ಗದಗ: ಮೇ ಸಾಹಿತ್ಯ ಮೇಳ ಪ್ರತಿವರ್ಷ ಆಯೋಜನೆ ಮಾಡಿಕೊಂಡು ಬರಲಾಗಿದ್ದು, ಪ್ರಸಕ್ತ ವರ್ಷ ಸಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ ಎನ್ನುವ ಹೆಸರಿನ ಮೇಲೆ 12ನೇ ಮೇ ಸಾಹಿತ್ಯ ಮೇಳ ಮೇ 16 ಮತ್ತು 17ರಂದು ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣಮಂಟಪದಲ್ಲಿ ನಡೆಯಲಿದೆ ಎಂದು ಡಾ. ರಾಮಚಂದ್ರ ಹಂಸನೂರ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಲಿದ್ದು, ಗದಗ ಜಿಲ್ಲೆಯಿಂದಲೂ ಹಲವಾರು ಜನರು ಭಾಗವಹಿಸಲಿದ್ದಾರೆ. ಸಂವಿಧಾನ ಅಪಾಯದಲ್ಲಿದ್ದು, ಇದನ್ನು ಕಾಪಾಡುವ ಹಿತದೃಷ್ಟಿಯಿಂದಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಬಿ.ಕೆ. ಪೂಜಾರ, ನೂರುಂದಪ್ಪ ಕೋಳೂರು, ಸರೋಜಾ ಕೋಳೂರು, ಶರಣು ಪೂಜಾರ, ಪರಶು ಕಾಳೆ, ರಮೇಶ್ ಕೋಳೂರು, ಯೂಸೂಪ್ ಮಜ್ಜಗಿ, ಮಲ್ಲಪ್ಪ ಕೊಳೂರು ಉಪಸ್ಥಿತರಿದ್ದರು.ಕೃಷಿಕರು ಮಿತವಾಗಿ ಯೂರಿಯಾ ಗೊಬ್ಬರ ಬಳಸಲಿನರಗುಂದ: ರೈತರು ಬೆಳೆಗೆ ಅವಶ್ಯವಿರಷ್ಟು ಮಾತ್ರ ಯೂರಿಯಾ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕೆಂದು ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯೂರಿಯಾ ಗೊಬ್ಬರವು ಬೆಳೆಗಳಿಗೆ ತ್ವರಿತವಾಗಿ ನೈಟ್ರೋಜನ್ ಒದಗಿಸುವ ಪ್ರಮುಖ ರಾಸಾಯನಿಕ ಗೊಬ್ಬರವಾಗಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಅಥವಾ ತಪ್ಪು ವಿಧಾನದಲ್ಲಿ ಬಳಸಿದರೆ ಮಣ್ಣು, ಬೆಳೆ, ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ವಿಜ್ಞಾನಿಗಳ ಪ್ರಕಾರ ಯೂರಿಯಾದಲ್ಲಿರುವ ನೈಟ್ರೋಜನ್ ಬಹುಭಾಗವು ಸರಿಯಾಗಿ ಬಳಸದೇ ಹೋದರೆ ವಾಯು, ನೀರು ಮತ್ತು ಮಣ್ಣಿಗೆ ಹಾನಿ ಉಂಟುಮಾಡುತ್ತದೆ.ಯೂರಿಯಾ ಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುವುದು. ನಿರಂತರ ಯೂರಿಯಾ ಬಳಕೆಯಿಂದ ಮಣ್ಣಿನ ಸತ್ವ ಕಡಿಮೆಯಾಗಿ ಮಣ್ಣು ಅಮ್ಲೀಯವಾಗುತ್ತದೆ. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಹುಳುಗಳು ಕಡಿಮೆಯಾಗುತ್ತವೆ. ಮಣ್ಣು ಗಟ್ಟಿಯಾಗುತ್ತದೆ ಮತ್ತು ನೀರು ಹಿಡಿಯುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದಿದ್ದಾರೆ.