ಜೂ.೨೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ನಾವು ಸರ್ಕಾರವನ್ನು ಯಾವುದೇ ಅರ್ಹ ಮತದಾರರು ಕೈಬಿಟ್ಟು ಹೋಗದಂತೆ , ಸೂಕ್ತ ಸಮಯದಲ್ಲಿ ದಾಖಲಾತಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ನಾಳೆ ನಗರಕ್ಕೆ ಅರಿವು ಜಾಥಾ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಎಸ್‌ಐಆರ್ ವಿರುದ್ಧ ಕರ್ನಾಟಕವಿದೆ ಎಂದು ತೋರಿಸಲು ಜೂ.೨೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ ಎಂದು ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಕೆ. ವೆಂಕಟರಾಜು ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸಂಪೂರ್ಣ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸುತ್ತೇವೆ. ಅದರೆ ಚುನಾವಣಾ ಆಯೋಗ ಸಂವಿಧಾನ ಬದ್ಧವಾಗಿದ್ದರಿಂದ ಪರಿಷ್ಕರಣೆ ಬಹಿಷ್ಕರಿಸದೇ, ಯಾವ ಅರ್ಹ ಮತದಾರರೂ ಕೈಬಿಟ್ಟು ಹೋಗದಂತೆ ಜಾಗೃತಿ ಮೂಡಿಸಲು ಪ್ರತಿಭಟನೆ ಮಾಡುತ್ತೇವೆ ಎಂದರು.
ಜೂ.೨೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ನಾವು ಸರ್ಕಾರವನ್ನು ಯಾವುದೇ ಅರ್ಹ ಮತದಾರರು ಕೈಬಿಟ್ಟು ಹೋಗದಂತೆ , ಸೂಕ್ತ ಸಮಯದಲ್ಲಿ ದಾಖಲಾತಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ನುಸುಳುಕೋರರ ಹೆಸರಿನಲ್ಲಿ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ೯೧ ಲಕ್ಷ ಮತದಾರರನ್ನು ಹೊರದಬ್ಬಲ್ಪಟ್ಟು ಇನ್ನು ೨೭ ಲಕ್ಷ ಮತದಾರರು ವಿಚಾರಣೆ ಎದುರಿಸುತ್ತಿದ್ದಾರೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಇದು ನಡೆದು ಆ ಮೂಲಕ ಬಿಜೆಪಿಯನ್ನು ಗೆಲ್ಲಿಸುವ ಹುನ್ನಾರ ನಡೆದಿದ್ದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ನಾಳೆ ನಗರಕ್ಕೆ ಅರಿವು ಜಾಥಾ:
ಜೂ.೧೭ರಂದು ಚಾಮರಾಜನಗರಕ್ಕೆ ಎಸ್ ಐಆರ್ ವಿರೋಧಿ ಜನ ಜಾಗೃತಿ ಆಗಮಿಸಲಿದೆ, ಜೂ.೨೦ ರ ಪ್ರತಿಭಟನೆಗೆ ಮೊದಲು ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸ್ ಐಆರ್ ವಿರೋಧಿ ಜನ ಜಾಗೃತಿ ಜಾಥಾ ನಡೆಯಲಿದೆ ಎಂದರು.
ಮೈಸೂರಿನಲ್ಲಿ ಜೂ.೧೬ ರಂದು ಜಾಥಾ ನಡೆದ ಬಳಿಕ ನಂಜನಗೂಡು ಮಾರ್ಗ ಜೂ.೧೭ರಂದು ಚಾಮರಾಜನಗರಕ್ಕೆ ಬರಲಿದೆ. ಇಲ್ಲಿಂದ ಕೊಳ್ಳೇಗಾಲ, ಮಳವಳ್ಳಿ ಮಾರ್ಗವಾಗಿ ಮಂಡ್ಯದಲ್ಲಿ ಕೊನೆಗೊಳ್ಳಲಿದ್ದು ರಾಜ್ಯಾದ್ಯಂತ ೫ ಜಾಥಾ ವಾಹನಗಳು ಹೊರಡಲಿವೆ ಎಂದು ತಿಳಿಸಿದರು.
ಜಾಥಾದಲ್ಲಿ ಬರುವ ವಾಹನದಲ್ಲಿ ಕಲಾವಿದರು ಸಾರ್ವಜನಿಕರಿಗೆ ಸಂದೇಶ ಸಾರಲಿದ್ದಾರೆ. ಈ ಸಂಬಂಧ ಬೀದಿ ನಾಟಕವೂ ನಡೆಯಲಿದೆ. ನಗರಕ್ಕೆ ಬರುವ ಜಾಥಾವನ್ನು ಮೈಸೂರು- ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಸ್ವಾಗತಿಸಿ ಬಳಿಕ ಸಂತೇಮರಹಳ್ಳಿ ವೃತ್ತದಲ್ಲಿ ಕರಪತ್ರ ಹಂಚಿ, ಬಳಿಕ ನಗರದ ಪ್ರಮುಖ ವೃತ್ತಗಳಲ್ಲೂ ಎಸ್‌ಐಆರ್ ಕುರಿತು ಗಣ್ಯರ ಭಾಷಣ ಆಯೋಜನೆ ಮಾಡಲಾಗಿದೆ ಎಂದರು.
ಮುಖಂಡರಾದ ಸಂಘಸೇನಾ, ಅಬ್ರಹಾರ್ ಅಹಮ್ಮದ್ ಮಾತನಾಡಿ, ನುಸುಳುಕೋರರ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸಿದ್ದು, ನಿಜವಾದ ನುಸುಳುಕೋರರು ಆರ್ಯರು ಎಂದರು.
ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ೨೫೯ ಬೂತ್‌ಗಳಿಗೆ ಏಜೆಂಟರನ್ನು ನೇಮಿಸಿದ್ದು ಅವರಿಗೆ ಎಸ್‌ಐಆರ್ ಬಗ್ಗೆ ಜೂ. ೧೬ ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಸಕರ ಸೂಚನೆ ಮೇರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಅರ್ಹ ಮತದಾರರು ಮತಪಟ್ಟಿಯಿಂದ ಹೊರಗೆ ಉಳಿಯಬಾರದು ಎಂಬುದೇ ಜಾಥಾ ಆಯೋಜನೆಯ ಉದ್ದೇಶ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ, ಕೆ.ಎಂ.ರೂಪೇಶ್, ಕುಮಾರ್, ಭೈರಲಿಂಗಸ್ವಾಮಿ ಇದ್ದರು.
-- ---
೧೫ಸಿಎಚ್‌ಎನ್೧
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಕೆ. ವೆಂಕಟರಾಜು ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.