ಯಾದಗಿರಿ: ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗೂ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ, ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಗ್ರಂಥಾಲಯ ಲೇಖಪಾಲಕ ಬಸವರೆಡ್ಡಿ ಅಭಿಷಾಳ ಹೇಳಿದರು.
ಭಗತ್ ಸಿಂಗ್ ಅಭಿಮಾನಿ ಬಳಗದ ಮಲ್ಲಿಕಾರ್ಜುನ್ ಬಿಸೇಟಿ ಮಾತನಾಡಿ, ಭಗತ್ ಸಿಂಗ್, ರಾಜ್‌ಗುರು, ಸುಖದೇವ ಅಪ್ರತಿಮ ಹೋರಾಟಗಾರರು. ದೇಶಕ್ಕಾಗಿ ಇನ್ನು ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಜೀವನವನ್ನೇ ಮುಡುಪಾಗಿಟ್ಟಿದ್ದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಅಪ್ಪಟ ದೇಶಭಕ್ತರಾಗಿದ್ದರು. ನಾವುಗಳು ಕೂಡ ಅವರ ದಾರಿಯಲ್ಲಿಯೇ ನಾಡು-ನುಡಿ, ಜಲ-ನೆಲ, ಭಾಷೆ ಅಂತ ಬಂದಾಗ ಪ್ರತಿಯೊಬ್ಬರೂ ಹೋರಾಟಕ್ಕೆ ಸದಾಸಿದ್ಧರಾಗಿರಬೇಕು. ಸ್ವಾತಂತ್ರ್ಯ ಹೋರಾಟಗಾರರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಯಂಕಪ್ಪ ಪೂಜಾರಿ, ಬಸವರಾಜ ಪಿಲ್ಲಿ, ದಯಾನಂದ ಹಿರೇಮಠ್, ರುದ್ರಲಿಂಗ ಗುರುಶಿಣಗಿ, ಶರಣು ನಾಟೆಕಾರ್, ವೆಂಕಟೇಶ್ ಕಲಾಲ, ರಹೀಮನ್, ಬನದಯ್ಯ ವಿಶ್ವಕರ್ಮ, ಮಲ್ಲು ಶಾಸ್ತ್ರಿ, ಬಸ್ಸುಗೌಡ, ದೇವು ಮುದನೂರು, ದೇವಪ್ಪ ಪೂಜಾರಿ, ಸಿದ್ದಪ್ಪ ಪೂಜಾರಿ, ನಾಗರಾಜ ಬಾವುರ, ತಿಮ್ಮರೆಡ್ಡಿ. ಮರಲಿಂಗ ಚಲುವಾದಿ, ಶರಣು, ತಾಯಪ್ಪ ಸೇರಿದಂತೆ ಇತರರಿದ್ದರು.