ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Nov 26, 2026, 01:30 AM IST
25ಎಚ್.ಎಲ್.ಐ1   ತಾಲೂಕು ಬಿಜೆಪಿ ಘಟಕದಿಂದ  ಬುಧವಾರ ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಬಸ್ಸು, ಹಾಲು, ಮೊಸರು, ದಿನಸಿ ಸೇರಿದಂತೆ ಎಲ್ಲಾ ವಸ್ತುಗಳ ಮೇಲೆ ಎರಡರಿಂದ ನಾಲ್ಕು ಪಟ್ಟು ದರ ಏರಿಕೆ ಮಾಡಿರುವುದು ಖಂಡಿಸಿ ಬಿಜೆಪಿ ತಾಲೂಕು ಘಟಕದಿಂದ ನೂರಾರು ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬುಧವಾರ ರಸ್ತೆತಡೆ ಚಳವಳಿ ನಡೆಸಿ ಟೈರ್‌ಗೆ ಬೆಂಕಿ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ಮೆರವಣಿಗೆ ಮಾಡಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದಲ್ಲಿ ಬಸ್ಸು, ಹಾಲು, ಮೊಸರು, ದಿನಸಿ ಸೇರಿದಂತೆ ಎಲ್ಲಾ ವಸ್ತುಗಳ ಮೇಲೆ ಎರಡರಿಂದ ನಾಲ್ಕು ಪಟ್ಟು ದರ ಏರಿಕೆ ಮಾಡಿರುವುದು ಖಂಡಿಸಿ ಬಿಜೆಪಿ ತಾಲೂಕು ಘಟಕದಿಂದ ನೂರಾರು ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬುಧವಾರ ರಸ್ತೆತಡೆ ಚಳವಳಿ ನಡೆಸಿ ಟೈರ್‌ಗೆ ಬೆಂಕಿ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ಮೆರವಣಿಗೆ ಮಾಡಿದರು.

ರಸ್ತೆ ತಡೆ ಚಳವಳಿಯಿಂದ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸಂಗೊಳಿರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಧರಣಿ ನಡೆಸಲು ತಯಾರಿ ನಡೆಸಿದ ಹಿನ್ನೆಲೆಯಲ್ಲಿ ಪೊಲಿಸ್‌ಇನ್ಸ್ಪೆಕ್ಟರ್ ಸುನಿಲ್‌ಕುಮಾರ್ ನೇತೃತ್ವದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಬಿಜೆಪಿ ಮುಖಂಡರನ್ನು ಬಂಧಿಸಿ ನಂತರ ಪಟ್ಟಣದ ಎಪಿಎಂಸಿ ಅವರಣದಲ್ಲಿ ಬಿಡುಗಡೆ ಮಾಡಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿದೆ ಎಂದು ಮನಸ್ಸಿಗೆ ಬಂದ ರೀತಿಯಲ್ಲಿ ಬಸ್ಸಿನ ದರ ಏರಿಕೆ ಮಾಡುವುದಲ್ಲ, ಸರ್ಕಾರ ತೆಗೆದುಕೊಳ್ಳುವ ತೆರಿಗೆಯಲ್ಲಿ ಕಡಿಮೆ ಮಾಡಿದರೆ ಪ್ರಯಾಣಿಕರಿಗೆ ಹೊರೆಯಾಗುತ್ತಿರಲ್ಲಿಲ್ಲ, ಆದರೆ ಸಾಮಾನ್ಯ ಜನರನ್ನು ಗಣನೆಗೆ ತೆಗೆದುಕೊಳದೇ ಏಕಾಏಕಿ ನಾಲ್ಕರಿಂದ ಐದುಪಟ್ಟು ಬಸ್ ದರ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ದರ ಏರಿಕೆ ಮಾಡಿದರೆ ಸಾಮಾನ್ಯ ಜನರು ಜೀವನ ಸಾಗಿಸುವುದಾದರೂ ಹೇಗೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಿ, ಅದನ್ನು ಬಿಟ್ಟು ಸುಳ್ಳು ಲೆಕ್ಕ ಹೇಳಿ ರೈತರ ನೆಪದಲ್ಲಿ ಹಾಲು, ಮೊಸರು ಹಾಗೂ ತುಪ್ಪವನ್ನು ಸಹ ಮನಸ್ಸೋ ಇಚ್ಚೆ ಏರಿಕೆ ಮಾಡಿದ್ದೀರಿ ಹಾಗೂ ಪಶು ಆಹಾರ ಇಂಡಿ, ಬೂಸಾವನ್ನು ಏರಿಕೆ ಮಾಡಿದ್ದೀರಿ, ಜನ ನಿಮ್ಮನ್ನು ಎಂದಿಗೂ ಕ್ಷಮಿಸಲಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡು ಬಾರಿ ರೈತರ ಸಾಲಮನ್ನಾ ಮಾಡಿತ್ತು, ರೈತರಿಗೆ ಹಾಲಿನ ಪ್ರೋತ್ಸಾಹ ಧನವನ್ನು ನೀಡಿದರು, ನಿಮ್ಮ ಹಾಗೆ ಹಾಲು, ಮೊಸರು ಹಾಗೂ ತುಪ್ಪದ ಬೆಲೆಯನ್ನು ಏರಿಕೆ ಮಾಡಿರಲ್ಲಿಲ್ಲ. ರೈತರ ಬಗ್ಗೆ ಕಿಂಚಿತ್ತು ಗೌರವ ಇದ್ದರೆ ದರ ಇಳಿಕೆ ಮಾಡಿ ಎಂದು ಆಗ್ರಹಿಸಿದರು.

ಇನ್ನು ಸಿಎಂ ಡಿ.ಕೆ. ಶಿವಕುಮಾರ್ ಹಿರಿಯೂರಿನ ಉಪಚುನಾವಣೆ ಕಣ್ಮುಂದೆ ಇಟ್ಟುಕೊಂಡು ಯಾರಿಗೂ ಹೇಳದೆ ಕೇಳದೆ ಚಿತ್ರದುರ್ಗ ಜಿಲ್ಲೆಗೆ 4 ಟಿಎಂಸಿ ನೀರು ಹರಿಸಿದ್ದಾರೆ, ಆದರೆ ಇಲ್ಲಿನ ಸ್ಥಳೀಯ ರೈತರ ಅಡಿಕೆ ಮರಗಳಿಗೆ ನೀರಿಲ್ಲದೆ ಸೊರಗುತ್ತಿವೆ, ರೈತ ಸಂಕಷ್ಟಲ್ಲಿದ್ದಾನೆ, ಚಿತ್ರದುರ್ಗ ಜನತೆಯನ್ನು ಸ್ಮರಣೆ ಮಾಡಿಕೊಳ್ಳುವ ಸಿಎಂಗೆ ದಾವಣಗೆರೆ ಜಿಲ್ಲೆಯ ಅಡಿಕೆ ಬೆಳೆಗಾರರ ನೆನಪಾಗಲಿಲ್ಲವೆ ಎಂದು ಹರಿಹಾಯ್ದರು.

ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜು, ರಾಜ್ಯ ಒಬಿಸಿ ಮುಖಂಡ ಕುಬೇರಪ್ಪ, ನಿಕಟಪೂರ್ವ ಅಧ್ಯಕ್ಷ ಸುರೇಶ್, ಜೆ,ಕೆ.ಜಿಲ್ಲಾ ಒಬಿಸಿ ಅಧ್ಯಕ್ಷ ಎಸ್.ಎಸ್.ಬೀರಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಶಿವಾನಂದ್ ಮಾತನಾಡಿದರು.

ಮುಖಂಡರಾದ ಡಿ.ಜಿ.ರಾಜಪ್ಪ, ಗಿರೀಶ್ ಚಿಲೂರು, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ್, ರೈತ ಮೋರ್ಚಾ ತಾಲೂಕು ಅಧ್ಯಕ್ಷ ತರಗನಹಳ್ಳಿ ರಮೇಶ್, ಮಾದೇನಹಳ್ಳಿ ನಾಗರಾಜ್, ಮಾರುತಿ ನಾಯ್ಕ್, ಮಂಜುನಾಥ ಇಂಚರ, ಬಾಬು ಹೋಬಳದಾರ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವೇಶ್ವರರ ಬಗ್ಗೆ ಅವಹೇಳನಕಾರಿ ಪದಬಳಕೆ ನಾಡಿಗೆ ಕಪ್ಪುಚುಕ್ಕೆ: ಡಾ.ಶ್ರೀ.ಗುರುಬಸವ ಮಹಾಸ್ವಾಮಿ
ಸರ್ಕಾರಿ ಕೆಲಸವಿದ್ರೂ ರೈತನ ವರಿಸಲಿದ್ದಾಳೆ ಲಕ್ಷ್ಮೀ