ಶಿರಹಟ್ಟಿ: ಮಾನವ ಕುಲಕ್ಕೆ ಒಳಿತು ಆಗಬೇಕು. ರೈತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದು ಸಬಲರಾಗಬೇಕು ಎನ್ನುವ ಉದ್ದೇಶದಿಂದ ತಾಲೂಕಿನ ಬೆಳ್ಳಟ್ಟಿ, ಕೊಕ್ಕರಗುಂದಿ ಗ್ರಾಮದ ರಾಮಲಿಂಗೇಶ್ವರ ಮಠದ ಬಸವರಾಜ ಮಹಾಸ್ವಾಮಿಗಳು ೧೦ನೇ ಮೌನ ಶಿವಯೋಗಾನುಷ್ಠಾನ ನಡೆಸಿದ್ದಾರೆ ಎಂದು ಬನ್ನಿಕೊಪ್ಪ ಬೃಹನ್ಮಠದ ಸುಜ್ಞಾನದೇವ ಶಿವಾಚಾರ್ಯರು ಶ್ರೀಗಳು ಹೇಳಿದರು.
ಅಗಡಿ ಅಕ್ಕಿಮಠದ ಗುರುಲಿಂಗ ಶ್ರೀಗಳು, ಉತ್ತಂಗಿಯ ಶರಣೆ ಈರಮ್ಮ ತಾಯಿ ಮಾತನಾಡಿದರು.
ಬೆಳ್ಳಟ್ಟಿ ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ರಾಮಲಿಂಗೇಶ್ವರ ಮಠಕ್ಕೆ ಬಸವರಾಜ ಶ್ರೀಗಳು ಪೀಠಾಧಿಪತಿಗಳಾದ ಮೇಲೆ ಶ್ರೀ ಮಠವು ಬಹಳ ಬದಲಾವಣೆ ಹೊಂದಿದ್ದು, ಅವರ ನಿರಂತರ ಶ್ರಮವೇ ಕಾರಣ ಎಂದು ಹೇಳಿದರು.ದೇವಿಹಾಳ ಗ್ರಾಮದ ಪುಂಡಲೀಕಪ್ಪ ಕೆಂಪಣ್ಣವರ ಕುಟುಂಬದವರಿಂದ ತುಲಾಭಾರ ಸೇವೆ ನೆರವೇರಿತು.
ಶ್ರೀಮಠದ ಬಸವರಾಜ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಶಿವನಗೌಡ ಪಾಟೀಲ, ಮೋಹನ್ ಗುತ್ತೆಮ್ಮನವರ, ರಮೇಶ ಮಲ್ಲಾಡದ, ಕೊಟ್ರೇಶ ಸಜ್ಜನರ, ಜಗದೀಶ ಗಾಂಜಿ, ಮಹೇಶ ಬಡ್ನಿ, ಬಿ.ಎಂ. ಯರಕದ, ಕೊಟ್ರೇಶ ಅಕ್ಕೂರ, ಸುರೇಶ ಬಸವರಡ್ಡಿ, ವಿರೂಪಾಕ್ಷಪ್ಪ ನಂದೆಣ್ಣವರ, ಸಿದ್ರಾಮಪ್ಪ ಮೊರಬದ, ರಾಜೇಂದ್ರಕುಮಾರ ಹಲಗಲಿ, ಸಹದೇವರಡ್ಡಿ ಬಸವರಡ್ಡಿ, ಗಿರೀಶರಡ್ಗಡಿ ಮೇಕಳಿ, ಜಗದೀಶ ಸಾಲವಾಡ, ರಾಜೀವ ಬಮ್ಮನಕಟ್ಟಿ ಇದ್ದರು.