ಗಾಂಧೀಜಿ ಆದರ್ಶಗಳು ಯುವ ಜನಾಂಗಕ್ಕೆ ತಲುಪಲಿ

KannadaprabhaNewsNetwork |  
Published : Oct 04, 2024, 01:16 AM IST
ಪೊಟೋ ಅ.3ಎಂಡಿಎಲ್ 4ಎ. ಕಾನಿಪ ಮತ್ತು ಕಸಾಪ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಗಾಂಧೀಜಿ, ದಿ.ತಿಮಸಾನಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು.ಪೊಟೋ ಅ.3ಎಂಡಿಎಲ್ 4ಬಿ, ಲೋಕಾಪೂರದ ಮಂಜುಳಾ ಸಂಬಾಳದ ಸಂಗಡಿಗರು ಗಾಂಧೀ ಭಜನ್ ಹೇಳಿದರು. | Kannada Prabha

ಸಾರಾಂಶ

ಅಹಿಂಸೆ ತತ್ವ ಆಧಾರದ ಮೇಲೆ ಬ್ರೀಟಿಷರ್ ವಿರುದ್ಧ ಹೋರಾಟ ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರು ಹಿಂಸೆಯಿಂದಲೇ ಸಾವನ್ನಪ್ಪಬೇಕಾಯಿತು. ಇದು ವಿಪರ್ಯಾಸವಲ್ಲವೇ ಎಂದು ಅರಸಿಕೇರಿ ಕೋಡಿಮಠ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಬಿ.ಡಿ.ಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಅಹಿಂಸೆ ತತ್ವ ಆಧಾರದ ಮೇಲೆ ಬ್ರೀಟಿಷರ್ ವಿರುದ್ಧ ಹೋರಾಟ ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರು ಹಿಂಸೆಯಿಂದಲೇ ಸಾವನ್ನಪ್ಪಬೇಕಾಯಿತು. ಇದು ವಿಪರ್ಯಾಸವಲ್ಲವೇ ಎಂದು ಅರಸಿಕೇರಿ ಕೋಡಿಮಠ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಬಿ.ಡಿ.ಕುಮಾರ ಹೇಳಿದರು.

ಸ್ಥಳೀಯ ಕಸಾಪ ಭವನದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ದಿ.ಸೀತಾಬಾಯಿ ಬಸಪ್ಪ ತಿಮಸಾನಿ ದಂಪತಿ ಸ್ಮರಣಾರ್ಥ 22ನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಆದರ್ಶಗಳು, ತತ್ವಗಳು, ಮೌಲ್ಯಗಳು, ವಿಚಾರ ಧಾರೆಗಳು ಇಂದಿನ ಯುವ ಜನಾಂಗಕ್ಕೆ ತಲುಪಿಸುವುದು ಅತೀ ಅವಶ್ಯಕವಾಗಿದೆ ಎಂದರು.ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಾಪೂರದ ಮಂಜುಳಾ ಸಂಬಾಳದ ಹಾಗೂ ಸಂಗಡಿಗರು ಗಾಂಧಿ ಭಜನ ನಡೆಸಿಕೊಟ್ಟರು. ಚಂದ್ರಶೇಖರ ದೇಸಾಯಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವೆಂಕಟೇಶ ಗುಡೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳಾದ ದಯಾನಂದ ಎಸ್.ಪಾಟೀಲ ದಂಪತಿ ಸೇರಿದಂತೆ ಕಾನಿಪ, ಕಸಾಪ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು, ಹಿರಿಯ-ಕಿರಿಯ ನಾಗರಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ