)
ಕನ್ನಡಪ್ರಭ ವಾರ್ತೆ ಬೆಂಗಳೂರು
ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೈಸ್ ಸಂಸ್ಥೆಯ ಪೂರ್ಣ ಹೂಡಿಕೆಗೆ ಹೋಲಿಸಿದರೆ ಸುಮಾರು ಶೇ.40ರಷ್ಟು ಲಾಭ ಮಾಡಲಾಗಿದೆ. ವಾರ್ಷಿಕ ಸುಮಾರು 730 ಕೋಟಿ ರು. ಟೋಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಸುಮಾರು 4,500 ಕೋಟಿ ರು. ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ ನಿರ್ವಹಣಾ ವೆಚ್ಚವೂ ಸೇರಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಒಪ್ಪಂದದ ಅವಧಿ 30 ವರ್ಷವಾಗಿದ್ದು, ನಿರ್ವಹಣೆಯೂ ಆ ಅವಧಿಯಲ್ಲಿ ನೈಸ್ ಕಂಪನಿಯ ಜವಾಬ್ದಾರಿ ಆಗಿರುತ್ತದೆ. ವರದಿ ಪ್ರಕಾರ ಆದಾಯವು ಹೂಡಿಕೆಯನ್ನು ಮೀರಿದೆ ಎಂದು ಹೇಳಿದರು.
ಫಾಸ್ಟ್‌ಟ್ಯಾಗ್ ಅಳವಡಿಸುವ ಮೊದಲು ವಾರ್ಷಿಕ ಟೋಲ್ ಆದಾಯ 60–70 ಕೋಟಿ ರು. ಎಂದು ಘೋಷಿಸಲಾಗಿತ್ತು. 2022ರಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆ ಬಳಿಕ ಆ ಮೊತ್ತ ಸುಮಾರು 700 ಕೋಟಿ ರು. ಎಂದು ತೋರಿಸಲಾಗಿದೆ ಎಂದು ವರದಿ ಹೇಳುತ್ತದೆ. ಅಲ್ಲಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಮೊದಲು ಭಾರೀ ಪ್ರಮಾಣದ ಹಣ ಲೂಟಿಯಾಗಿದೆ. ಈ ದೊಡ್ಡ ವ್ಯತ್ಯಾಸವು ಹಿಂದಿನ ಟೋಲ್ ಆದಾಯದ ಘೋಷಣೆ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ ಎಂಬುದು ತಿಳಿಯುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ ಎಂದು ದೂರಿದರು.ಖಾಸಗಿ ಸಂಸ್ಥೆ ವರದಿ ಬಿಡುಗಡೆಗೆ ಆಗ್ರಹ:
ಗುತ್ತಿಗೆದಾರ ಕವಚವಾಗಿ ಜಾತಿ ಹೆಸರು ಬಳಕೆ:
ಭಾರತ್ ಜೋಡೋ ಹಣ
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಬರ ನಿರ್ವಹಣೆಗೆ ಕೇಂದ್ರದಿಂದ 20,164 ಕೋಟಿ ರು. ಕೊಡುವಂತೆ ಕೇಳಿದ್ದಾರೆ. ಮತ್ತೊಂದು ಕಡೆ ಬರದ ನಷ್ಟ 20,585 ಕೋಟಿ ರು. ಎಂದು ಉಲ್ಲೇಖಿಸಲಾಗಿದೆ. ಬೆಳೆ ನಷ್ಟಕ್ಕೆ 6 ಸಾವಿರ ಕೋಟಿ ರು., ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನೋಪಾಯಕ್ಕೆ 12 ಸಾವಿರ ಕೋಟಿ ರು. ಜಾನುವಾರುಗಳ ಮೇವಿಗೆ 700 ಕೋಟಿ ರು.ಗೂ ಹೆಚ್ಚು ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ. ರೈತರು ಸಂಕಷ್ಟದಲ್ಲಿರುವಾಗ ‘ಭಾರತ್ ಜೋಡೋ’ ಹೆಸರಿನಲ್ಲಿ ಒಂದು ಸಾವಿರ ಕೋಟಿ ರು. ಕೊಡಲಾಗುತ್ತಿದೆ. ಅದರ ಬದಲು ಆ ಹಣವನ್ನು ರೈತರಿಗೆ ನೀಡಬೇಕಿತ್ತು ಎಂದು ಪ್ರಶ್ನೆಯೊಂದಕ್ಕೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.