ಸರ್ಕಾರಿ ಪರವಾನಗಿ ಭೂ ಮಾಪಕರ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂನ್ ೨೩ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸುಮಾರು ೨೫ ಸಾವಿರ ನೊಂದ ಪರವಾನಗಿ ಭೂ ಮಾಪಕರು ಅವರ ಕುಟುಂಬಸ್ಥರು ಹಾಗೂ ಹಲವು ರೈತ ಸಂಘಟನೆಳೊಂದಿಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ಜಿಲ್ಲಾಧ್ಯಕ್ಷ ಸಿ. ರವಿಕುಮಾರ್ ತಿಳಿಸಿದರು. ಈಗ ಹೊಸತಾಗಿ ಸರ್ಕಾರ ನೇಮಕ ಮಾಡಿಕೊಳ್ಳುವುದಕ್ಕೆ ಹೊರಡಿಸಿರುವ ಆದೇಶ ರದ್ದುಪಡಿಸಿ ಮೊದಲು ತಮ್ಮ ಬೇಡಿಕೆ ಈಡೇರಿಸಬೇಕು ಎಂಬಿವೇ ಮೊದಲಾದವನ್ನು ಒತ್ತಾಯಿಸಿ ಜೂ.೨೩ರಂದು ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ಪರವಾನಗಿ ಭೂ ಮಾಪಕರ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂನ್ ೨೩ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸುಮಾರು ೨೫ ಸಾವಿರ ನೊಂದ ಪರವಾನಗಿ ಭೂ ಮಾಪಕರು ಅವರ ಕುಟುಂಬಸ್ಥರು ಹಾಗೂ ಹಲವು ರೈತ ಸಂಘಟನೆಳೊಂದಿಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ಜಿಲ್ಲಾಧ್ಯಕ್ಷ ಸಿ. ರವಿಕುಮಾರ್ ತಿಳಿಸಿದರು.ಮುಷ್ಕರದಲ್ಲಿ ಹಾಸನ ವಿಭಾಗದ ಸುಮಾರು ೨ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಬೇಡಿಕೆ ಈಡೇರಿಕೆಗಾಗಿ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಈ ರ್ಯಾಲಿ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಭೂ ಮಾಪನದ ಒಂದು ಕೆಲಸ ಮುಗಿಸಿರೆ ಕೇವಲ ₹ ೧೨೦೦ ನೀಡಲಾಗುತ್ತಿದೆ. ಒಂದು ವೇಳೆ ವ್ಯಾಜ್ಯ, ವಿವಾದಗಳಿಂದ ಅಡ್ಡಿಯುಂಟಾದಲ್ಲಿ ಕೇವಲ ೩೬೦ ರು. ನೀಡಲಾಗುತ್ತಿದೆ. ತಾವು ಸಹ ಸರ್ಕಾರಿ ಭೂ ಮಾಪಕರಂತೆಯೇ ವಿದ್ಯಾಭ್ಯಾಸ ಮಾಡಿ, ತರಬೇತಿ, ಪರೀಕ್ಷೆ ಉತ್ತೀರ್ಣ ಅರ್ಹತೆಯುಳ್ಳವರಾಗಿದ್ದಾರೆ. ಆದರೂ ಸರ್ಕಾರ ತಾವು ಸರ್ಕಾರಿ ಭೂಮಾಪಕರಷ್ಟೇ ಕೆಲಸ ಮಾಡಿದರೂ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿ ಅನುಸರಿಸುತ್ತಿಲ್ಲ. ಹೀಗಾಗಿ ತಮ್ಮ ಸೇವೆ ಕಾಯಂಗೊಳಿಸಬೇಕು, ಈಗ ಹೊಸತಾಗಿ ಸರ್ಕಾರ ನೇಮಕ ಮಾಡಿಕೊಳ್ಳುವುದಕ್ಕೆ ಹೊರಡಿಸಿರುವ ಆದೇಶ ರದ್ದುಪಡಿಸಿ ಮೊದಲು ತಮ್ಮ ಬೇಡಿಕೆ ಈಡೇರಿಸಬೇಕು ಎಂಬಿವೇ ಮೊದಲಾದವನ್ನು ಒತ್ತಾಯಿಸಿ ಜೂ.೨೩ರಂದು ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ರಾಜ್ಯದಲ್ಲಿ ಭೂ ಸರ್ವೆಗೆ ಗ್ರಹಣ : ಸರ್ಕಾರ-ಭೂಮಾಪಕರ ಸಮರದಲ್ಲಿ ದರ್ಖಾಸ್ತು ಪೋಡಿ ಯೋಜನೆ ಸ್ಥಗಿತ, ರಾಜ್ಯದಲ್ಲಿ ತತ್ಕಾಲ್ ಪೌಡಿ, ೧೧ಇ ನಕ್ಷೆ, ಅಲಿನೇಷನ್ ನಕ್ಷೆ, ಹದ್ದುಬಸ್ತು, ಇ-ಸ್ವತ್ತು, ದರ್ಖಾಸ್ತು ಪೋಡಿ ಯೋಜನೆ, ಸ್ವಾಮಿತ್ವ ಅಳತೆ, ಸರಕಾರಿ ಜಮೀನುಗಳ ಅಳತೆ ಸೇರಿದಂತೆ ಎಲ್ಲ ರೀತಿಯ ಸರ್ವೆ ಪ್ರಕ್ರಿಯೆಗೆ ಕಳೆದ ೪ ತಿಂಗಳಿನಿಂದ ಗ್ರಹಣ ಹಿಡಿದಿದೆ. ಸೇವೆ ಕಾಯಂಗೆ ಆಗ್ರಹಿಸಿ ಪರವಾನಗಿ ಭೂಮಾಪಕರು ಫೆಬ್ರವರಿ ೨೦ರಿಂದ ಮುಷ್ಕರ ಕೈಗೊಂಡಿರುವುದರಿಂದ ಎಲ್ಲ ರೀತಿಯ ಭೂಮಿ ಅಳತೆ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಮುಖ್ಯವಾಗಿ ರಾಜ್ಯ ಕಂದಾಯ ಸಚಿವರ ಕನಸಿನ ಯೋಜನೆಯಾದ ದರ್ಖಾಸ್ತು ಪೋಡಿ, ಪೋಡಿ ಮುಕ್ತ ಗ್ರಾಮ ಯೋಜನೆಗಳೂ ಸ್ಥಗಿತಗೊಂಡಿವೆ. ಸರಕಾರಿ ಭೂಮಾಪಕರಿಗೆ ಸರಿಸಮಾನ ವೇತನ, ಸೌಲಭ್ಯ ನೀಡಬೇಕೆಂದು ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಭೂಮಾಪಕರ ಸಂಘ ಮುಷ್ಕರ ಕೈಗೊಂಡಿದೆ. ರಾಜ್ಯ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಬೇಡಿಕೆಯಷ್ಟು ಭೂಮಾಪಕರು ಇಲ್ಲದ ಕಾರಣ ರಾಜ್ಯ ಸರ್ಕಾರವು ಜೆಒಸಿ ಲ್ಯಾಂಡ್ ಮತ್ತು ಸಿಟಿ ಸರ್ವೆಯಿಂಗ್ ವೃತ್ತಿ ಶಿಕ್ಷಣ ಮಾಡಿದವರಿಗೆ ಪರವಾನಗಿ ಒದಗಿಸಿ ೧೯೯೮ರಲ್ಲಿ ಭೂಮಾಪನದ ಜವಾಬ್ದಾರಿಯನ್ನು ನೀಡಿತ್ತು. ರಾಜ್ಯದಲ್ಲಿ ಪರವಾನಗಿ ಪಡೆದ ೫,೦೮೨ ಭೂಮಾಪಕರು ಇದ್ದಾರೆ. ಆರಂಭದಲ್ಲಿ ಇವರಿಗೆ ಪ್ರತಿ ಸರ್ವೆಗೆ ೪೦೩ ರೂ. ಭತ್ಯೆ ನೀಡಲಾಗುತ್ತಿತ್ತು. ಬಳಿಕ ಇದನ್ನು ೬೦೦ ರು, ೮೦೦ ರು, ೧,೨೦೦ ರುಪಾಯಿಗಳಿಗೆ ಹೆಚ್ಚಳ ಮಾಡಲಾಯಿತು. ಮಾಸಿಕ ೨೩ ಸರ್ವೆಗಳನ್ನು ಕಡ್ಡಾಯವಾಗಿ ಮಾಡಬೇಕು. ಆದರೆ, ಅದರಲ್ಲಿ ಸಂಪೂರ್ಣ ಎಲೆ ಆಗುವಂತಹ ಪ್ರಕರಣಗಳಿಗೆ ಮಾತ್ರ ಭತ್ಯೆ ನೀಡಲಾಗುತ್ತದೆ. ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಮಾಸಿಕ ೮ರಿಂದ ೧೨ ಸಾವಿರ ರು. ಭತ್ಯೆ ಗಳಿಸಬಹುದು. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಭೂ ಮಾಪಕರು ಅಳಲು ತೋಡಿಕೊಂಡಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸರಕಾರಿ ಭೂಮಾಪಕರಂತೆ ನಮಗೂ ಸಮಾನ ಕೆಲಸ, ಸಮಾನ ಜವಾಬ್ದಾರಿ ಇದೆ. ಹಾಗಾಗಿ ನಮಗೂ ಸಮಾನ ವೇತನ ಮತ್ತು ಸೇವಾ ಭದ್ರತೆ ಸಿಗಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.