ವಾಲ್ಮೀಕಿ ಸಮಾಜ ಜಯಂತಿ ಜತೆ ಶೈಕ್ಷಣಿಕ ಪ್ರಗತಿ ಹೊಂದಲಿ: ಶಾಸಕ ಕೃಷ್ಣಮೂರ್ತಿ

KannadaprabhaNewsNetwork |  
Published : Nov 26, 2026, 02:00 AM IST
24ಕೆಜಿಎಲ್ 33ಕೊಳ್ಳೇಗಾಲದಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಮೆರವಣಿಗೆ ಕಾರ್ಯಕ್ರಮದಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ ಇನ್ತಿರ ಗಣ್ಯರು ಪಾಲ್ಗೊಂಡರು. ಕೊಪ್ಪಾಳಿನಾಯಕ, ಪಾಳ್ಯ ಕೃಷ್ಣ, ಸಿದ್ದರಾಜು, ಜಗದೀಶನಾಯಕು ಇನ್ನಿತರಿದ್ದರು. | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿಯವರು ಜನ್ಮತಾಳಿದ ದಿನದಂದೇ ಅವರ ಜಯಂತಿಯನ್ನು ಸಮಾಜ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದು ಶ್ಲಾಘನೀಯ ಬೆಳವಣಿಗೆ, ಅವರ ಜಯಂತಿ ಜತೆ ಸಮಾಜ ಶೈಕ್ಷಣಿಕವಾಗಿ ಪ್ರಗತಿ ಹೊಂದುವಂತಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಹರ್ಷಿ ವಾಲ್ಮೀಕಿಯವರು ಜನ್ಮತಾಳಿದ ದಿನದಂದೇ ಅವರ ಜಯಂತಿಯನ್ನು ಸಮಾಜ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದು ಶ್ಲಾಘನೀಯ ಬೆಳವಣಿಗೆ, ಅವರ ಜಯಂತಿ ಜತೆ ಸಮಾಜ ಶೈಕ್ಷಣಿಕವಾಗಿ ಪ್ರಗತಿ ಹೊಂದುವಂತಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಮಹರ್ಷಿ ಶ್ರೀ ವಾಲ್ಮೀಕಿ ಜಯಂತ್ಯತ್ಸವದ ಅಂಗವಾಗಿ ಅದ್ದೂರಿಯಾಗಿ ಬೆಳ್ಳಿ ರಥೋತ್ಸವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಇಂದು ಅದ್ದೂರಿ ಮೆರವಣಿಗೆ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಸಂವಿಧಾನದ ಆಶಯಗಳು ಜಾರಿಗೆ ಬಂದು ದಶಕಗಳೇ ಸಂದರೂ ಸಹಾ ಇನ್ನು ಸಮಾನತೆ ಸಿಕ್ಕಿಲ್ಲ, ಶೋಷಣೆ ತಪ್ಪಿಲ್ಲ ಎಂದು ವಿಷಾಧಿಸಿದ ಶಾಸಕರು ಹಿಂದುಳಿದ ಸಮಾಜಗಳು ಇನ್ನು ಹೆಚ್ಚಿನ ನಿಟ್ಟಿನಲ್ಲಿ ಪ್ರಬುದ್ದತೆಗೆ ಬರಬೇಕು, ತುಳಿತಕ್ಕೊಳಗಾದವರು, ಅನ್ಯಾಯದ ವಿರುದ್ದ ಧ್ವನಿಯಾಗಲು ಸಮುಧಾಯಗಳು ಸಂಘಟಿತರಾಗಬೇಕು, ಮಹರ್ಷಿಗಳನ್ನುಸ್ಮರಿಸುವ ಜೊತೆ ಜೊತೆಗೆ ಎಲ್ಲರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಕಿಂಚಿತ್ತಾದರೂ ಅಳವಡಿಸಿಕೊಳ್ಳುವಂತಾಗಬೇಕು ಎಂದರು.

ಅದ್ದೂರಿ ಮೆರವಣಿಗೆ:

ಮಹರ್ಷಿ ಶ್ರೀ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಅದ್ದೂರಿಯಾಗಿ ಬೆಳ್ಳಿ ರಥೋತ್ಸವ ಮೆರವಣಿಗೆ ನಡೆಯಿತು. ಗಡಿಮನೆ, ಕಟ್ಟೆಮನೆ, ಕಸಬಾಮನೆ ಯಜಮಾನರು, ಕುಲಬಾಂದವರು ಹಾಗೂ ಗ್ರಾಮಾಂತರ ಯಜಮಾನರುಗಳು, ಕುಲಸ್ಥರು, ತಾಲ್ಲೂಕು ನಾಯಕರ ಸಂಘದ ಪದಾಧಿಕಾರಿಗಳು, ಮುಖಂಡರು ಮೆರವಣಿಗೆಯುದ್ದಕ್ಕೂ ಸಾಗಿ ಗಮನ ಸೆಳೆದರು. ನಾಯಕರ ಸಮುದಾಯ ಭವನದಲ್ಲಿ ಅಲಂಕೃತಗೊಂಡಿದ್ದ ಬೆಳ್ಳಿರಥಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಆರಂಭದಲ್ಲಿ ಚಾಲನೆ ನೀಡಿದರು.

ಬಳಿಕ ಪಟ್ಟಣದ ಐಬಿ ರಸ್ತೆ, ಎಡಿಬಿ ವೃತ್ತ, ಡಾ.ಅಂಬೇಡ್ಕರ್ ರಸ್ತೆ, ಚಿನ್ನ ಬೆಳ್ಳಿ ರಸ್ತೆ, ಚಿಕ್ಕನಾಯಕರ ಬೀದಿಯ ಮೂಲಕ ವಾಲ್ಮೀಕಿ ವೃತ್ತ ತಲುಪಿತ್ತು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಬ್ಯಾಂಡ್ ಸೆಟ್ ತಮಟೆ, ಗಾರುಡಿ ಗೊಂಬೆ, ಮಂಗಳವಾದ್ಯ, ರಾಮ, ಲಕ್ಷ್ಮಣ, ಆಂಜನೇಯ ವೇಷಧಾರಿಗಳು ಮೆರವಣಿಗೆಯುದ್ದಕ್ಕೂ ಗಮನ ಸೆಳೆದರು. ಡೊಳ್ಳು ಕುಣಿತ ಶಬ್ದಕ್ಕೆ ಯುವಕರು, ಮುಖಂಡರು ಕುಣಿದು ಕುಪ್ಪಳಿಸಿದರು. ಯುವಕರು, ಸಮಾಜದ ಮುಖಂಡರು ಮೆರವಣಿಗೆ ವೇಳೆ ಹೆಜ್ಜೆ ಹಾಕಿ ನರ್ತಿಸುವ ಮೂಲಕ ಗಮನ ಸೆಳೆದರು

ಮಾಜಿ ಶಾಸಕ ಆರ್.ನರೇಂದ್ರ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಲೈಮಹದೇಶ್ವರ ಬೆಟ್ಟ ಪ್ರಾಧಿಕಾರ ಸದಸ್ಯ ತೋಟೇಶ್, ನಗರಸಭೆ ಮಾಜಿ ಅಧ್ಯಕ್ಷ ಸೆಲ್ವರಾಜು, ತಾಲೂಕು ಅಧ್ಯಕ್ಷ ಜಗದೀಶ್ ನಾಯಕ, ಕಾರ್ಯದರ್ಶಿ ಶಾಂತರಾಜು, ಜಿಪಂ ಮಾಜಿ ಅಧ್ಯಕ್ಷ ಶಿವಮ್ಮ ಕೃಷ್ಣ, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ, ಪಾಳ್ಯ ಕೃಷ್ಣ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಸುಂದರ್, ನಾಯಕ ಜನಾಂಗದ ಕಸಬಾ ಯಜಮಾನ ಚಿಕ್ಕಮಾದನಾಯಕ, ಸುಂದರನಾಯಕ, ಈಶ್ವರ, ಮಹದೇವ ನಾಯಕ, ಸುರೇಂದ್ರ, ವೆಂಕಟರಮಣ, ಶಾಂತರಾಜು, ರಾಜೇಶ್, ಗೋವಿಂದರಾಜು, ಶಂಕರ, ಗಡಿ ಮನೆ ಪ್ರಸಾದ್ ನಾಯಕ, ವೆಂಕಟಾಚಲ, ಮೂರ್ತಿ, ಕಟ್ಟೆ ಮನೆ ಮುಕುಂದನಾಯಕ, ಜಗದೀಶ್ ನಾಯಕ, ದೊಡ್ಡ ಸೀಗನಾಯಕ, ವಿಶ್ವಮೂರ್ತಿ ನಾಯಕ, ಕುನ್ನನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯರಾಮ್, ಬಿಜೆಪಿ ಮುಖಂಡ ಡಾ.ದತ್ತೇಶ್ ಕುಮಾರ್, ಗ್ಯಾರಂಟಿ ಸಮಿತಿಯ ಉದ್ದನೂರು ಸಿದ್ದರಾಜು, ಚೇತನ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಯೂನಿಟ್‌ ರಕ್ತ ಸಂಗ್ರಹಿಸುವ ಗುರಿ
ವಿಕೆಗೆ ಬರಸಿಡಿಲು ನೀಡಿದ ಸುಪ್ರೀಂ ಆದೇಶ!