ಕಡದಕಟ್ಟೆ ಗ್ರಾಪಂನಲ್ಲಿ ಭಾರೀ ಅವ್ಯವಹಾರ: ಜಗದೀಶ್

KannadaprabhaNewsNetwork |  
Published : Jul 17, 2026, 01:30 AM IST
16ಎಚ್.,ಎಲ್.ಐ1 ಎಚ್.ಕಡದಕಟ್ಟೆ ಗ್ರಾ.ಪಂ.ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಗಳ ಅವ್ಯವಹಾರ ಬಗ್ಗೆ ಕೂಡಲೇ ಗ್ರಾ.ಪಂ.ನ ಈ ಹಿಂದೆ ಇದ್ದ ಪಿಡಿಒಗಳು ಹಾಗೂ ಕೆಳ ಮಟ್ಟದ ಅಧಿಕಾರಿಗಳ ವಿರುದ್ದ ಲೋಕಾಯುಕ್ತಾ ತನಿಖೆಗೆ ಜಿ.ಪಂ.ಸಿಇಒ ಆದೇಶಿಸಬೇಕು ಎಂದು ರಾಜ್ಯ ರೈತ ಸಂಘ, ಹಾಗೂ ಕಾಂಗ್ರೆಸ್ ಮುಖಂಡ ಜಗದೀಶ್ ಆಗ್ರಹಿಸಿ ಮಾತನಾಡಿದರು.ಗ್ರಾಮಸ್ಥರಾದ ರವಿ.ಸಿಎಸ್., ಎಂ.ಎಚ್.ನಂದಿಶ್,ಚನ್ನೇಶ್,ಅಭಿಲಾಷ್ ಹಾಗೂ ಇತರರು ಇದ್ದರು | Kannada Prabha

ಸಾರಾಂಶ

ತಾಲೂಕಿನ ಎಚ್.ಕಡದಕಟ್ಟೆ ಗ್ರಾ.ಪಂ.ನಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದ್ದು, ಕೂಡಲೇ ಗ್ರಾ.ಪಂ.ನ ಈ ಹಿಂದೆ ಇದ್ದ ಪಿಡಿಒಗಳು ಹಾಗೂ ಕೆಳ ಮಟ್ಟದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಜಿಪಂ ಸಿಇಒ ಆದೇಶಿಸಬೇಕು ಎಂದು ರಾಜ್ಯ ರೈತ ಸಂಘ, ಕಾಂಗ್ರೆಸ್ ಮುಖಂಡ ಎಚ್.ಕಡದಕಟ್ಟೆ ಜಗದೀಶ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಎಚ್.ಕಡದಕಟ್ಟೆ ಗ್ರಾ.ಪಂ.ನಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದ್ದು, ಕೂಡಲೇ ಗ್ರಾ.ಪಂ.ನ ಈ ಹಿಂದೆ ಇದ್ದ ಪಿಡಿಒಗಳು ಹಾಗೂ ಕೆಳ ಮಟ್ಟದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಜಿಪಂ ಸಿಇಒ ಆದೇಶಿಸಬೇಕು ಎಂದು ರಾಜ್ಯ ರೈತ ಸಂಘ, ಕಾಂಗ್ರೆಸ್ ಮುಖಂಡ ಎಚ್.ಕಡದಕಟ್ಟೆ ಜಗದೀಶ್ ಆಗ್ರಹಿಸಿದರು.

ತಾಲೂಕಿನಲ್ಲಿ ಗುರುವಾರ ಎಚ್.ಕಡದಕಟ್ಟೆ ಗ್ರಾಪಂ ಕಚೇರಿಯಲ್ಲಿ ಆರ್‌ಟಿಐ ಮೂಲಕ ಎಲ್ಲಾ ಮಾಹಿತಿಗಳನ್ನು ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಬಿಜೆಪಿ ಸರ್ಕಾರದಲ್ಲಿ ಅತಿವೃಷ್ಟಿ ಉಂಟಾದ ವೇಳೆ ಸರ್ಕಾರ ಪರಿಹಾರ ಘೋಷಣೆ ಮಾಡಿದಾಗ ಒಂದೇ ಕುಟುಂಬದವರು ಬಿದ್ದಿರುವ ಮನೆಗಳೇ ಬೇರೆ ಆದರೆ ಬೇರೆಯವರು ಬೇರೆ ಜಾಗದಲ್ಲಿ ಳೆದ ಬಿಜೆಪಿ ಸರ್ಕಾರದಲ್ಲಿ ಅತಿವೃಷ್ಟಿ ಉಂಟಾದ ವೇಳೆ ಸರ್ಕಾರ ಪರಿಹಾರ ಘೋಷಣೆ ಮಾಡಿದಾಗ ಒಂದೇ ಕುಟುಂಬದವರು ಬಿದ್ದಿರುವ ಮನೆಗಳು ಬೇರೆಯವರ ಹಾಗೂ ಬೇರೆ ಬೇರೆ ಜಾಗದಲ್ಲಿ ಫೋಟೋ ತೆಗೆಯಿಸಿ ಪರಿಹಾರ ಪಡೆಯುವ ಮೂಲಕ ಸರ್ಕಾರದ ಹಣ ಲೂಟಿ ಮಾಡಿದ್ದಾರೆ, ಇದರಲ್ಲಿ ಗ್ರಾಪಂ ಸದಸ್ಯರೊಬ್ಬರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡದೇ 5 ಲಕ್ಷ ರು. ಬಿಲ್ ಡ್ರಾ ಮಾಡಿಕೊಂಡು ಹಣ ಪಟಾಯಿಸಿದ್ದಾರೆ,ಮತ್ತೆ 14-15 ನೇ ಹಣಕಾಸು ಯೋಜನೆಯಲ್ಲಿ ಹಿಂದೂ ರುದ್ರಭೂಮಿ ಕಾಮಗಾರಿಗೆ ಅನುದಾನವನ್ನು ಡ್ರಾ ಮಾಡಿದ್ದಾರೆ, ಆದರೆ ಕಾಮಗಾರಿ ನಡೆದೇ ಇಲ್ಲ, ಮತ್ತೆ 15 ನೇ ಹಣಕಾಸಿನಲ್ಲಿ ಒದೊಂದು ಐ ಮಾಸ್ಟ್ ದೀಪದ ಕಂಬಕ್ಕೆ 1.95 ಲಕ್ಷ ಡ್ರಾ ಮಾಡಿದ್ದಾರೆ, ಆದರೆ ಅದರ ಮೂಲ ಬೆಲೆ ಕೇವಲ 40 ರಿಂದ 50 ಸಾವಿರ ಮಾತ್ರ ಎಂದು ದೂರಿದರು.

ತಾನು ಒಬ್ಬ ಗ್ರಾಮಸ್ಥನಾಗಿ ಲೈಟ್ ಕಂಬಕ್ಕೆ ಬಲ್ಬ್ ಹಾಕಿ ಎಂದರೆ ಗ್ರಾ.ಪಂ. ಸದಸ್ಯರನ್ನು ಕೇಳಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ, ಹಾಗಾದರೆ ಅಧಿಕಾರಿಗಳು ಇರುವುದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವುದಕ್ಕೋ ಅಥವಾ ಗ್ರಾ.ಪಂ.ಸದಸ್ಯರು ಹೇಳಿದ ಹಾಗೆ ಕೇಳಲಿಕ್ಕೋ ಎಂದು ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೊತ್ತಿಲ್ಲದ ಹಾಗೇ ಮನೆ ಫೋಟೋ:

ಮತ್ತೊಬ್ಬ ಗ್ರಾಮಸ್ಥರಾದ ಶರತ್ ಮಾತನಾಡಿ, ಜಿಪಿಎಸ್ ಬಳಸಿ ನನಗೆ ಗೊತ್ತಿಲ್ಲದ ಹಾಗೆ ನನ್ನ ಮನೆ ಪೋಟೊ ತೆಗೆದು ಹಣ ಪಡೆದುಕೊಂಡಿದ್ದಾರೆ ಎಂದರೆ ಇವರೆಲ್ಲ ಕಡು ಭ್ರಷ್ಟರಿದ್ದಾರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡುವುದಾಗಿ ಹೇಳಿದರು.

ಪಿಡಿಒ ಹೊನ್ನಪ್ಪ ಮಾತನಾಡಿ, 2022 ರಲ್ಲಿ ಹರಿಹರದಿಂದ ಇಲ್ಲಿಗೆ ವರ್ಗಾವಣೆ ಆಗಿ ಬಂದ ನಂತರ ನನಗೆ ಎಚ್.ಕಡದಕಟ್ಟೆ ಗ್ರಾಪಂಗೆ ಕಳುಹಿಸದೆ ಹೊನ್ನಾಳಿ ತಾಪಂನಲ್ಲೇ ಇರುವಂತೆ ಅಂದಿನ ಇಒ ಸೂಚಿಸಿದ್ದರು, ನಂತರ ಅಪಘಾತ ಆಗಿದ್ದರಿಂದ ನಾನು ರಜೆ ಮೇಲೆ ಹೋದೆ, ನಂತರ ಬಂದಾಗ ನನಗೆ ತಿಮ್ಲಾಪುರ ಗ್ರಾ.ಪಂ.ಗೆ ಪಿಡಿಒ ಆಗಿ ಹೋದೆ, ಆಗ ಮೂಲಸ್ಥಾನಗಳಿಗೆ ಹೋಗಬೇಕು ಎಂದು ಸರ್ಕಾರದ ಆದೇಶ ಬಂದ ನಂತರ ಮತ್ತೆ ಎಚ್,ಕಡದಕಟ್ಟೆಗೆ ಗ್ರಾಪಂಗೆ ಪಿಡಿಒ ಆಗಿ ಬಂದೆ, ಈಗ ಗ್ರಾಮಸ್ಥರು ಹಲವಾರು ಆರೋಪ ಮಾಡಿದ್ದಾರೆ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಗ್ರಾಮಸ್ಥರಾದ ರವಿ ಸಿ.ಎಸ್., ಎಂ.ಎಚ್.ನಂದೀಶ್, ಚನ್ನೇಶ್, ಅಭಿಲಾಷ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಗನ್ನಡ ಅಭಿವ್ಯಕ್ತಿ ಕೌಶಲಗಳ ಶೋಧನೆ ಅಗತ್ಯ
ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ; ಮುನಿಯಪ್ಪ