ಅನ್ಯಾಯಕ್ಕೆ ಒಳಗಾದ ರೈತರೊಂದಿಗೆ ಸಾಗರದ ಮಲೆನಾಡು ರೈತ ಹೋರಾಟ ಸಮಿತಿ ಸುದ್ದಿಗೋಷ್ಠಿ
ನ್ನಡಪ್ರಭ ವಾರ್ತೆ, ತರೀಕೆರೆಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆಯವರು ರೈತರಿಗೆ ನೀಡುತ್ತಿರುವ ಕಿರುಕುಳ ಮತ್ತು ದಾಖಲೆಗಳಿರುವ ರೈತರ ಭೂಮಿಯನ್ನು ವಶಕ್ಕೆ ಪಡೆಯುತ್ತಿರುವುದನ್ನು ನಿಲ್ಲಿಸದಿದ್ದರೆ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಾಗರದ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ. ಶ್ರೀನಿವಾಸ ಹೇಳಿದ್ದಾರೆ.
ಶನಿವಾರ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಅರಣ್ಯ ಇಲಾಖೆಯಿಂದ ಅನ್ಯಾಯಕ್ಕೆ ಒಳಗಾದ ರೈತರೊಂದಿಗೆ ಏರ್ಪಾಡಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಮಲೆನಾಡು ಭಾಗದಲ್ಲಿ ಒಟ್ಟು 65 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತಿದ್ದು. ಈ ಭಾಗದಲ್ಲಿ ಬ್ರಿಟೀಷ್ ಮತ್ತು ರಾಜ ಮಹಾರಾಜರ ಕಾಲದ ಆದೇಶಗಳನ್ನು ತೋರಿಸಿ ತಲಾ ತಲಾಂತರಗಳಿಂದ ತಮ್ಮ ಬದುಕು ಕಟ್ಟಿಕೊಂಡು ಬಂದಿರು ವವರನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾದ ಕಾನೂನುಗಳನ್ನು ಜಾರಿ ಮಾಡಬೇಕು ಎಂದರು.ರೈತ ಹೋರಾಟಗಾರರಾದ ಗಂಗಾಧರ ಮಾತನಾಡಿ, ಅರಣ್ಯ ಇಲಾಖಾಧಿಕಾರಿಗಳು ಕಾನೂನ ಬದ್ಧವಾಗಿ ಕರ್ತವ್ಯ ನಿರ್ವಹಿಸುವ ಕಂದಾಯ ಇಲಾಖಾಧಿಕಾರಿಗಳಿಗೆ ಒತ್ತಡ ಹಾಕಿ ಅಮಾನತ್ತು ಅಥವಾ ವರ್ಗಾವಣೆ ಮೂಲಕ ಅಧಿಕಾರಿಗಳಿಗೆ ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿ ದ್ದಾರೆ ಎಂದು ಹೇಳಿದರು. ರೈತ ಹೋರಾಟ ಸಮಿತಿ ತಾಲೂಕು ಸಂಚಾಲಕ ಎ.ವಿ. ಜಯಸ್ವಾಮಿ ಮಾತನಾಡಿ ತಾಲೂಕಿನ ಲಕ್ಕವಳ್ಳಿ ಹೋಬಳಿ ಕೆಲವು ಗ್ರಾಮಗಳಲ್ಲಿ ಮುಳುಗಡೆ ಸಂತ್ರಸ್ಥರಿಗೆ ರಂಗೇನಹಳ್ಳಿಸರ್ವೆ ನಂ. 4 ರಲ್ಲಿ 385.36 ಎಕರೆ ಜಮೀನು ಸರ್ಕಾರವೇ ಮಂಜೂರು ಮಾಡಿ ಜಮೀನಿನ ಎಲ್ಲಾ ಕಂದಾಯ ದಾಖಲೆಗಳನ್ನು ನೀಡಿರುತ್ತದೆ. ಆದರೆ ಇದೀಗ ಅರಣ್ಯ ಇಲಾಖೆಯವರು ರೈತರ ಖಾತೆಗಳನ್ನು ವಜಾ ಮಾಡಲು ಮೇಲ್ಮನವಿ ಸಲ್ಲಿಸಿ ಪರಿಣಾಮ ಹಲವಾರು ಜನರಿಗೆ ನೋಟಿಸ್ ಜಾರಿಗೊಳಿಸಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಕೂಡಲೇ ಈ ಕೇಸನ್ನು ವಾಪಸ್ಸು ಪಡೆಯ ಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಜಿ. ಸಿರಾಜ್ ಅಹಮದ್, ರೈತ ಹೋರಾಟ ಸಮಿತಿ ಜಯಸ್ವಾಮಿ, ಸೀತಾರಾಂ, ನಂಜುಂಡಪ್ಪ, ವಿನಾಯಕ್, ಧನಪಾಲ್, ಬಾವಿಕೆರೆ ಮಹಾಬಲ, ಮುಡುಗೋಡು ಶಿವಕುಮಾರ್, ರೈತರು ಭಾಗವಹಿಸಿದ್ದರು.-
1ಕೆಟಿಆರ್.ಕೆ.15ಃ ತರೀಕೆರೆಯಲ್ಲಿ ರೈತ ಹೋರಾಟ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಸಾಗರದ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ. ಶ್ರೀನಿವಾಸ ಮಾತನಾಡಿದರು. ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಜಿ. ಸಿರಾಜ್ ಅಹಮದ್, ಜಯಸ್ವಾಮಿ, ಸೀತಾರಾಂ, ಮತ್ತಿತರರು ಇದ್ದರು.