ರೈತ ಪರ ಯತ್ನಾಳ ನೇತೃತ್ವದಲ್ಲಿ ಬೃಹತ್‌ ಹೋರಾಟ

KannadaprabhaNewsNetwork |  
Published : Oct 13, 2026, 03:00 AM IST
ರೈತರಿಗಾಗಿ ಆರು ತಿಂಗಳ ನಾನು ಸಂಬಳ ಕೊಡುವೆ: ಶಾಸಕ ಯತ್ನಾಳ | Kannada Prabha

ಸಾರಾಂಶ

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ರೈತರಿಗೆ ಹೆಚ್ಚಿನ ಬರ ಪರಿಹಾರ ನೀಡಬೇಕು. ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆಯಲ್ಲಿ ವಿಜಯಪುರದಲ್ಲಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಜತೆಗೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಆಧಾರ ರಹಿತವಾಗಿ ಆರೋಪಿಸಿ, ತೇಜೋವಧೆ ಮಾಡುತ್ತಿರುವ ಕಾಂಗ್ರೆಸ್ ಧೋರಣೆಯನ್ನು ಖಂಡಿಸಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ರೈತರಿಗೆ ಹೆಚ್ಚಿನ ಬರ ಪರಿಹಾರ ನೀಡಬೇಕು. ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆಯಲ್ಲಿ ವಿಜಯಪುರದಲ್ಲಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಜತೆಗೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಆಧಾರ ರಹಿತವಾಗಿ ಆರೋಪಿಸಿ, ತೇಜೋವಧೆ ಮಾಡುತ್ತಿರುವ ಕಾಂಗ್ರೆಸ್ ಧೋರಣೆಯನ್ನು ಖಂಡಿಸಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು, ಮಹಾತ್ಮಗಾಂಧಿ ಚೌಕ, ಬಸವೇಶ್ವರ ಸರ್ಕಲ್, ಡಾ.ಅಂಬೇಡ್ಕರ ಮಾರ್ಗವಾಗಿ ಡಿಸಿ ಕಚೇರಿ ಬಳಿ ಬೃಹತ್ ವೇದಿಕೆ ಕಾರ್ಯಕ್ರಮ ಜರುಗಿತು. ಆರಂಭದಲ್ಲಿ ಸಿದ್ದೇಶ್ವರ ದೇವಸ್ಥಾನದ ಬಳಿ ಗೋಮಾತೆಗೆ ಪೂಜೆ ನೆರವೇರಿಸಿ ಪ್ರತಿಭಟನೆಗೆ ಚಾಲನೆ ನೀಡಿದ ಶಾಸಕರು ಜೋಡೆತ್ತುಗಳ ಗಾಡಿಗಳ ಜೊತೆಗೆ ಹೋರಾಟ ಆರಂಭಿಸಿದರು. ಈ ವೇಳೆ ಸಾವಿರಾರು ರೈತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇದೇ ವೇಳೆ ಕೆಲ ಯುವಕರು ಜೆಸಿಬಿ ಚಿತ್ರದ ಬಾವುಟ ಕೂಡ ಪ್ರದರ್ಶಿಸಿದರು.ಹೋರಾಟದ ವೇದಿಕೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಯಾವೊಬ್ಬ ಶಾಸಕರು, ಸಚಿವರು ಇದರ ಬಗ್ಗೆ ಮಾತನಾಡುತ್ತಿಲ್ಲ. ಬರಗಾಲದ ಹಿನ್ನೆಲೆ ರೈತರ ಪರಿಹಾರಕ್ಕಾಗಿ ನಾನು ನನ್ನ ಆರು ತಿಂಗಳ ಸಂಬಳ‌ವನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತೇನೆ. ನನ್ನಂತೆ ಉಳಿದ ಶಾಸಕರು ತಮ್ಮ‌ ಸಂಬಳ‌ವನ್ನು ಬಿಡಲಿ ನೊಡೋಣ ಎಂದು ಸವಾಲು ಹಾಕಿದರು. ಬರಗಾಲದಲ್ಲಿ ರೈತರಿಗೆ ₹2500 ಭಿಕ್ಷಾರೂಪದ ಹಣ ನೀಡಲು ಮುಂದಾಗಿರುವ ಮಾನಗೇಡಿ ಸರ್ಕಾರಕ್ಕೆ ಧಿಕ್ಕಾರ ಹೇಳಬೇಕು. ಇದೇ ತಿಂಗಳೊಳಗಾಗಿ ರೈತರಿಗೆ ಸೂಕ್ತ ಪರಿಹಾರ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ರೈತರಿಗೆ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ಕೊಡದಿದ್ದರೆ ಮುಂದಿನ ಅಧಿವೇಶನದಲ್ಲಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಇನ್ನು ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಹೀಗೆ ಮುಂದುವರೆದರೆ ಇನ್ನಾರು ತಿಂಗಳಿನಲ್ಲಿ ಸರ್ಕಾರ ದಿವಾಳಿಯಾಗಲಿದೆ ಎಂದು ಭವಿಷ್ಯ ನುಡಿದರು.ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:

ಭೀಕರ ಬರಗಾಲದಿಂದ ರೈತರು ತತ್ತರಿಸಿದ್ದು, ಈ ರಾಜ್ಯ ಸರ್ಕಾರ ₹2500 ಪರಿಹಾರ ಕೊಡುತ್ತಿದ್ದಾರೆ. ನಾಚಿಕೆಯಾಗಬೇಕು ಸರ್ಕಾರಕ್ಕೆ. ಮಂತ್ರಿ ಮಾಡದಿದ್ದರೆ ರಾಜೀನಾಮೆ ಕೊಡಲು ಮುಂದಾಗುವ ಶಾಸಕರು, ರೈತರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಪ್ರತಿ ರೈತರಿಗೆ ₹2500 ಪರಿಹಾರ ಕೊಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಹೇಳುತ್ತಾರೆ. ಆದರೆ ನಮ್ಮ ನಗರದಲ್ಲಿ ತರಕಾರಿ ಮಾರುವವರು, ಕೂಲಿ ಕಾರ್ಮಿಕರು ದಿನಕ್ಕೆ ₹2500 ಗಳಿಸುತ್ತಿದ್ದಾರೆ. ಹಾಗಾಗಿ ರೈತರ ಪ್ರತಿ ಎಕರೆಗೆ ₹10 ಸಾವಿರ ಪರಿಹಾರ ಕೊಡಲು ಈ ಸರ್ಕಾರಕ್ಕೆ ಆಗುವುದಿಲ್ಲವೇ?. ಶಾಸಕರೆಲ್ಲ ದುಬೈ, ಅಮೆರಿಕ, ಮಾರಿಷಿಸ್‌ನಲ್ಲಿ ಆಸ್ತಿ ಮಾಡುತ್ತಾರೆ. ಹೆಣ್ಣುಮಕ್ಕಳಿಗೆ ಬಸ್ ಫ್ರೀ ಎನ್ನುತ್ತಾರೆ, ಪುರುಷರಿಗೆ ಟಿಕೆಟ್‌ ದರ ಡಬಲ್ ಮಾಡುತ್ತಾರೆ. ವಿದ್ಯುತ್ ಫ್ರೀ ಎನ್ನುತ್ತಾರೆ, ಸರಿಯಾಗಿ ವಿದ್ಯುತ್ ಕೊಡುವುದಿಲ್ಲ, ಕರೆಂಟ್ ರೇಟು ಹೆಚ್ಚಿಸಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ಹುಟ್ಟಿದರೂ ಹಣ, ಸತ್ತರೂ ಹಣ ಎಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದರು.ಸರ್ಕಾರ ಕೊಡುವ ಜುಜುಬಿ ₹2500 ಪರಿಹಾರವನ್ನು ಅವರೇ ಇಟ್ಟುಕೊಳ್ಳಲಿ, ವಿಜಯಪುರ ಜಿಲ್ಲೆಯ ಸಚಿವ ಎಂ.ಬಿ.ಪಾಟೀಲರಿಗೆ ರೈತರಿಗೆ ₹2500 ಕೊಡುವ ತಾಕತ್ತು ಇದೆ. ಆದರೆ ಕೊಡುವುದಿಲ್ಲ. ದುರಂತ ಎಂದರೆ ಕಾಂಗ್ರೆಸ್‌ನಲ್ಲಿ ಟಾಪ್ 10 ಆಗಿರುವ ಎಚ್.ಕೆ.ಪಾಟೀಲರೇ ಬರಗಾಲ ಘೋಷಣೆ ಮಾಡದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎನ್ನುವ ಸ್ಥಿತಿ ಈ ಸರ್ಕಾರಕ್ಕೆ ಬಂದಿದೆ ಎಂದರು. ಗುತ್ತಿಗೆದಾರರ ₹30 ಸಾವಿರ ಕೋಟಿ ಬಿಲ್ ಕೊಟ್ಟಿಲ್ಲ. ಸಂಘದ ಅಧ್ಯಕ್ಷರೇ ಯಾವ ಶಾಸಕ ಎಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತೇನೆ ಎಂದಮೇಲೆ ₹2500 ಕೋಟಿ ಕೊಟ್ಟಿದ್ದಾರೆ ಎಂದರು.ಅಹಿಂದ ಅಹಿಂದ ಎನ್ನುತ್ತಿದ್ದ ಸಿದ್ದರಾಮಯ್ಯನವರ ಪರಿಸ್ಥಿತಿ ಇಂದು ಏನಾಗಿದೆ? ಬಾಯಿ ತೆಗೆದರೆ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೊಟಿ ಸಹಾಯ ಎನ್ನುತ್ತಿದ್ದರು. ಆದರೆ ಅದೇ ಸಿದ್ರಾಮಯ್ಯನಿಗೆ ಸಿಎಂ ಕುರ್ಚಿಯಿಂದ ಇಳಿಸಿದಾಗ ಒಬ್ಬ ಮುಸ್ಲಿಂ ವ್ಯಕ್ತಿಯೂ ಮಾತನಾಡಲಿಲ್ಲ. ಇದನ್ನೆಲ್ಲ ಕಾಂಗ್ರೆಸ್‌ನಲ್ಲಿರುವ ಹಿಂದೂಗಳು ಅರಿಯಬೇಕು. ನಮ್ಮ ಜಿಲ್ಲೆಯ ಎಂ.ಬಿ.ಪಾಟೀಲರೂ ಮುಸ್ಲಿಮರ ಪರವಾಗಿ ಒಲವು ತೋರಿಸುತ್ತಾರೆ. ಆದರೆ ನೀವು ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಬಬಲೇಶ್ವರದಲ್ಲಿ ಕೇವಲ ಅಲ್ಪಸಂಖ್ಯಾತರು ಮಾತ್ರ ಓಟು ಹಾಕಬೇಕಾಗುತ್ತದೆ. ಆಗ ಅಲ್ಲಿ ಬೇರೆ ಅಭ್ಯರ್ಥಿ ಚುನಾಯಿತರಾಗಲಿದ್ದಾರೆ. ನಾವು ಎಲ್ಲದಕ್ಕೂ ಸಿದ್ಧವಿದ್ದು, ಎಂಟು ಕ್ಷೇತ್ರಕ್ಕೆ ಎಂಟು ಕ್ಯಾಂಡಿಡೇಟ್ ರೆಡಿ ಮಾಡಿದ್ದೇವೆ. ಮುಂದೆ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ರೆಡಿ ಮಾಡಲಿದ್ದೇವೆ. ಜಿಲ್ಲೆಯಲ್ಲಿ ನೀವು ಯಾರ್ಯಾರು ಹಾರಾಡ್ತಿರಿ ವಿಜಯಪುರದಲ್ಲಿ ಅವರನ್ನೆಲ್ಲ ಶಾಸಕರನ್ನಾಗಿಸುವುದಿಲ್ಲ ಎಂದರು. ಇನ್ನು ಎಸ್ಐಆರ್‌ ವಿಚಾರದಲ್ಲಿ ಇನ್ನಿಲ್ಲದ ಗೊಂದಲ‌ ಮೂಡಿಸುತ್ತಿದ್ದಾರೆ. ಮುಖ್ಯಚುನಾವಣಾಧಿಕಾರಿ ಜ್ಞಾನೇಶಕುಮಾರ ಅವರ ಪದಚ್ಯುತಿ ಮಾಡಬೇಕೆಂದು ದೇಶದ್ರೋಹಿ ಸಂಘಟನೆಗಳು, ವಿರೋಧ ಪಕ್ಷಗಳು ದೇಶದಲ್ಲಿ ಅರಾಜಕತೆ ನಡೆಸಿವೆ. ಚುನಾವಣಾಧಿಕಾರಿ ಜ್ಞಾನೇಶಕುಮಾರಗೆ ಬೆಂಬಲಿಸುವ ಮೂಲಕ ಜಿಲ್ಲಾಧಿಕಾರಿಗಳ‌ ಮೂಲಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಚುನಾವಣಾ ಮುಖ್ಯಸ್ಥರಿಗೆ ಮನವಿ ನೀಡುತ್ತಿದ್ದೇವೆ. ಎಸ್ಐಆರ್‌ನಲ್ಲಿ ಎಲ್ಲ ಕಡೆಗಳಲ್ಲಿ ಒಂದೇ ಹೆಸರಿನವರು ಮೂರು ನಾಲ್ಕು ಕಡೆಗಳಲ್ಲಿದ್ದಾರೆ. ಕಾಂಗ್ರೆಸ್ ಮುಖಂಡನೊಬ್ಬ ಬಿ.ಎಲ್‌.ಎ 2ರಂದು ನೇಮಕವಾಗಿದ್ದು, ಆತನೇ ತನ್ನ ತಂದೆ 2025ರಲ್ಲಿ ಸತ್ತಿದ್ದರೂ ಇನ್ನೂ ತನ್ನ ತಂದೆಯ ಮತ ಉಳಿಸಿದ್ದಾನೆ. ಈ ರೀತಿ ಗೂಂಡಾಗಿರಿ ಮಾಡಿ ಮುಂದಿನಬಾರಿ ಚುನಾಯಿತರಾಗಬೇಕೆಂಬ ಉದ್ದೇಶ ಕಾಂಗ್ರೆಸ್‌ನವರು ಇಟ್ಟುಕೊಂಡಿದ್ದು, ಅದು ಆಗುವುದಿಲ್ಲ. ನಮ್ಮದೂ ಟೀಂ ರೆಡಿಯಿದೆ. ವಿಜಯಪುರದಲ್ಲಿ ಗೂಂಡಾಗಿರಿ ನಡೆಯುವುದಿಲ್ಲ. ಎಂಟೂ ಕ್ಷೇತ್ರಗಳಲ್ಲಿ ನಮ್ಮದೇ ಧ್ವಜ ಹಾರಲಿದೆ ಎಂದರು.ಇದರ ನಡುವೆ ಇದೀಗ ದೇಶದ್ರೋಹಿ ಕಾಕ್ರೋಚ್‌ ಪಾರ್ಟಿ ಬಂದಿದೆ. ಕಾಕ್ರೋಚ್‌ ಹೊಡೆಯಲು ಹೇಗೆ ಹಿಟ್ ಬಳಸುತ್ತಾರೋ ಹಾಗೆಯೇ ಈ ಕಾಕ್ರೋಚ್‌ ಪಾರ್ಟಿ ಹೊಡೆಯಲು ಕೇಂದ್ರದಲ್ಲಿ ನರೇಂದ್ರ ಮೋದಿ ಎಂಬ ಹಿಟ್ ಇದೆ. ಯೋಗಿ ಆದಿತ್ಯನಾಥ ಎಂಬ ಹಿಟ್ ಇದೆ, ಇನ್ನು ರಾಜ್ಯದಲ್ಲಿ ನಾವು ಇದ್ದೇವೆ ಎಂದರು. ಹೋರಾಟದಲ್ಲಿ ಮುಖಂಡರಾದ ದಯಾಸಾಗರ ಪಾಟೀಲ, ಎಂ.ಎಸ್.ರುದ್ರಗೌಡರ, ಎಂ.ಎಸ್.ಕರಡಿ, ಶಂಕರ ಹೂಗಾರ, ಚಂದ್ರು ಚೌಧರಿ, ಪ್ರಭು ದೇಸಾಯಿ, ರಾಜಶೇಖರ ಕುರಿಯವರ, ಗುರು ಗಚ್ಚಿನಮಠ, ಗಿರೀಶ ಪಾಟೀಲ, ಅಪ್ಪುಗೌಡ ಪಾಟೀಲ ಮನಗೂಳಿ ಸೇರಿದಂತೆ ಸಾವಿರಾರು ರೈತರು,‌ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನಾ ಪಾಟೇಕರ್ ನಿಧನಕ್ಕೆ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸಂತಾಪ
ಬೇಡಿಕೆ ಈಡೇರಿಸದೇ ವಾಪಸ್‌ ಕಳಿಸಿದ ಕೇಂದ್ರ ಸರ್ಕಾರ