ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ: ಶಶಿಧರ ಕುರೇರ

KannadaprabhaNewsNetwork |  
Published : Dec 20, 2025, 03:15 AM IST
ಜಿಪಂ ಸಿಇಒ ಶಶಿಧರ ಕುರೇರ ಕಾರ್ಯಾಗಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ. ಶಿಕ್ಷಕರು ಆಸಕ್ತಿಯಿಂದ ಬೋಧನೆ ಮಾಡಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ. ಶಿಕ್ಷಕರು ಆಸಕ್ತಿಯಿಂದ ಬೋಧನೆ ಮಾಡಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ನಗರದ ಎಸ್.ಬಿ.ಎಂ. ಪದವಿ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಮಟ್ಟದ ಗಣಿತ ವಿಷಯ ಬೋಧಿಸುವ ಶಿಕ್ಷಕರಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿದ್ದ ಉದ್ಘಾಟಿಸಿ ಮಾತನಾಡಿದರು. ಗಣಿತ ವಿಷಯ ಸರಳವಾಗಿದೆ. ಶಿಕ್ಷಕರು ಪಾಠಬೋಧನೆಯಲ್ಲಿ ಮಕ್ಕಳಿಗೆ ಅರ್ಥವಾಗುವಂತೆ ಬೋಧನೆ ಮಾಡಬೇಕು. ಎಲ್ಲ ವಿಷಯಗಳ ಜೊತೆಗೆ ಗಣಿತ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದರೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದರೆ ತಾಲೂಕು, ಜಿಲ್ಲೆ ರಾಜ್ಯದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. 29 ಅಂಶಗಳ ಕಾರ್ಯಕ್ರಮ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಇದನ್ನು ಕೇವಲ 10ನೇ ತರಗತಿಗೆ ಮಾತ್ರ ಸೀಮಿತಗೊಳಿಸದೆ 8 ಮತ್ತು 9ನೇ ತರಗತಿಯ ಜೊತೆಗೆ ಪ್ರಾಥಮಿಕ ಹಂತದಲ್ಲಿಯೂ ಈ ಯೋಜನೆ ಅನುಷ್ಠಾನಗೊಳಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜೀತ ಮನ್ನಿಕೇರಿ ಮಾತನಾಡಿ, ಜಿಲ್ಲೆಯಾದ್ಯಂತ ಪ್ರತಿಯೊಂದು ತಾಲೂಕಿನಲ್ಲಿ ವಿಷಯವಾರು ಜಿಲ್ಲಾಮಟ್ಟದ ಕಾರ್ಯಾಗಾರ ಹಮ್ಮಿಕೊಂಡಿದ್ದು, ಫಲಿತಾಂಶ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಪ್ರತಿಯೊಂದು ಶಾಲೆಯಲ್ಲಿ ಪ್ರಾರ್ಥನೆ ಹಾಗೂ ಊಟದ ಸಮಯದಲ್ಲಿ ಮಗ್ಗಿ ಸುಗ್ಗಿ ಎಂಬ ಯೋಜನೆಯೊಂದಿಗೆ ಗಣಿತ ವಿಷಯದ ಮೇಲೆ ಮಕ್ಕಳಿಗೆ ಆಸಕ್ತಿ ಬೆಳೆಸುತ್ತಿದ್ದೇವೆ ಎಂದು ತಿಳಿಸಿದರು.

ವೇದಿಕೆಯ ಮೇಲೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ, ಪ್ರಾಚಾರ್ಯ ಡಾ.ಎ.ಎ.ತೋಪಲಕಟ್ಟಿ, ವಿಷಯ ಪರಿವೀಕ್ಷಕರಾದ ಎಸ್.ಎಸ್.ಹಾಲವರ, ನ್ಯಾಮಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಹಳಗೇರಿ, ಉಜ್ವಲ ಬಸರಿ, ಎ.ಪಿ.ಮೇಟಿ, ಬಿ.ಎಸ್.ಅಬ್ಬಿಗೇರಿ, ಐ.ಜಿ.ಮೆಣಸಿನಕಾಯಿ, ಶಶಿಧರ ಕಬ್ಬಲಗೇರಿ, ಐ.ಕೆ.ಕಟಗೇರಿ, ಎಸ್.ಎಸ್.ಮಿಟ್ಟಲಕೋಡ, ರಾಜ್ಯ ಸಂಪನ್ಮೂಲ ವ್ಯಕ್ತಿ ಮಂಜಣ್ಣ, ಶಶಿಧರ ಮೂಲಿಮನಿ, ಸುರೇಶ ಉಪ್ಪಲದಿನ್ನಿ, ಎಂ.ಎಸ್.ಗ್ಯಾನಪ್ಪನ್ನವರ, ಎಸ್.ಬಿ.ಗಾರವಾಡ, ಪ್ರಶಾಂತ ಚಿನಿವಾಲರ, ಸಿ.ಎಂ.ಹಳಪೇಟ, ಸಚಿನ ತಿಪ್ಪಾ, ಎಂ.ಎಸ್.ಪೋಲಿಸ್ ಪಾಟೀಲ, ಎಸ್.ವಿ.ಗುರಶಾಂತನವರ, ಮಹೇಶ ಕೋಟನಕರ ಹಾಜರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಸ್ವಾಗತಿಸಿದರು.ಸಹಶಿಕ್ಷಕರಾದ ಶೀಲಾ ಗೌಡರ, ಎಂ.ಎಚ್. ಮುಲ್ಲಾ ನಿರೂಪಿಸಿದರು. ಶಿಕ್ಷಣ ಸಂಯೋಜಕ ಬಿ.ಕೆ.ಚಿಮಲ್ ವಂದಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಆರು ತಾಲೂಕಿನ ಗಣಿತ ವಿ?ಯ ಬೋಧಿಸುವ ಶಿಕ್ಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಬಲ ಬೆಲೆಯಡಿ ಸೋಯಾಬೀನ್‌ ಖರೀದಿ ನೋಂದಣಿ ಬಂದ್‌
ಅತ್ಯಾಧುನಿಕ ತಂತ್ರಜ್ಞಾನದಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ