ನಾಡಿನ ಸಮಸ್ತ ಜನತೆಗೆ ಹಾಗೂ ಜಿಲ್ಲೆಯ ನಾಗರಿಕರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಶಿವಮೊಗ್ಗ: ನಾಡಿನ ಸಮಸ್ತ ಜನತೆಗೆ ಹಾಗೂ ಜಿಲ್ಲೆಯ ನಾಗರಿಕರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ವಿಘ್ನಗಳನ್ನು ದೂರ ಮಾಡಿ, ಹೊಸ ಭರವಸೆಗಳಿಗೆ, ಹೊಸ ಆಶಯಗಳಿಗೆ ದಾರಿ ತೋರುವ ಗಣಪತಿಯ ಕೃಪೆ ಎಲ್ಲರ ಮೇಲಿರಲಿ, ಈ ಗೌರಿ-ಗಣೇಶ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ನೆಮ್ಮದಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಬ್ಬದ ಹಾರೈಕೆಗಳನ್ನು ತಿಳಿಸಿದ್ದಾರೆ.ಗೌರಿ ತೃತೀಯ ಮತ್ತು ಗಣೇಶ ಚತುರ್ಥಿ ಹಬ್ಬ, ಜಗನ್ಮಾತೆಯ ಮತ್ತು ಸಿದ್ದಿ ವಿನಾಯಕನ ವಿಶೇಷ ಪೂಜೆ, ಪ್ರಾರ್ಥನೆಗಳ ಜೊತೆಗೆ ನಮ್ಮ ಮನೆ-ಮನಗಳನ್ನು ಬೆಸೆಯುವ, ಕುಟುಂಬದ ಬಂಧವನ್ನು ಗಟ್ಟಿಗೊಳಿಸುವ ಹಾಗೂ ನಮ್ಮ ಸಂಸ್ಕೃತಿ, ಪರಂಪರೆಯ ಸೊಬಗನ್ನು ಸಾರುವ ಪವಿತ್ರ ಹಬ್ಬ. ತಾಯಿ ಗೌರಿಯ ಕೃಪೆ ಹಾಗೂ ವಿಘ್ನವಿನಾಯಕ ಗಣಪತಿಯ ಅನುಗ್ರಹದಿಂದ ಪ್ರತಿಯೊಂದು ಕುಟುಂಬದಲ್ಲೂ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ವಿಶೇಷವಾಗಿ, ಬರಗಾಲ, ಮಳೆಯ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯ ರೈತರು ಹಾಗೂ ಜನತೆಯ ಸಂಕಷ್ಟಗಳು ಬೇಗನೆ ಪರಿಹಾರವಾಗಲಿ, ವಿನಾಯಕನ ಕೃಪೆಯಿಂದ ಉತ್ತಮ ಮಳೆಯಿಂದ ಜನರು, ಜಾನುವಾರುಗಳಿಗೆ ಸಮೃದ್ಧಿ ಮತ್ತು ನೆಮ್ಮದಿ ದೊರೆಯಲಿ, ನಾಡು ಹಸಿರಿನಿಂದ ಕಂಗೊಳಿಸಲಿ ಎಂದು ಶುಭ ಹಾರೈಸಿದ್ದಾರೆ.ಶಿವಮೊಗ್ಗ ಸೇರಿದಂತೆ ಮಲೆನಾಡಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ, ಭಕ್ತಿ-ಭಾವದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬಕ್ಕೂ ನನ್ನ ಭಕ್ತಿಪೂರ್ವಕ ಶುಭಕಾಮನೆಗಳು. ನಮ್ಮ ಗ್ರಾಮ, ಊರು, ಜಿಲ್ಲೆ ಮತ್ತು ನಮ್ಮ ನಾಡಿನ ಅಭಿವೃದ್ಧಿ, ನಮ್ಮ ರೈತರು ಮತ್ತು ದುಡಿಯುವ ಜನರ ಬದುಕಿನಲ್ಲಿ ಇನ್ನಷ್ಟು ಬೆಳಕು, ಯುವಜನರಿಗೆ ಹೊಸ ಅವಕಾಶಗಳು, ಮಹಿಳೆಯರಿಗೆ ಹೆಚ್ಚಿನ ಶಕ್ತಿ ಹಾಗೂ ನಮ್ಮ ಶಿವಮೊಗ್ಗದ ಸಮಗ್ರ ಪ್ರಗತಿಗೆ ಈ ಹಬ್ಬ ಹೊಸ ಶುಭಾರಂಭದ ಸಂಕೇತವಾಗಲಿ ಎಂದು ಸಂಸದ ರಾಘವೇಂದ್ರ ಹಾರೈಸಿದ್ದಾರೆ. ಹಾಗೆಯೇ, ಸಾರ್ವಜನಿಕವಾಗಿ ಗೌರಿ-ಗಣೇಶ ಹಬ್ಬವನ್ನು ಭಕ್ತಿ-ಸಂಭ್ರಮಗಳಿಂದ ಎಲ್ಲರೂ ಕೂಡಿ ಹೆಮ್ಮೆಯಿಂದ ಆಚರಿಸೋಣ, ಈ ಹಬ್ಬ ಸಮಾಜದಲ್ಲಿ ಏಕತೆ, ಸಹೋದರತ್ವ ಮತ್ತು ಸೌಹಾರ್ದತೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಶುಭ ಕೋರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.