ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರಾದ ಚನ್ನಪ್ಪ ವಿಜಯಕರ, ಹರೀಶ್ ನಾಟಿಕಾರ, ಜಿಲ್ಲಾ ದೌರ್ಜನ್ಯ ಸಮಿತಿಯ ಸದಸ್ಯ ಮಲ್ಲು ತಳವಾರ, ಸಾಹಿತಿ ಶಿವಪ್ರುತ್ರ ಅಜಮನಿ, ಪಿ.ಎಚ್.ಉಪ್ಪಲದಿನ್ನಿ, ಪಿ.ಬಿ.ಢವಳಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಕ್ಕೆ ನಾಗಮೋಹನದಾಸ್ ನೀಡಿರುವ ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದೆ. ಇದರಿಂದ ಮೀಸಲಾತಿ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆಯಾಗಲಿದೆ. ಸರ್ಕಾರ ವರದಿಯನ್ನು ಮರು ಪರಿಶೀಲನೆ ಮಾಡಬೇಕು. ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಿ, ನಂತರ ಒಳ ಮೀಸಲಾತಿ ವರದಿ ಜಾರಿ ಮಾಡಬೇಕು. ಈಗಾಗಲೇ ನೀಡಿರುವ ಒಳ ಮೀಸಲಾತಿಯಲ್ಲಿ ಹೊಲೆಯ ಬಲಗೈ ಜಾತಿಗೆ ಸೇರಿದ ವಿವಿಧ ಉಪ ಜಾತಿಗಳ ದತ್ತಾಂಶವನ್ನೂ ಒಟ್ಟುಗೂಡಿಸಿ ಸರ್ಕಾರ ಒಳ ಮೀಸಲಾತಿ ವರದಿ ಜಾರಿ ಮಾಡಬೇಕು. ಈ ಕುರಿತು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.ಬ್ಲಾಕ್ ಕಾಂಗ್ರೆಸ್ ಎಸ್ಸಿ ತಾಲೂಕು ಅಧ್ಯಕ್ಷ ಶ್ರೀಕಾಂತ್ ಚಲವಾದಿ, ಪ್ರಕಾಶ್ ಸರೂರ, ಯಲ್ಲಪ್ಪ ಅಜಮನಿ, ಮಹಾಂತೇಶ್ ಚಲವಾದಿ, ಶರಣ್ಣು ಚಲವಾದಿ, ಸಂಗು ನೇಬಗೇರಿ, ಸಿದ್ದು ಚಲವಾದಿ, ಮಂಜುನಾಥ್ ಬಸರಕೋಡ, ಪ್ರಕಾಶ್ ಕಾಳೆ, ಯಲ್ಲಪ್ಪ ಹಡಲಗೇರಿ, ಮಂಜುನಾಥ್ ಕಟ್ಟಿಮನಿ, ದೇವರಾಜ್ ಹಂಗರಗಿ, ಬಸವರಾಜ್ ಸರೂರ, ಸಂಗಣ್ಣ ಬಿದರಕುಂದಿ, ಮಂಜುನಾಥ್ ಚಲವಾದಿ, ಎಚ್.ಆರ್.ಗಂಜಳ, ಕೆ.ಎಂ.ಇಬ್ರಾಹಿಂಪೂರ ಸೇರಿದಂತೆ ಹಲವರು ಇದ್ದರು.