ಕುಕನೂರು: ವಿನೂತನ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪಠ್ಯ ವಿಷಯಗಳ ಚಟುವಟಿಕೆಗಳಿಂದ ವಿಶೇಷ ಜ್ಞಾನ ಸಂಪಾದನೆ, ಮಕ್ಕಳ ಬೌದ್ಧಿಕ ಮಟ್ಟ ದ್ವಿಗುಣವಾಗುವುದು ಎಂದು ಇಟಗಿ ಸರ್ಕಾರಿ ಆದರ್ಶ ವಿದ್ಯಾಲಯದ ಪ್ರಾಚಾರ್ಯ ರಾಮರಡ್ದೆಪ್ಪ ಹಾಲಕೇರಿ ಹೇಳಿದರು.
ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಲು ಗಣಿತಾ ಚಟುವಟಿಕೆ ಮಾಡಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಹಾಗೂ ವ್ಯವಹಾರಿಕದಲ್ಲಿ ಕೂಡ ಗಣಿತದ ವಿಷಯದ ಪ್ರಭಾವ ಏನು ಎಂದು ಮಕ್ಕಳಿಗೆ ತಿಳಿವಳಿಕೆ ಮೂಡುತ್ತದೆ. ಈ ರೀತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮ ಸಡಗರದಿಂದ ಭಾಗವಹಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕರಾದ ಜಯಪ್ಪ ಕನಕಮ್ಮನವರ್, ಜಗದೀಶ ಅಜ್ಜಣ್ಣನವರ್, ರಂಗಪ್ಪ ಓಳೇಕರ್, ಬಸಮ್ಮ ಮೇಟಿ, ಶರಣಪ್ಪ ಬೊಮಳೇಕರ್, ನಾಗರಾಜ ಸೋಣದ, ರೋಹಿಣಿ, ಸಂತೋಷ ಕುಮಾರಿ, ವಿರೂಪಾಕ್ಷಪ್ಪ ಮ್ಯಾಲಿ, ಮಹೇಶ ರಾಮದುರ್ಗ, ಶ್ವೇತ ಹಳ್ಳಿ, ಶ್ರೀದೇವಿ ಬೆಳದಡಿ, ಮುರಾರಿ ಭಜಂತ್ರಿ, ರಮೇಶ ಕೆ.ಟಿ, ಶ್ವೇತ ಬನ್ನಿಕೊಪ್ಪ, ರಹಿಮಾನ್, ಬಸವರಾಜ ಸೋಣದ್, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದರು.