ಎಸ್‌ಐಆರ್‌ ಖಂಡಿಸಿ ನ. 1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Oct 27, 2026, 02:15 AM IST
ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ಮಾಜಿ ಶಾಸಕ ಸುನೀಲ ನಾಯ್ಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಎಸ್‌ಐಆರ್‌ ಮೂಲಕ ಚುನಾವಣೆ ಆಯೋಗವು ಕೋಟ್ಯಂತರ ಮತದಾರರ ಹೆಸರು ಡಿಲಿಟ್‌ ಮಾಡಿ, ನಕಲಿ ಮತದಾರರನ್ನು ಸೇರಿಸಿ ಮತ ಕಳವು (ವೋಟ್‌ ಚೋರಿ) ಮಾಡುವ ಮೂಲಕ ಪ್ರಜ್ರಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ.

ಹುಬ್ಬಳ್ಳಿ:

ಎಸ್‌ಐಆರ್‌ ಮೂಲಕ ಚುನಾವಣೆ ಆಯೋಗವು ಕೋಟ್ಯಂತರ ಮತದಾರರ ಹೆಸರು ಡಿಲಿಟ್‌ ಮಾಡಿ, ನಕಲಿ ಮತದಾರರನ್ನು ಸೇರಿಸಿ ಮತ ಕಳವು (ವೋಟ್‌ ಚೋರಿ) ಮಾಡುವ ಮೂಲಕ ಪ್ರಜ್ರಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಇದಕ್ಕೆ ಕಾರಣೀಭೂತರಾದ ಮುಖ್ಯಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ದೇಶವ್ಯಾಪಿ ಚಳವಳಿ ಹಮ್ಮಿಕೊಂಡಿದ್ದು, ನ. 1ರಂದು ಹೊಸದೆಹಲಿ ರಾಮಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಎಐಸಿಸಿ ವೀಕ್ಷಕ ಕಮಲೇಶ್ವರ ಪಟೇಲ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನು ಕೈಬಿಟ್ಟು, ಪ್ರಧಾನಿ ಮತ್ತು ಅವರ ಸಂಪುಟ ಸಚಿವರನ್ನೊಳಗೊಂಡ ಸಮಿತಿಯು ಆಯೋಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಚುನಾವಣಾ ಆಯುಕ್ತರಿಗೆ ಕ್ರಿಮಿನಲ್‌ ಪ್ರಕರಣಗಳಿಂದ ದೊಡ್ಡ ಮಟ್ಟದ ರಕ್ಷಣೆ ನೀಡಿದೆ. ಇದರ ನೇರ ಪರಿಣಾಮವಾಗಿ ಆಯುಕ್ತ ಜ್ಞಾನೇಶ್‌ ಕುಮಾರ್‌ ನೇತೃತ್ವದ ಆಯೋಗವು ಎಸ್‌ಐಆರ್‌ ಮತ್ತು ಫಾರ್ಮ್‌-6 ದುರ್ಬಳಕೆ ಮಾಡಿಕೊಂಡು ದೇಶಾದ್ಯಂತ ಸುಮಾರು 13.3 ಕೋಟಿ ಅರ್ಹ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಕಡಿತಗೊಳಿಸಿದೆ ಎಂದು ದೂರಿದರು.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ಬೆಂಗಳೂರಿನ ಮಹದೇವಪುರ ಕ್ಷೇತ್ರ, ಆಳಂದ, ಹರಿಯಾಣಾ, ಮಹಾರಾಷ್ಟ್ರ ಹೀಗೆ ನಾನಾ ರಾಜ್ಯಗಳಲ್ಲಿನ ಅಕ್ರಮಗಳ ಕುರಿತು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಆಯೋಗದಲ್ಲಿ ಇತರ ಸದಸ್ಯರ ಅಭಿಪ್ರಾಯ ಆಲಿಸದೇ ಜ್ಞಾನೇಶಕುಮಾರ ಏಕಪಕ್ಷೀಯವಾಗಿ ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನಬದ್ಧ ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಈ ಅಕ್ರಮದ ವಿರುದ್ಧ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ `ಇಂಡಿಯಾ'''''''' ಮೈತ್ರಿಕೂಟ ರಾಷ್ಟ್ರವ್ಯಾಪಿ ವೋಟ್‌ ಬಚಾವೋ ದೇಶ್‌ ಬಚಾವೋ ಜನಾಂದೋಲನ ಆರಂಭಿಸಿದೆ. ಅಕ್ಟೋಬರ್‌ 10ರಿಂದ ಆರಂಭವಾಗಿರುವ ಈ ಜನಾಂದೋಲನವು ನವೆಂಬರ್‌ 26ರ ಸಂವಿಧಾನ ದಿನದ ವರೆಗೆ ನಿರಂತರವಾಗಿ ನಡೆಯಲಿದೆ. ನ. 1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ನ. 25 ಮತ್ತು 26ರಂದು ದೇಶಾದ್ಯಂತ ಲಕ್ಷಾಂತರ ಕಾರ್ಯಕರ್ತರು ಪಾಲ್ಗೊಳ್ಳುವ ದೆಹಲಿ ಚಲೋ ಮಹಾ ಆಂದೋಲನ ಆಯೋಜಿಸಲಾಗಿದೆ ಎಂದು ಪಟೇಲ್‌ ತಿಳಿಸಿದರು.

ಬ್ಯಾಲೆಟ್‌ ಪೇಪರ್‌ ಮೂಲಕವೇ ಚುನಾವಣೆ ನಡೆಸಬೇಕು, ಅಕ್ರಮವಾಗಿ ತೆಗೆದುಹಾಕಲಾದ ಮತದಾರರ ಹೆಸರು ಮರುಸೇರ್ಪಡೆ ಮಾಡಬೇಕು ಹಾಗೂ ಪ್ರಧಾನಿ ಮೋದಿ, ಅಮಿತ್‌ ಶಾ ಮತ್ತು ಚುನಾವಣಾ ಆಯುಕ್ತರು ರಾಜೀನಾಮೆ ನೀಡುವ ವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಸಿಡಬ್ಲ್ಯೂಸಿ ನಿರ್ಣಯ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.ಹು-ಧಾ ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ ಸದಾನಂದ ಡಂಗನವರ, ಗ್ರಾಮೀಣ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್‌‍, ವಿಪ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ, ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಲಿಂಬಿಕಾಯಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಮುಖಂಡರಾದ ಅನಿಲ ಪಾಟೀಲ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ರಾಮಾಯಣ ಗ್ರಂಥ ಕೊಡುಗೆ ನೀಡಿದ ಆದಿಕವಿ: ಮಹಾಂತಗೌಡ
ಹುಣ್ಣಿಮೆ ದಿನ ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ!