ಕನ್ನಡಪ್ರಭ ವಾರ್ತೆ ಯಾದಗಿರಿ
ಶನಿವಾರ ಮಧ್ಯಾಹ್ನ 4.30 ಗಂಟೆಗೆ ಭೋರುಕಾ ಶಾಲೆಯಿಂದ ಪ್ರಾರಂಭವಾದ ಸಂಚಲನ, ವಾಲ್ಮಿಕಿ ಚೌಕ್ ಮುಖಾಂತರ, ಬಸವೇಶ್ವರ ಚೌಕ್, ಮೋಚಿಗಡ್ಡಾ, ಹಳಪೇಟೆಯ ಗಂಗಾನಗರದ ಮೂಲಕ, ಮತ್ತೆ ಮೋಚಿಗಡ್ಡಾ ಮಾರ್ಗವಾಗಿ, ಗಾಂಧಿಚೌಕ್, ದಿಗ್ಗಿ ಅಗಸಿ, ಚರಬಸವೇಶ್ವರ ಕಮಾನ, ಹಳೆಬಸ್‌ನಿಲ್ದಾಣ, ಬಸವೇಶ್ವರಚೌಕ್ ಮುಖಾಂತರ ಮತ್ತೆ ಬೋರಕಾಶಾಲೆಯ ಆವರಣದಲ್ಲಿ ಸಂಪನ್ನಗೊಂಡಿತು.
ದಾರಿಯುದ್ದಕ್ಕೂ ಗಣವೇಷಧಾರಿಗಳ ಪಥಸಂಚಲನ ನೋಡಲು ಸಾವಿರಾರು ಮಹಿಳೆಯರು, ಮಕ್ಕಳು ಹಾಗೂ ಯುವಕರು ರಸ್ತೆ ಎರಡು ಬದಿಗಳಲ್ಲಿ ಜಮಾಯಿಸಿದ್ದರು. ಹಲವು ಕಡೆ ಸಾರ್ವಜನಿಕರು ಹೂವುಗಳನ್ನು ಸ್ವಯಂಸೇವಕರ ಮೇಲೆ, ಭಗವಾಧ್ವಜ, ಭಾರತ ಮಾತೆ, ಡಾ.ಗುರೂಜಿ, ಡಾ.ಹೆಡ್ಗೆವಾರ್ ಅವರ ಭಾವಚಿತ್ರಕ್ಕೆ ಹೂವು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.ಮೆರವಣಿಗೆಯಲ್ಲಿ ಭಾರತ ಮಾತಾ ಕಿ ಜೈ, ಸೇರಿದಂತೆ ಮಹಾಪುರಷರ ಘೋಷಣೆಗಳು ಮೊಳಗಿದವು. ದಾರಿಯುದ್ದಕ್ಕೂ ಅಲ್ಲಲ್ಲಿ ಬಾಲಕರು ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರರ, ಮಹಾಪುರುಷರ ವೇಷ ಭೂಷಣ ಹಾಕಿ ನಿಂತು ಗಮನಸೆಳೆದು ಪಥ ಸಂಚಲನಕ್ಕೆ ಮತ್ತಷ್ಟು ಕಳೆ ತಂದರು. ಗುಂಬಳಾಪುರ ಮಠದ ಪೂಜ್ಯರಾದ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯರು, ಕುಂಬಾರ ಓಣಿಮಠದ ಪೂಜ್ಯರಾದ ಷ.ಬ್ರ.ಸೂಗುರೇಶ್ವರ ದೇವರು, ಚರಬಸವೇಶ್ವರ ಸಂಸ್ಥಾನದ ಪೂಜ್ಯರಾಧ ವೇ.ಮೂ.ಬಸವಯ್ಯ ಪೂಜ್ಯರು, ಸೇರಿದಂತೆ ಅಪಾರ ಸಂಖ್ಯೆಯ ಗಣ್ಯರು ಪಾಲ್ಗೊಂಡಿದ್ದರು.ಎಲ್ಲೆಡೆ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು, ಡಿವಾಯ್‌ಎಸ್‌ಪಿ, ಪಿಐ ಸೇರಿದಂತೆ ಪೋಲಿಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಅಚ್ಚುಕಟ್ಟಾಗಿ ಪಥಸಂಚಲನ ಮುಕ್ತಾಯವಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಅಕ್ಟೋಬರ್ 19 ರಂದು ಪಥಸಂಚಲನ ನಡೆಯಲಿದೆ ಎಂದು ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಹೇಳಿದ್ದಾರೆ.
ನಗರಸಭೆ ಕಚೇರಿ ಸಮೀಪದ ಆರಂಭವಾಗುವ ಪಥಸಂಚಲನವು ಹತ್ತಿಕುಣಿ ರಸ್ತೆ, ಗಾಂಧಿವೃತ್ತ, ಮಾರವಾಡಿ ಗಲ್ಲಿ, ಛತ್ರಪತಿ ಶಿವಾಜಿ ವೃತ್ತ, ಮೈಲಾಪುರ ಅಗಸಿ ಹಾದು ಮತ್ತೆ ಗಾಂಧಿ ವೃತ್ತಕ್ಕೆ ಬರಲಿದೆ. ಶೃತಿ ಮೆಡಿಕಲ್ ವೀರಶೈವ ಕಲ್ಯಾಣ ಮಂಟಪ, ಜಗಜೀವನರಾಂ ವೃತ್ತ, ಕನಕ ವೃತ್ತ, ಬಾಲಾಜಿ ಕಲ್ಯಾಣ ಮಂಟಪ ಮಾರ್ಗವಾಗಿ ಹೊನಕೇರಿ ಲೇಔಟ್‌ನಲ್ಲಿ ಸಮಾವೇಶಗೊಳ್ಳಲಿದೆ ಎಂದು ಹೇಳಿದ್ದಾರೆ.