ಬರದ ಚರ್ಚೆ ವೇಳೆ ವಿದೇಶದಲ್ಲಿ ಕುಳಿತ ದಾವಣಗೆರೆ ಉಸ್ತುವಾರಿ ಸಚಿವ: ಹರೀಶ್‌

KannadaprabhaNewsNetwork |  
Published : Sep 25, 2026, 02:00 AM IST
24ಕೆಎಂಎನ್ ಡಿ13 | Kannada Prabha

ಸಾರಾಂಶ

ದಾವಣಗೆರೆ ಜಿಲ್ಲೆ ಉಸ್ತುವಾರಿ ಸಚಿವರೂ ಆಗಿರುವ ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು ಕಳೆದ ಮೂರು ವರ್ಷದಲ್ಲಿ ಎಷ್ಟು ದಿನ ರಾಜ್ಯ ಹಾಗೂ ಎಷ್ಟು ದಿನ ವಿದೇಶದಲ್ಲಿ ಇದ್ದರು ಎಂಬುದನ್ನು ಈ ಸದನದ ಗಮನಕ್ಕೆ ತರಬೇಕು ಎಂದು ಬಿಜೆಪಿ ಸದಸ್ಯ ಬಿ.ಪಿ.ಹರೀಶ್‌ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.

- ಎಸ್.ಎಸ್‌.ಮಲ್ಲಿಕಾರ್ಜುನ್‌ ವಿರುದ್ಧ ಬಿಜೆಪಿ ಶಾಸಕ ಕಿಡಿ

- - - ಕನ್ನಡಪ್ರಭ ವಾರ್ತೆ ವಿಧಾನಸಭೆ

ದಾವಣಗೆರೆ ಜಿಲ್ಲೆ ಉಸ್ತುವಾರಿ ಸಚಿವರೂ ಆಗಿರುವ ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು ಕಳೆದ ಮೂರು ವರ್ಷದಲ್ಲಿ ಎಷ್ಟು ದಿನ ರಾಜ್ಯ ಹಾಗೂ ಎಷ್ಟು ದಿನ ವಿದೇಶದಲ್ಲಿ ಇದ್ದರು ಎಂಬುದನ್ನು ಈ ಸದನದ ಗಮನಕ್ಕೆ ತರಬೇಕು ಎಂದು ಬಿಜೆಪಿ ಸದಸ್ಯ ಬಿ.ಪಿ.ಹರೀಶ್‌ ವಿಧಾನಸಭೆಯಲ್ಲಿ ಆಗ್ರಹಿಸಿದರು.

ಗುರುವಾರ ಬರಗಾಲ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೆಲ ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಕೆಲ ರೈತರು ಜಿಲ್ಲೆಯ ನೀರಾವರಿ ಬಗ್ಗೆ ಕೇಳಿದಾಗ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರು ನನ್ನ ಬಗ್ಗೆ ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ. ನನ್ನ ತಂದೆ-ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಕನಿಷ್ಠ ನನ್ನ ಕ್ಷಮೆ ಸಹ ಕೇಳಿಲ್ಲ. ರಾಜ್ಯದ ಬರಗಾಲದ ಬಗ್ಗೆ ವಿಶೇಷ ಅಧಿವೇಶನ ನಡೆಯುತ್ತಿದೆ. ಆದರೆ, ಉಸ್ತುವಾರಿ ಸಚಿವರು ವಿದೇಶದಲ್ಲಿ ಕುಳಿತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಲ್ಲಿ ಅವರು ಎಷ್ಟು ದಿನಗಳ ಕಾಲ ರಾಜ್ಯ, ದೇಶ, ವಿದೇಶದಲ್ಲಿದ್ದಾರೆ ಎಂದು ಈ ಸದನದ ಗಮನಕ್ಕೆ ತರಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಅವರಿಗೆ ಜಿಲ್ಲೆ ಬಗ್ಗೆ, ರೈತರ ಬಗ್ಗೆ ಕಾಳಜಿ ಇಲ್ಲ. ನೀರು ಕೇಳಿದರೆ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಇದೇನು ದೌರ್ಜನ್ಯನಾ? ಜಿಲ್ಲೆಯ ಜನ ಯಾರ ಮುಂದೆ ಸಮಸ್ಯೆಗಳನ್ನು ಹೇಳಬೇಕು. ಬರಗಾಲದ ಬಗ್ಗೆ ಚರ್ಚಿಸುವಾಗಲೂ ಅವರು ಸದನಕ್ಕೆ ಬಾರದಿದ್ದರೆ ಏನು ಮಾಡಬೇಕು ಎಂದು ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ಪರಿಹಾರ ಕಾಮಗಾರಿ ಕೈಗೊಳ್ಳಿ: ಪ್ರದೀಪ ಶೆಟ್ಟರ್‌
ರೈತರ ಬಿತ್ತನೆಗೆ ಬಿಸ್ಮಿಲ್ಲಾಹ ಬಲ: 28ಕ್ಕೂ ಹೆಚ್ಚು ಹೊಸ ಯಂತ್ರಗಳ ಸಿದ್ಧತೆ