ಕನ್ನಡಪ್ರಭ ವಾರ್ತೆ ಹಲಗೂರು
ಚನ್ನಪಟ್ಟಣ ರಸ್ತೆಯ ಜೆಜೆ ಪಬ್ಲಿಕ್ ಶಾಲಾ ಅವರಣದಲ್ಲಿ 2 ದಿನಗಳ ಕಾಲ ಆಯೋಜಿಸಿರುವ 2024- 2025ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ವಸ್ತು ಪ್ರದರ್ಶನವು ಮಕ್ಕಳಲ್ಲಿ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಹೆಚ್ಚಿಸುವ ಜೊತೆಗೆ ಅಧ್ಯಯನ ಶೀಲತೆಯನ್ನು ಬೆಳೆಸಿಕೊಳ್ಳಲು ತುಂಬಾ ಉಪಯುಕ್ತವಾಗುತ್ತದೆ ಎಂದರು.
ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ದೊಡ್ಡ ಪ್ರಾಜೆಕ್ಟ್ ಗಳನ್ನು ಮಾಡಲು ಸಿದ್ಧತೆ ಸೇರಿದಂತೆ ಓದಿನಲ್ಲಿ ತೊಡಗಲು ವಸ್ತು ಪ್ರದರ್ಶನ ನೆರವಾಗಲಿದೆ ಎಂದರು.ಪ್ರಾಂಶುಪಾಲರಾದ ಲಲಿತಾಂಬ ಸೋಮಶೇಖರ್ ಮಾತನಾಡಿ, ಎರಡು ದಿನಗಳ ವಸ್ತು ಪ್ರದರ್ಶನದಲ್ಲಿ ಮೊದಲು ಫ್ರಿ ಕೆಜಿಯಿಂದ 3ನೇ ತರಗತಿಯ ವಿದ್ಯಾರ್ಥಿಗಳಿಂದ ಕಿಡ್ಸೋ ಕಾರ್ಯಕ್ರಮ, 4 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಗಣಿತದ ವಿಷಯದಲ್ಲಿ ಅವರಿಗೆ ಲೆಕ್ಕಾಚಾರ ಮಾಡಲು ಸುಲಭ ವಿಧಾನ ತಿಳಿಸುವ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಸಮಾಜ ಶಾಸ್ತ್ರ ವಿಷಯದಲ್ಲಿ ನಿಜವಾದ ಇತಿಹಾಸ ತಿಳಿಸುವ ನಮ್ಮ ದೇಶದ ನಿಜವಾದ ನಾಯಕರದ ಸೈನಿಕರ ವಿಷಯಕ್ಕೆ ಹೆಚ್ಚು ಹೊತ್ತು ನೀಡಿ ಮಾದರಿಗಳನ್ನು ತಯಾರಿಸಿದ್ದೇವೆ. ಗುರು ಪರಂಪರೆ ತಿಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ವಿದ್ಯಾಭಾರತಿ ಸ್ಕೂಲಿನ ಸಂಚಾಲಕ ರಂಗನಾಥ್ ಉದ್ಘಾಟಿಸಿದರು. ಮಳವಳ್ಳಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಭ, ಮುಖ್ಯ ಶಿಕ್ಷಕಿ ಶಿವಮಣಿ, ಸಂಯೋಜಕ ವಿಕಾಶ್, ಶಿಕ್ಷಕಿಯರಾದ ಶೃತಿ, ಕೋಮಲ, ಶಬ್ರಿನ್, ಶಿಕ್ಷಕಿಯರು ಪೋಷಕರು ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.