ನೆಲಮಂಗಲ: ರೈತರು ಸಂಘದಲ್ಲಿ ದೊರೆಯುವ ಸೌಲಭ್ಯಗಳನ್ನು ಸದ್ಬಳಸಿಕೊಂಡು ಅರ್ಥಿಕ ಸದೃಢರಾಗಬೇಕು ಎಂದು ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ರಾಮಸ್ವಾಮಿ ತಿಳಿಸಿದರು
ನೆಲಮಂಗಲ: ರೈತರು ಸಂಘದಲ್ಲಿ ದೊರೆಯುವ ಸೌಲಭ್ಯಗಳನ್ನು ಸದ್ಬಳಸಿಕೊಂಡು ಅರ್ಥಿಕ ಸದೃಢರಾಗಬೇಕು ಎಂದು ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ರಾಮಸ್ವಾಮಿ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕಿನ ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಗೋಪಾಲಪುರ ಸೊಸೈಟಿ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಪ್ರಾಥಮಿಕ ಸಹಕಾರ ಸಂಘಕ್ಕೆ ಸೇರಿತ್ತು. 8 ವರ್ಷಗಳ ಕಾಲ ಯಾವುದೇ ಸಾಲ ಸೌಲಭ್ಯ ರೈತರಿಗೆ ದೊರೆತಿರಲಿಲ್ಲ. ಬಳಿಕ ಕಳೆದ 2013ರಲ್ಲಿ ಗ್ರಾಪಂ ಅಧ್ಯಕ್ಷನಾಗಿದ್ದ ವೇಳೆ ರೈತರ ಸಹಕಾರದಿಂದ 2 ಲಕ್ಷ ಷೇರು ಪಾವತಿಸಿ ಸಂಘವನ್ನು ಆರಂಭಿಲಾಯಿತು. ಈ ಹಿಂದೆ ಕೆಲವರು ಸಂಘ ಮುಚ್ಚುತ್ತದೆ ಎಂದು ಟೀಕೆ ಮಾಡಿದ್ದರು. ಅದರೆ ಸಂಘ ಪ್ರಸ್ತುತ ವರ್ಷದಲ್ಲಿ ಸುಮಾರು ₹7.5 ಕೋಟಿಯಷ್ಟು ವಹಿವಾಟು ನಡೆಸುತ್ತಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಕುಮಾರ್ ಮಾತನಾಡಿ, ಬೆಂಗಳೂರು ಉತ್ತರ ತಾಲೂಕಿನಲ್ಲಿ ಗೋಪಾಲಪುರ ಸಂಘ ಅರ್ಥಿಕವಾಗಿ ಉನ್ನತ ಮಟ್ಟದಲ್ಲಿ ಮುನ್ನಡೆಯುತ್ತಿದೆ. ಬಿಡಿಸಿಸಿ ಬ್ಯಾಂಕ್‌ನಿಂದ ಹಸು, ಕುರಿ, ಕೋಳಿ, ವಾಹನ ಸಾಲ ಹಾಗೂ ಅಡಮಾನ ಸಾಲ ನೀಡುತ್ತಿದೆ ಎಂದರು.
ಸವಲತ್ತು ವಿತರಣೆ:
ಗೋಪಾಲಪುರ ಸಹಕಾರ ಸಂಘದ ಸದಸ್ಯರಿಗೆ ₹1 ಕೋಟಿ ಬೆಳೆ ಸಾಲ, ಯಶಸ್ವಿನಿ ಕಾರ್ಡ್, ರೈತರಿಗೆ ಪಶು ಆಹಾರ, ವೃದ್ಧರಿಗೆ ಊರುಕೋಲು, ರೈತರಿಗೆ ಬಿತ್ತನೆ ರಾಗಿ ಸೇರಿ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ವಿಸಿಎನ್‌ಆರ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸೀಮಂತ - ಪ್ರತಿಭಾ ಪುರಸ್ಕಾರ
ಸಂಘದಿಂದ ಗೋಪಾಲಪುರ ಗ್ರಾಪಂ ವ್ಯಾಪ್ತಿಯ 40 ಗರ್ಭಿಣಿಯರಿಗೆ ಮಡಿಲು ತುಂಬಿ ಸೀಮಂತ ಕಾರ್ಯ ನೆರವೇರಿಸಲಾಯಿತು. ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಸಿಎನ್‌ಆರ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿನಯ್‌ಕುಮಾರ್, ಸಂಘದ ಉಪಾಧ್ಯಕ್ಷ ಕೆಂಪರಾಜು, ನಿರ್ದೇಶಕ ರಾಜಗೋಪಾಲ್, ಜಯಲಕ್ಷ್ಮೀ, ಭಾಗ್ಯಮ್ಮ, ಜಯಮ್ಮ, ನಾಗರತ್ನಮ್ಮ, ಗೋಪಾಲಕೃಷ್ಣ, ಮಹದೇವಯ್ಯ, ರಾಮಾಂಜಿನಯ್ಯ, ಕೃಷ್ಣಪ್ಪ, ರವಿಕುಮಾರ್, ಸಿಇಒ ಜಿ.ಬೈಲಮೂರ್ತಿ, ಸಿಬ್ಬಂದಿ ಮನೋಜ್, ನೇತ್ರಾವತಿ, ಪುಟ್ಟಹುಚ್ಚಮ್ಮ ಮತ್ತಿತರರು ಉಪಸ್ಥಿತರಿದ್ದರು.
ಪೊಟೊ-22ಕೆಎನ್‌ಎಲ್‌ಎಮ್2-
ಬೆಂಗಳೂರು ಉತ್ತರ ತಾಲೂಕಿನ ಗೋಪಾಲಪುರ ಸಹಕಾರ ಸಂಘ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.