ಕನ್ನಡಪ್ರಭ ವಾರ್ತೆ ಕಲಬುರಗಿ:
ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಕಲಬುರಗಿಯಲ್ಲಿ ಬುಧವಾರ ಬಿಜೆಪಿ ವತಿಯಿಂದ ನಡೆದ ‘ಲೋಕತಂತ್ರ ಉಳಿಸಿ ಅರಾಜಕತೆ ಅಳಿಸಿ’ ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರಾಜನಾಥ್ ಸಿಂಗ್ ಪಾಲ್ಗೊಂಡರು. ಈ ವೇಳೆ ಮಾತನಾಡಿ, ಕಾಂಗ್ರೆಸ್, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಚುನಾವಣಾ ಆಯೋಗದ ಆಯುಕ್ತರು ಬಿಜೆಪಿ ಪರ ಎಂದು ಕಾಂಗ್ರೆಸ್‌ನವರು ಗುಲ್ಲೆಬ್ಬಿಸುತ್ತಿದ್ದಾರೆ. ಆದರೆ 13 ವರ್ಷಗಳ ಹಿಂದೆ ಈ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿಯಾದಾಗ ಇದ್ದ ಚುನಾವಣಾ ಆಯುಕ್ತರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೇಮಕವಾಗಿದ್ದವರು. ಲೋಕತಂತ್ರ ಕಮ್‌ಜೋರ್ ಮಾಡುವ ಕೆಲಸ ಕೈಬಿಟ್ಟು ದೇಶದ ಏಕತೆಗೆ ಎಲ್ಲರೂ ಕೈ ಜೋಡಿಸೋಣ. ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯವರು. ಹೀಗಾಗಿ, ಕಲಬುರಗಿಯನ್ನು ಖರ್ಗೆ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಆದರೆ, ಇಲ್ಲಿಯೂ ಪಾದಯಾತ್ರೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.ನಗರದ ಸೂಪರ್ ಮಾರ್ಕೆಟ್‌ನಿಂದ ಯಲ್ಲಮ್ಮ ಮಂದಿರ ಕೆರೆ ರಸ್ತೆಯವರೆಗೂ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ನಡೆದಿತ್ತು. ರಾಜನಾಥ್ ಸಿಂಗ್ ಭಾಷಣ ಬಳಿಕ ಮತ್ತೆ ಯಲ್ಲಮ್ಮ ಮಂದಿರದಿಂದ ಜಗತ್ ವೃತ್ತದವರೆಗೂ ಬಿಜೆಪಿ ಮುಖಂಡರು ರಕ್ಷಣಾ ಸಚಿವರ ಉಪಸ್ಥಿತಿಯಲ್ಲಿ ಪಾದಯಾತ್ರೆ ನಡೆಸಿ ಜನಮನ ಸೆಳೆದರು.------ಕೋಟ್--------
- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ.