ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಶಿಬಿರವನ್ನು ಉದ್ಘಾಟಿಸಿ, ಇಂತಹ ಶಿಬಿರಗಳಿಂದ ಜನರಿಗೆ ಸಹಕಾರಿಯಾಗುತ್ತದೆ. ಸೇವಾ ಮನೋಭಾವವುಳ್ಳ ಸಂಘಟನೆಯಿಂದ ಇನ್ನೂ ಹೆಚ್ಚಿನ ಕಾರ್ಯಗಳು ಆಗಲಿ ಎಂದು ಶುಭ ಹಾರೈಸಿದರು. ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಸುರೇಶ್ ಪ್ರಭು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯಾ ಶರತ್ ಶೆಟ್ಟಿ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ ಕುಮಾರ್, ಮಹಿಳಾ ಘಟಕದ ಲತಾ ಸುರೇಶ್, ನೋವಾ ಐವಿಎಫ್ ಸಂಸ್ಥೆಯ ವೈದ್ಯ ಡಾ. ಶವೀಝ್ ಫೈಝಿ, ಸೆರಾಕೇರ್ ಸಂಸ್ಥೆಯ ಸ್ವಾತಿ, ಹಿರಿಯ ನ್ಯಾಯವಾದಿ ಕೆ.ಆರ್. ಪಂಡಿತ್, ಪವರ್ ಫ್ರೆಂಡ್ಸ್ ಸಂಸ್ಥೆಯ ಬಹುತೇಕ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸೆರಾಕೇರ್ ಸಂಸ್ಥೆಯಿಂದ 149 ಮತ್ತು 52 ಮಂದಿ ಬಂಜೆತನ ತಪಾಸಣೆ ಮಾಡಿಸಿಕೊಂಡರು. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.