಗಳ ಒಳಮೀಸಲಾತಿ ಕಾನೂನುಬದ್ದವಾಗಿ ಜಾರಿಯಾಗುವವರೆಗೂ ವಿವಿಧ ಇಲಾಖೆಗಳಲ್ಲಿನ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದರು. ಮುಖಂಡ ದಶಮಾಪುರ ಮರಿಯಪ್ಪ ಮಾತನಾಡಿದರು.
ಗ್ರಾಕೂಸ್ ಸಂಘಟನೆಯ ಕೋಗಳಿ ಮಲ್ಲೇಶ್, ವಿವಿಧ ಸಂಘಟನೆಗಳ ಆನಂದೇವನಹಳ್ಳಿ ಪ್ರಭಾಕರ, ಯಡ್ರಾಮನಹಳ್ಳಿ ಮರಿಯಪ್ಪ, ಹರೇಗೊಂಡನಹಳ್ಳಿ ದುರುಗಪ್ಪ, ಎ.ಮಹೇಶ್, ಪೂಜಾರ್ ಯಮನೂರಪ್ಪ, ಹೆಚ್.ಪ್ರಭಾಕರ, ಬೆಣಕಲ್ಲು ಪ್ರಕಾಶ್, ಪೂಜಾರ್ ಸಿದ್ದಪ್ಪ, ಒಂಟಿ ಮೇಘರಾಜ, ಬುಳ್ಳಪ್ಪ ಉಪ್ಪಾರಗಟ್ಟಿ, ಟಿ.ಅರ್ಜುನ, ಓಮೇಶ್, ಹೆಚ್.ಆರ್.ರಾಜ, ದೊಡ್ಡಬಸವರಾಜ, ಸುಭಾಷ್ ದುರುಗಪ್ಪ, ಕಾಳಿ ವಿಷ್ಣು, ಪೂಜಾರ್ ರಮೇಶ್, ಲೋಕಪ್ಪ, ಕಬ್ಬಳ್ಳಿ ಮೈಲಪ್ಪ, ತಂಬ್ರಹಳ್ಳಿ ಮರಿಯಪ್ಪ, ಹೇಮಣ್ಣ ಕಿತ್ನೂರು, ಕರೇಕಲ್ ದುರುಗಪ್ಪ, ಬ್ಯಾಲಾಳು ಮಂಜುನಾಥ, ಶಿವಕುಮಾರ, ಚಿಲುಗೋಡು ಮೈಲಪ್ಪ, ಮರಿಸ್ವಾಮಿ, ಲಿಂಗರಾಜ, ರಮೇಶ ಅಂಬಳಿ, ಹುಚ್ಚಂಗೆಪ್ಪ, ಅಂಬಳಿ ದೇವೆಂದ್ರಪ್ಪ ಇತರರಿದ್ದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಮಾದಿಗ ಸಮಾಜದವರು ಬೃಹತ್ ಅರೆಬೆತ್ತಲೆ ಮೆರವಣಿಗೆ ನಡೆಸಿ ಸರಕಾರವನ್ನು ಎಚ್ಚರಿಸಿದರು.