ಕನ್ನಡಪ್ರಭ ವಾರ್ತೆ ಉಡುಪಿನಿವೃತ್ತ ಮುಖ್ಯೋಪಾಧ್ಯಾಯ ದಿ. ಮಟ್ಪಾಡಿ ಶಿವರಾಮ ಶೆಟ್ಟಿ ಅವರ ೮ನೇ ವಾರ್ಷಿಕ ಸಂಸ್ಮರಣೆಯ ಅಂಗವಾಗಿ ಮಲ್ಪೆಯ ಉಡುಪಿ ಕೊಚ್ಚಿನ್ ಶಿಫ್ ಯಾರ್ಡ್ ನಲ್ಲಿ ಸ್ವಯಂಪ್ರೇರಿತ ರಕ್ತದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಸ್ಥೆಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.ರಕ್ತದಾನ ಶಿಬಿರದ ಉದ್ಘಾಟನೆಯಲ್ಲಿ ದಿವಂಗತರ ಮಕ್ಕಳಾದ ಬಸ್ರೂರು ರಾಜೀವ್ ಶೆಟ್ಟಿ ಮತ್ತು ಡಾ.ದೇವದಾಸ್ ಶೆಟ್ಟಿ, ಕುಂದಾಪುರ ರಕ್ತನಿಧಿ ಕೇಂದ್ರದ ಸಭಾಪತಿ ಜಯಕರ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಉಡುಪಿ ಕೊಚ್ಚಿನ್ ಶಿಫ್ ಯಾರ್ಡ್ ಮಲ್ಪೆಯ ಸಿ.ಇ.ಓ. ಹರಿಕುಮಾರ್ ವಹಿಸಿದ್ದರು. ಡೆಪ್ಯುಟಿ ಜನರಲ್ ಮೆನೇಜರ್ ಅಂಬಾಲವನನ್ ಉಪಸ್ಥಿತರಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಆದಿದ್ರಾವಿಡ ಜನಾಂಗದ ೧೦ ಕುಟುಂಬಗಳನ್ನು ಗುರುತಿಸಿ ಅವರ ಕುಟುಂಬಕ್ಕೆ ಅಗತ್ಯವಿರುವ ಸುಮಾರು ೧ ಲಕ್ಷ ರು.ಗೂ ಮಿಕ್ಕಿ ಗೃಹೋಪಯೋಗಿ ವಿವಿಧ ವಸ್ತುಗಳ ಜೊತೆಗೆ ಸಂಪೂರ್ಣ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.ಈ ಸಂದರ್ಭ ಮಾತನಾಡಿದ ಬಸ್ರೂರು ರಾಜೀವ ಶೆಟ್ಟಿ ಅವರು, ದಿವಂಗತ ಶಿವರಾಮ ಶೆಟ್ಟಿ ಅವರು ಆದಿ ದ್ರಾವಿಡ ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಸಮಾಜದ ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ೯೬ ವರ್ಷಗಳ ಕೃತಾರ್ಥ ಜೀವನ ನಡೆಸಿರುವ ದಿ. ಮಟ್ಪಾಡಿ ಶಿವರಾಮ ಶೆಟ್ಟಿಯವರು ಗಾಂಧಿವಾದಿಯಾಗಿ, ಜೀನುದ್ದಕ್ಕೂ ಖಾದಿ ಬಟ್ಟೆಯನ್ನು ಮಾತ್ರ ಉಪಯೋಗಿಸುತ್ತಿದ್ದರು ಎಂದು ತಂದೆಯು ಬದುಕಿನಲ್ಲಿ ನಡೆದು ಬಂದ ಹಾದಿಯನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಡಾ. ದೇವದಾಸ್ ಶೆಟ್ಟಿ, ಖ್ಯಾತ ಸಮಾಜ ಸೇವಾಕರ್ತ ಹಾಗೂ ರಾಜಕೀಯ ಧುರೀಣ ಸುಧೀರ್ ಶೆಟ್ಟಿ ಮಟ್ಪಾಡಿ, ಉಡುಪಿ ತಾಪಂ ಉಪಾಧ್ಯಕ್ಷೆ ಶೋಭಾ ಎಸ್. ಪೂಜಾರಿ, ಸ್ಥಳೀಯ ಪ್ರಮುಖರಾದ ಕೆ.ಟಿ.ನಾಯಕ್, ಬೇಬಿ ಪೂಜಾರಿ, ಚಂದ್ರಶೇಖರ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.